ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ 75ನೇ ವರ್ಷದ ಅಮೃತ ಮಹೋತ್ಸವ ದಾವಣಗೆರೆ ನಗರದಲ್ಲಿ ನಡೆಯುತ್ತಲಿದ್ದು, ರಾಜ್ಯಾದ್ಯಂತ ಸಿದ್ದರಾಮಯ್ಯನವರ ಅಭಿಮಾನಿಗಳು ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ 3ನೇ ತಾರೀಖು ಕಾರ್ಯಕ್ರಮ ಮುಗಿದ ಸಂಜೆ 4-30 ಗಂಟೆಗೆ ಶ್ರೀ ಸಿದ್ದರಾಮಯ್ಯನವರು ಹರಿಹರ, ಬೆಳ್ಳೂಡಿ, ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಶ್ರೀ ಕನಕ ಗುರುಪೀಠಕ್ಕೆ ಭೇಟಿ ನೀಡಲಿದ್ದಾರೆ.
ಜಗದ್ಗುರುಗಳು ಮೀಡಿಯಾದ ಮೂಲಕ ಸಾರ್ಥಕತೆಯ 75 ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಬಡವರ ಭಾಗ್ಯವಿಧಾತ ಸಿದ್ದರಾಮಯ್ಯನವರಿಗೆ ಶುಭ ಹಾರೈಸಿದ್ದಾರೆ ಹಾಗೂ ಅಮೃತ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶ್ರೀ ಮಠದಲ್ಲಿ “ದಾಸೋಹ”ವನ್ನು ಏರ್ಪಡಿಸಲಾಗಿದೆ ಎಂಬುದನ್ನು ತಿಳಿಸಿದ್ದಾರೆ.
ವರದಿ :
ರಾಜು ಮೌರ್ಯ ದಾವಣಗೆರೆ
ಅಕ್ಷರ ಮೀಡಿಯಾ
9535630196