ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಗಾಂಧೀಜೀಯವರ ಜೊತೆ ಭಾಗವಹಿಸಿದ್ದ ಹಾವೇರಿ ಜಿಲ್ಲೆಯ ಸಂಗೂರು ಕರಿಯಪ್ಪನವರ ಸ್ಮಾರಕ, ಗಾಂಧೀಜೀಯವರ ಚಿತಾಭಸ್ಮವನ್ನು ಕಾಪಾಡಿಕೊಳ್ಳುವಂತೆ ಕರಿಯಪ್ಪನವರ ಮಗಳು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಸಹ ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತ್ತು.
75 ನೇ ವರ್ಷದ ಅಮೃತ ಮಹೋತ್ಸವದ ಆಚರಣೆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವಂತೆ, ಸ್ಮಾರಕಗಳನ್ನು ಸುರಕ್ಷತವಾಗಿ ಕಾಪಾಡುವಂತೆ ಹಾವೇರಿ ಜಿಲ್ಲಾ ಹಾಲುಮತ ಮಹಾಸಭಾ ಮತ್ತು ಹಾವೇರಿ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಸಂಗೂರ ಗ್ರಾಮದ ಮುಖಂಡರು ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು. ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿಯವರು ಹಾವೇರಿ ನಗರ ಶಾಸಕ ನರಹರು ಓಲೇಕರ್, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ. ಪಾಟೀಲರಿಗೆ ದೂರವಾಣಿಯ ಮೂಲಕ ಗಮನಕ್ಕೆ ತಂದರು.