ಕುರುಬರ ಬಹು ವರ್ಷಗಳ ಎಸ್.ಟಿ.  ಮೀಸಲಾತಿ ಬೇಡಿಕೆಗಾಗಿ ಸರ್ಕಾರಗಳ ಮೇಲೆ ಒತ್ತಡಗಳನ್ನು ಹೇರುತ್ತಾ, ತಾಂತ್ರಿಕವಾಗಿ ಪೂರಕವಾದ ದಾಖಲೆಗಳನ್ನು ಸಂಗ್ರಹಿಸಿ‌, ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ಮಾಡಿಸಿ, ಕುರುಬ  ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕನಕ ಗುರುಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಮತ್ತು ಹಾಲುಮತ ಮಹಾಸಭಾ ನಿರಂತರವಾಗಿ ತೊಡಗಿಸಿಕೊಂಡಿರುವುದರ ಪರಿಣಾಮವಾಗಿ “ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದ್ದು” ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ದಿನಾಂಕ 04-02-2023ರಂದು ಶ್ರೀಕ್ಷೇತ್ರ ಮೈಲಾರದಲ್ಲಿ ನಡೆದ “ಶ್ರೀ ಏಳುಕೋಟಿ ವಸತಿ ನಿಲಯ”ದ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಸಮುದಾಯವನ್ನು ಉದ್ದೇಶಿಸಿ, ಅಧ್ಯಯನದ ವರದಿವನ್ನು ನೋಡಿದ್ದು ಒಂದಷ್ಟು ತಿದ್ದುಪಡಿಗಳನ್ನು ಮಾಡಲು  ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

2017ರಲ್ಲಿ ಕಲಬುರಗಿ, ಯಾದಗಿರಿ, ಬೀದರ ಮೂರು ಜಿಲ್ಲೆಗಳ ಕುರುಬರು ಗೊಂಡರು ಒಂದೇ ಸಮಾನಾರ್ಥ ಪದಗಳೆಂದು ಪರಿಗಣಿಸಿ, ಶಿಫಾರಸ್ಸು ಮಾಡಿದ್ದರು. “ಎರಡು ಬಾರಿ ರಾಜ್ಯಕ್ಕೆ ವಾಪಸ್‌ ಬಂದಿರುತ್ತದೆ. ಆ ರೀತಿ ತಪ್ಪು ಈ ವಿಷಯದಲ್ಲಿ ಆಗಬಾರದೆಂಬ ಕಾರಣಕ್ಕೆ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಾನೂನು ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರಕ್ಕೆ “ಶಿಫಾರಸ್ಸು ” ಮಾಡಬೇಕು. ಕೇಂದ್ರ ಸರ್ಕಾರ ಸಂಸತ್‌ ನ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಅನುಮೋದಿಸಿ, ಶಿಫಾರಸ್ಸು ಮಾಡಬೇಕಿದೆ.

ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸಲಾಗುವುದು ಎಂದು ಸಹ ಸಭೆಗೆ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!