ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟç ನಮ್ಮ ಭಾರತ ದೇಶ, ನಮ್ಮ ಸಂವಿಧಾನದ ಆಶಯದಂತೆ
ಸರ್ಕಾರಗಳು ನಡೆದುಕೊಳ್ಳುವುದನ್ನು ಮರೆತು, ಧರ್ಮ, ಧರ್ಮಗಳ ಜಾತಿ, ಜಾತಿಗಳ ನಡುವೆ ದ್ವೇಷವನ್ನು
ಬಿತ್ತಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಉನ್ನತ ಶಿಕ್ಷಣ ಸಚಿವ
ಡಾ. ಅಶ್ವಥನಾರಾಯಣರವರು, ಸಾರ್ವಜನಿಕ ಸಭೆಯಲ್ಲಿ ಟಿಪ್ಪು ಸುಲ್ತಾನರನ್ನು ಉಲ್ಲೇಖಿಸಿ ಮಾತನಾಡುತ್ತಾ,
ಕರ್ನಾಟಕ ಸರ್ಕಾರದ ವಿರೋಧ ಪಕ್ಷದ ನಾಯಕರು, ಐದು ವರ್ಷಗಳ ಆಡಳಿತ ನಡೆಸಿರುವ ಮಾಜಿ
ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಟಿಪ್ಪು ಸುಲ್ತಾನರ ರೀತಿಯಲ್ಲಿ ಹೊಡೆದು ಹಾಕಬೇಕು
ಎಂಬ ಪ್ರಚೋದನಾಕಾರಿ ಮಾತುಗಳನ್ನು ಆಡಿದ್ದಾರೆ.

ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಟಿಪ್ಪುಸುಲ್ತಾನ್ ಮತ್ತು ಸಾವರ್ಕರ್‌ರನ್ನು ಓಟಿನ ಲಾಭಕ್ಕಾಗಿ
ಬಳಕೆ ಮಾಡಿಕೊಳ್ಳುತ್ತಿರುವುದು ಉರಿಗೌಡರು, ನಂಜೇಗೌಡರು ಟಿಪ್ಪುಸುಲ್ತಾನರನ್ನು ಕೊಂದು ಹಾಕಿದರು
ಎಂಬುದನ್ನು ಉಲ್ಲೇಖಿಸಿ, ಧರ್ಮಗಳ ನಡುವೆ, ಜಾತಿಗಳ ನಡುವೆ ದ್ವೇಷದ ವಾತಾವರಣವನ್ನು ಸೃಷ್ಟಿಸಿರುವ
ಸಚಿವ ಸ್ಥಾನದಲ್ಲಿರುವ ಡಾ. ಅಶ್ವಥನಾರಾಯಣರವರನ್ನು ವಜಾಗೊಳಿಸಬೇಕು. ಸಾರ್ವತ್ರಿಕ ಚುನಾವಣೆಗಳಲ್ಲಿ
ಸ್ಪರ್ಧೆ ಮಾಡದಂತೆ ಸಂಪೂರ್ಣ ನಿಷೇಧ ಹೇರಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು
ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿಯವರು  ಘನತೆವೆತ್ತ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ರವರಿಗೆ  ಮನವಿ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!