ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ
ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು
ಶ್ರೀಕಾಗಿನೆಲೆ ಮಹಾಸಂಸ್ಥಾನ, ಕನಕಗುರುಪೀಠ, ಶ್ರೀಕ್ಷೇತ್ರ ಕಾಗಿನೆಲೆ

ಪೂಜ್ಯರ ಹುಟ್ಟು :
ಆದಿಜಗಕ್ಕೆಲ್ಲ  ಮೊದಲು ಹುಟ್ಟಿದ  ಕುರುಬ ಕುಲದ ಕುಲ  ಗುರುಗಳಾದ   ಮತ್ತು   ಆದಿ  ಜಗದ್ಗುರು  ಶ್ರೀ  ರೇವಣಸಿದ್ದೇಶ್ವರರ ಪರಮ  ಆರಾಧಕರಾಗಿದ್ದ ಚಿತ್ರದುರ್ಗ   ಜಿಲ್ಲೆ,   ಹಿರಿಯೂರು   ತಾಲ್ಲೂಕಿನ  ಹರ್ತಿಕೋಟೆಯ  ಶ್ರೀ ಗುರುಸಿದ್ದಯ್ಯ  ಒಡೆಯರ್  ಮತ್ತು ಶ್ರೀಮತಿ ರುದ್ರಾಯಣಮ್ಮ ದಂಪತಿಯ ಪವಿತ್ರ  ಉದರದಲ್ಲಿ ನಾಲ್ಕನೆಯ  ಮಗುವಾಗಿ  ಶ್ರೀ ರೇವಣ ಸಿದ್ದೇಶ್ವರರ  ಕಾರುಣ್ಯದಿಂದ  10 ಏಪ್ರಿಲ್ 1977ರ “ಶಿವ”ಯೋಗದಲ್ಲಿ ಶ್ರೀವಿಕ್ರಮ  ಸಂವತ್ಸರದ  ಹೊಸ ವಸಂತದಲ್ಲಿ ಅವತರಿಸಿ ಜನ್ಮತಾಳಿದವರು ಜಗದ್ಗುರು  ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು. ಹಾಲುಮತ   ಸಮಾಜದ   ಧರ್ಮಗುರುಗಳಾಗಿದ್ದ ಪೋಷಕರ   ಸಚ್ಚಾರಿತ್ರ್ಯ,  ಸದಾಚಾರ,  ಸಂಸ್ಕಾರ, ಸದ್ಗುಣ,  ನಿಷ್ಕಾಮ  ಕರ್ಮಗಳು  ಬಾಲ್ಯದಲ್ಲಿಯೇ ಶ್ರೀಗಳ  ಮೇಲೆ  ಪ್ರಭಾವ  ಬೀರಿ,  ಅಪ್ಪಟ  ದೈವ ಭಕ್ತರನ್ನಾಗಿಸಲು   ಪೂರ್ವಾಶ್ರಮದ  ಪರಿಸರವೇ ಪ್ರೇರಣೆಯಾಯಿತು.
ಸಂಸ್ಕಾರ :
ಗುರುಮನೆತನದ  ಸಂಸ್ಕಾರಕ್ಕೆ  ಬಾಲ್ಯದಲ್ಲಿ  ನಡೆದ ಒಂದು  ಘಟನೆಯನ್ನು   ಶ್ರೀಗಳು  ನೆನಪಿಸಿಕೊಳ್ಳುತ್ತಿರುತ್ತಾರೆ.   ಬಾಲ್ಯದಲ್ಲಿ  ಅರಿಯದೇ  ಗ್ರಾಮದಲ್ಲಿ ನಿರಂಜನ ಒಡೆಯರ್‍ರು (ಶ್ರೀಗಳ ಪೂರ್ವಾಶ್ರಮದ ಹೆಸರು) ಸ್ನೇಹಿತರೊಂದಿಗೆ ತಿಥಿಯೂಟ  ಮಾಡಿರುವುದು  ಇವರ  ತಂದೆಗೆ ತಿಳಿದು,  ಅವರ ಕೋಪಕ್ಕೆ  ಗುರಿಯಾಗಿ,  ಒಂದು  ದಿನದ ಮಟ್ಟಿಗೆ ಮನೆಯಿಂದ  ಹೊರ  ಹಾಕಿ, ಶ್ರೀರೇವಣಸಿದ್ದೇಶ್ವರ ದೇವಾಲಯಕ್ಕೆ  ಕರೆದುಕೊಂಡು ಹೋಗಿ  ತೀರ್ಥವನ್ನು  ಪ್ರೋಕ್ಷಣೆ   (ಸಾಂಪ್ರಾದಾಯಕವಾಗಿ   ಸೂತಕದ  ಮನೆಗಳಿಂದ ಒಣಪಡಿಗಳನ್ನು    (ಉಲುಪಿ)   ತೆಗೆದುಕೊಳ್ಳುವ ಪದ್ಧತಿ ಇತ್ತು)  ಅಷ್ಟೇನೂ  ಸ್ಥಿತಿವಂತರಲ್ಲದ ಗುರು ಮನೆತನ   ಇವರದಾಗಿದ್ದು,   ಭಕ್ತರು  ಕೊಡುವ ಕಾಣಿಕೆಗಳಿಂದ   ಜೀವನ  ಸಾಗಿಸುತ್ತಿದ್ದ ಸಂದರ್ಭಗಳಲ್ಲಿ ತುಂಬು ಕುಟುಂಬ ಕೆಲವೊಮ್ಮೆ ಮಂಡಕ್ಕಿಯೇ ಊಟವಾಗಿದ್ದ     ಸಂದರ್ಭಗಳನ್ನು    ಮೆಲುಕು ಹಾಕುತ್ತಿರುತ್ತಾರೆ.  ಇಂತಹ  ಕಷ್ಟ ಕಾರ್ಪಣ್ಯಗಳನ್ನು  ಬಾಲ್ಯದಿಂದಲೇ  ಅನುಭವಿಸಿದ್ದ  ಶ್ರೀಗಳು  ಶಿಕ್ಷಣದಿಂದ ದೂರ ಉಳಿಯಲಿಲ್ಲ.
ಶ್ರೀಗಳ ಪ್ರಾಥಮಿಕ ಶಿಕ್ಷಣ :
ಶ್ರೀಗಳು  ತಮ್ಮ  ಪ್ರಾಥಮಿಕ ಶಿಕ್ಷಣ (1ರಿಂದ 7ನೇ ತರಗತಿ)ವನ್ನು  ಹರ್ತಿಕೋಟೆಯಲ್ಲಿ ಪೂರೈಸಿದರು. ಶಿಕ್ಷಣದ  ಸಲಕರಣೆ, ಬಟ್ಟೆಯನ್ನು ತೆಗೆದುಕೊಳ್ಳಲು ಬಾಲ್ಯದಲ್ಲಿಯೇ   ಬಳ್ಳಾರಿ  ಜಾಲಿ  (ಪೀಕ ಜಾಲಿ) ಕಡಿದು ಅದನ್ನು  ತುಂಡರಿಸಿ,  ಊರಲ್ಲಿ ಮಾರಾಟ ಮಾಡಿ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ಸರಿದೂಗಿಸಿಕೊಳ್ಳುತ್ತಿದ್ದ ಕಷ್ಟದ  ದಿನಗಳನ್ನು ಶ್ರೀಗಳು ಅನುಭವಿಸಿರುತ್ತಾರೆ.  ಈ ಮಧ್ಯೆ  ದಾವಣಗೆರೆಯ  ಹಿರಿಯ ರಾಜಕಾರಣಿಯಾದ ಶ್ರೀ  ಕೆ. ಮಲ್ಲಪ್ಪನವರ  ಮತ್ತು ಶ್ರೀಗಳ ತಂದೆಯವರ ಭಾವನಾತ್ಮಕ ಒಡನಾಟದಿಂದ ಆಗ  ತಾನೇ   ಸ್ಥಾಪನೆಯಾಗುತ್ತಿದ್ದ   ಶ್ರೀಕಾಗಿನೆಲೆ ಕನಕ ಗುರುಪೀಠಕ್ಕೆ     ನಿರಂಜನ ಒಡೆಯರ್‍ರನ್ನು   ಮೊದಲನೆಯ   ವಟುವಾಗಿ   “ದತ್ತು”   ನೀಡಲು  ತೀರ್ಮಾನಿಸಿದರು.  ಕುರುಬರ ಶಕ್ತಿಯಾಗಿ,  ಶ್ರೀಭಕ್ತ ಕನಕದಾಸರ   ಅನುಪಾಲಕರಾಗಿ,   ಕುಲಗುರು ಶ್ರೀ ರೇವಣಸಿದ್ದೇಶ್ವರರ  ಆಶೀರ್ವಾದದಿಂದ ಹಿಂದುಳಿದ ಸಮಾಜದ ಜಾಗೃತಿ ಮತ್ತು  ಸಂಘಟನೆಗಾಗಿ ಬಾಲ್ಯದಲ್ಲಿಯೇ   ತಮ್ಮನ್ನು   ತಾನು  ಅರ್ಪಿಸಿಕೊಳ್ಳಲುಶ್ರೀಗಳು   ಸಂತೋಷದಿಂದ  ಮೌನವಾಗಿ  ಒಪ್ಪಿಗೆ ಸೂಚಿಸಿದರು.
ಶ್ರೀಗಳ ಪ್ರೌಢಶಿಕ್ಷಣ ಮತ್ತು ಸನ್ಯಾಸತ್ವದ ಮೊದಲ ಹೆಜ್ಜೆ :
1991 ರಲ್ಲಿ  ವಾಗ್ಧಾನ    ಮಾಡಿದಂತೆ   ಶ್ರೀಗಳ ತಂದೆಯವರು ಶ್ರೀಗಳೊಂದಿಗೆ 1992, ಜನವರಿ 4 ರಂದು ಬೆಂಗಳೂರಿನಲ್ಲಿ ನಡೆದ  ಹರ -ಗುರು -ಚರಮೂರ್ತಿಗಳ    ಧರ್ಮಸಭೆಯಲ್ಲಿ   ಕುರುಬ ಸಮಾಜದ  ಪೀಠಕ್ಕೆ  ಮೊದಲ  ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ  ಬೀರೇಂದ್ರ ಕೇಶವ ತಾರಕನಂದಪುರಿ ಮಹಾಸ್ವಾಮಿಗಳು ನಿರಂಜನ ಒಡೆಯರ್‍ನ್ನು ದತ್ತಕ್ಕೆ  ಪಡೆದು ಬೆಂಗಳೂರಿನ  ಕೈಲಾಸಾಶ್ರಮಕ್ಕೆ   ಹೆಚ್ಚಿನ      ವಿದ್ಯಾಭ್ಯಾಸಕ್ಕೆ      ಕಳುಹಿಸಲಾಯಿತು.  ಉಜ್ಜಲ ತಪಸ್ವಿಗಳು, ಬ್ರಹ್ಮ ಜ್ಞಾನಿಗಳಾದ     ಶ್ರೀ ಜ್ಞಾನಾಕ್ಷಿ   ರಾಜರಾಜೇಶ್ವರಿ ವರಪುತ್ರರಾದ ಶ್ರೀಶ್ರೀಶ್ರೀ ತಿರುಚ್ಚಿಮಹಾಸ್ವಾಮಿಗಳ ಪರಮ ಅಚ್ಚುಮೆಚ್ಚಿನ ಶಿಷ್ಯರಲ್ಲೊಬ್ಬರಾಗಿ ಆಧ್ಯಾತ್ಮಿಕ  ಜ್ಞಾನಧಾರೆಯನ್ನು  ಪಡೆದರು. ಕಡು  ಬಡತನದ  ಕರಿನೆರಳನಲ್ಲಿ  ಜೀವಿಸಿದ್ದರಿಂದ ಆಶ್ರಮದ ಎಲ್ಲಾ ಕಟ್ಟುಪಾಡುಗಳು, ನೀತಿ ನಿಯಮಗಳಿಗೆ ಹೊಂದಿಕೊಂಡು ಮೂರು ವರ್ಷಗಳ ಕಾಲ ಪ್ರೌಢಶಾಲೆಯ   ಶಿಕ್ಷಣವನ್ನು   ಎಂತಹ   ಶುಭ ಸಮಾರಂಭವಿದ್ದರೂ ಪೂರ್ವಾಶ್ರಮಕ್ಕೆ ಹೋಗದೇ ಶಿಕ್ಷಣವನ್ನು ಪೂರೈಸಿದರು. ಸಂಸ್ಕøತ ಅಧ್ಯಯನಕ್ಕಾಗಿ ಹರಿದ್ವಾರಕ್ಕೆ ಪಯಣ ಪ್ರೌಢಶಿಕ್ಷಣದ  ನಂತರ  ಪೂರ್ವಪರ ಯಾವುದೇ ಪರಿಚಯವಿಲ್ಲದ ಹರಿದ್ವಾರಕ್ಕೆ ಸಂಸ್ಕøತ  ಅಧ್ಯಯನಕ್ಕಾಗಿ ಹೊರಡಬೇಕಾಯಿತು.  ಅಲ್ಲಿ  ಸೂಕ್ತ ವಸತಿ ಸೌಕರ್ಯವಿಲ್ಲದೇ ತಂಗುದಾಣಗಳಲ್ಲಿ, ದೇವಾಲಯಗಳಲ್ಲಿ ಆಶ್ರಮಗಳಲ್ಲಿ ಕಷ್ಟ ದಿನಗಳನ್ನು  ಕಳೆಯುತ್ತಾ ಸಾಧುಸಂತರ, ಅಘೋರಿಗಳ ಒಟ್ಟಿಗಿದ್ದು, ಆಧ್ಯಾತ್ಮಿಕ ಹಸಿವು ನೀಗಿಸಿಕೊಳ್ಳುತ್ತಾ ವಿವಿಧ  ಜ್ಞಾನ ಕ್ಷೇತ್ರಗಳ ತಲ ಸ್ಪರ್ಶಿ ಅರಿವು ಹೊಂದುತ್ತಾ ಕಾಲಬದ್ಧ ಶಿಸ್ತನ್ನು ಮೈಗೂಡಿಸಿಕೊಂಡು   ಬಹುಶ್ರುತ   ಪಾಂಡಿತ್ಯವನ್ನು ಪಡೆದರು.   ಹರಿದ್ವಾರದಿಂದಲೇ   ಜಗದ್ಗುರುಗಳಿಗೆ ಶ್ರೀಗಳು ತಮ್ಮ ಶಿಕ್ಷಣ ಹಾಗೂ  ಕುಶಲೋಪರಿಯನ್ನು  ಪತ್ರಗಳ ಮೂಲಕ ಹಂಚಿಕೊಳ್ಳುತ್ತಿದ್ದರು.

ಅಂದು ಶಿಕ್ಷೆ ಇಂದು ಬದುಕು :
ಹುಟ್ಟೂರು   ಹರ್ತಿಕೋಟೆಯಲ್ಲಿ   ತಿಥಿ   ಊಟ ಮಾಡಿದ್ದಕ್ಕೆ  ಒಂದು  ದಿನದ ಮಟ್ಟಿಗೆ ತಂದೆಯವರ ಕೋಪದಿಂದ   ಮನೆಯಿಂದ   ಹೊರಗೆ  ಹಾಕಿಸಿಕೊಳ್ಳುವಂತಹ   ಶಿಕ್ಷೆಗೆ  ಗುರಿಯಾಗಿದ್ದ  ಶ್ರೀಗಳು, ತಿಥಿಯೂಟ,  ದಕ್ಷಿಣೆಯನ್ನೇ ಜೀವನಾಧಾರವನ್ನಾಗಿಸಿಕೊಂಡ  ಸತ್ಯ  ಘಟನೆಗಳನ್ನು ನೆನೆಯುತ್ತಾ, ವಿಧಿ ವಿಪರ್ಯಾಸವಲ್ಲವೇ? ಎಂದು ಸ್ಮರಿಸುತ್ತಾರೆ. “ದೇಶ ಸುತ್ತು ಇಲ್ಲ ಕೋಶ ಓದು” ಎಂಬ ಗಾದೆಯಂತೆ, ಶ್ರೀಗಳು ಬದ್ರಿ, ಕೇದಾರ, ಗಂಗೋತ್ರಿ, ಯಮನೋತ್ರಿ, ಕುರುಕ್ಷೇತ್ರ,   ಕಾಶಿ,    ಮಧುರಾ,   ಬೃಂದಾವನ, ಜಮ್ಮುವಿನ  ವೈಷ್ಣವಿ  ದೇವಸ್ಥಾನಗಳಲ್ಲಿ ತಿಂಗಳುಗಳ ಕಾಲ ತಂಗಿದ್ದು, ನಿಷ್ಕಾಮ ಕರ್ಮಗಳನ್ನು ಮಾಡುತ್ತಾ, ಆಧ್ಯಾತ್ಮಿಕ    ಬದುಕನ್ನು    ಗಟ್ಟಿಗೊಳಿಸಿಕೊಂಡರು. ಶ್ರೀಗಳು ಸಂಸ್ಕøತ, ಹಿಂದಿ, ಕನ್ನಡ, ತಮಿಳು, ತೆಲುಗು, ನೇಪಾಳಿ  ಭಾಷೆಗಳನ್ನು  ಕಲಿತು ವೇದ, ಆಗಮನ, ಶಾಸ್ತ್ರ  ಅಧ್ಯಯನ   ಮಾಡಿ    ಜ್ಞಾನ  ಸಂಪತ್ತನ್ನು ಹೊಂದಿದರು.
ತಾಯ್ನಾಡಿಗೆ ಮರಳಿದ್ದು :
“ತೇನವಿನ ತೃಣಮಪಿ ನಾ ಚಲತಿ – ದೇವರ  ಅನುಗ್ರಹವಿಲ್ಲದೇ  ಒಂದು ಹುಲ್ಲುಕಡ್ಡಿಯು ಅಲುಗಾಡದು” ಎಂಬಮಾತಿನಂತೆ, ಹರಿದ್ವಾರದಲ್ಲಿಯೇ  ನೆಲೆಗೊಳ್ಳಬೇಕೆಂಬುದು   ಶ್ರೀಗಳ   ಸಂಕಲ್ಪವಾಗಿತ್ತು.  ಆದರೆ  ವಿಧಿಯಾಟವೇ  ಬೇರೆಯಾಗಿತ್ತು.  ಶ್ರೀಗಳಿಗೆ ಕಾಡಿದ ಅತಿಯಾದ ಉದರ ಬಾಧೆಯಿಂದ 2000ನೇ ಇಸ್ವಿಯಲ್ಲಿ  ತಾಯ್ನಾಡಿಗೆ ಮರಳುವ ಅನಿವಾರ್ಯತೆ ಬಂದಿತು.
ಸನ್ಯಾಸ ದೀಕ್ಷೆ :
2001 ಮಾರ್ಚ್ 3 ರಂದು  ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಮೊದಲ ಜಗದ್ಗುರುಗಳಾದ  ಶ್ರೀಶ್ರೀಶ್ರೀ ಬೀರೇಂದ್ರ  ಕೇಶವ  ತಾರಕಾನಂದ ಪುರಿ  ಮಹಾಸ್ವಾಮಿಗಳಿಂದ  ಸನ್ಯಾಸ  ದೀಕ್ಷೆ ಪಡೆದು ಶ್ರೀಮಠದ ಕಿರಿಯ   ಸ್ವಾಮಿಜಿಗಳಾಗಿ   ಕುರುಬ  ಸಮಾಜದ ಉದ್ದಾರಕ್ಕಾಗಿ  ಕಂಕಣಬದ್ಧರಾಗಿ  ತಮ್ಮನ್ನು ತಾವು ಸಮರ್ಪಿಸಿಕೊಂಡರು.
ಪ್ರಥಮ ಜಗದ್ಗುರುಗಳ ಕರಕಮಲ ಸಂಜಾತರಾಗಿ ಶ್ರೀಗಳು :
ಪ್ರಥಮ ಜಗದ್ಗುರುಗಳ ಅಚ್ಚು ಮೆಚ್ಚಿನ ಶಿಷ್ಯರಾಗಿದ್ದ ಶ್ರೀಗಳು, ಜಗದ್ಗುರುಗಳು ಕೈಗೊಳ್ಳುವ  ಸಮಾಜ -ಮುಖಿ ಕೈಂಕರ್ಯಗಳಿಗೆ  ಹೆಗಲುಕೊಟ್ಟು ನಿಂತರು. ಶ್ರೀಮಠÀವು    2002 ರಲ್ಲಿ    ದಶಮಾನೋತ್ಸವ ಆಚರಿಸಿತು.     ಈ    ಸಂದರ್ಭದಲ್ಲಿ   ಶ್ರೀಗಳು ಜಗದ್ಗುರುಗಳು    ವಹಿಸಿದ    ಜವಾಬ್ದಾರಿಯನ್ನುಅಚ್ಚುಕಟ್ಟಾಗಿ ನಿರ್ವಹಿಸಿದರು.

ಶಾಖಾಮಠದ ಅಭಿವೃದ್ಧಿಗೆ ಶ್ರೀಗಳ ನೇಮಕ :
ಪ್ರಥಮ  ಜಗದ್ಗುರುಗಳು  ವಯೋವೃದ್ಧ  ಕಾಯಿಲೆಗಳಿಗೆ  ಒಳಗಾಗುತ್ತಿದ್ದರಿಂದ  ಅವರ  ಇಚ್ಛೆಯಿಂದ ಕರ್ನಾಟಕ  ರಾಜ್ಯದ  ನಾಲ್ಕು  ಕಂದಾಯ ವಿಭಾಗಗಳಲ್ಲಿ   ಕನಕ ಗುರುಪೀಠದ   ಶಾಖಾಮಠಗಳನ್ನು ಸ್ಥಾಪಿಸಲು  ನಿರ್ಣಯಿಸಿ,  ಆ ಮಠಗಳಿಗೆ  ನಾಲ್ಕು  ಶ್ರೀಗಳನ್ನು ನೇಮಿಸಿದರು. ಅದರಂತೆ   ಬೆಳಗಾವಿ  ವಿಭಾಗ  14-05-2002 ಬೆಳಗಾವಿ ವಿಭಾಗಕ್ಕೆ  ಪರಮಪೂಜ್ಯ  ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮಿಜಿಯವರನ್ನು ನಿಯೋಜಿಸಲಾಯಿತು.
ಶ್ರೀಕಾಗಿನೆಲೆ ಅಭಿವೃದ್ಧಿಯತ್ತ ಶ್ರೀಗಳ ಚಿತ್ತ :
ಬೆಳಗಾವಿ ವಿಭಾಗದ ಜವಾಬ್ದಾರಿ ಹೊತ್ತ ಪೂಜ್ಯರು ಜಗದ್ಗುರುಗಳ   ಸೇವೆ   ಮಾಡುತ್ತಾ  ಗ್ರಾಮೀಣ
ಪ್ರದೇಶದ  ಪ್ರತಿಯೊಂದು  ಗ್ರಾಮಗಳಿಗೂ  ಭೇಟಿ ನೀಡಿ,  ಸಮಾಜ  ಸಂಘಟನೆಯನ್ನು  ಮಾಡುತ್ತಾ
ಭಕ್ತರಿಂದ   ಜೋಳಿಗೆಯ   ಭಿಕ್ಷೆಯ   ಮೂಲಕ ಕಾಗಿನೆಲೆಯಲ್ಲಿ  ನೂತನ   ಮಠ   ನಿರ್ಮಿಸಿದರು.  ಶ್ರೀಕನಕ – ಕೇಶವ   ರಥೋತ್ಸವ,   ಹಾಲುಮತ  ಇತಿಹಾಸ  ಪುರುಷರ  ಪ್ರವಚನಗಳು,  ಜಾನಪದ  ಕಲಾವೈಭವ  ಸ್ಪರ್ಧೆಗಳನ್ನು  ಏರ್ಪಡಿಸಿ, ಶ್ರೀಕನಕ ಗುರುಪೀಠದ ಅಭಿವೃದ್ಧಿಕ್ಕೆ ಚಾಲನೆ ನೀಡಿದರು.

ಬ್ರಹ್ಮಲೀನರಾದ ಪ್ರಥಮ ಜಗದ್ಗುರುಗಳು :
ಜಗದ್ಗುರುಗಳು ಅನಾರೋಗ್ಯದ  ನಿಮಿತ್ತ ದಿನಾಂಕ 06-07-2006 ರಂದು  ಬೆಂಗಳೂರಿನ  ಶ್ರೀಕನಕ ಗುರುಪೀಠದ ಶಾಖಾಮಠದಲ್ಲಿ ಬ್ರಹ್ಮಲೀನರಾದರು. ಜಗದ್ಗುರುಗಳ ಪಾರ್ಥಿವ ಶರೀರವನ್ನು ಶ್ರೀಕಾಗಿನೆಲೆ  ಮಹಾಸಂಸ್ಥಾನ ಕನಕಗುರುಪೀಠದ ಆವರಣದಲ್ಲಿ ಶಾಖಾ  ಮಠಾಧೀಶರುಗಳ  ನೇತೃತ್ವದಲ್ಲಿ  ಅಂತ್ಯ ಸಂಸ್ಕಾರವನ್ನು ಕೈಗೊಂಡು,   ನಾಡಿನ ಹಿರಿಯರು,  ಪಕ್ಷಾತೀತವಾಗಿ  ರಾಜಕಾರಣಿಗಳು  ಸಾಹಿತಿಗಳು, ಯುವಕರು,  ಗ್ರಾಮಸ್ಥರು   ಸೇರಿದಂತೆ  ಕುರುಬ ಸಮಾಜದ   ಭಕ್ತರು    ಕಾಗಿನೆಲೆಗೆ   ಆಗಮಿಸಿ ಇಡೀ ಭಕ್ತ ಸಮೂಹ ಕಂಬನಿಯನ್ನು ಮಿಡಿಯಿತು. ಪೂಜ್ಯರಿಗೆ ಅಶ್ರುತರ್ಪಣ ಅರ್ಪಿಸಿದರು.

ಪುಣ್ಯಸ್ಮರಣೆ :
ದಿನಾಂಕ 21-7-2006 ರಂದು ಶ್ರೀಕನಕ ಗುರುಪೀಠದ  ಕಿರಿಯ ಸ್ವಾಮಿಜಿಗಳ  ಸಾನಿಧ್ಯದಲ್ಲಿ  ಬ್ರಹ್ಮಲೀನರಾದ
ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕನಂದಪುರಿ  ಮಹಾಸ್ವಾಮಿಗಳಿಗೆ ಭಕ್ತಿಪೂರ್ಣ ಶ್ರದ್ಧಾಂಜಲಿ ಯನ್ನು ಅರ್ಪಿಸಲಾಯಿತು. ಪ್ರತಿವರ್ಷವೂ ಗುರುಪೂರ್ಣಿಮದ ದಿನದಂದು ಬ್ರಹ್ಮಲೀನ ಪ್ರಥಮ ಜಗದ್ಗುರುಗಳಿಗೆ ಪುಣ್ಯಾರಾಧನೆ ಮಾಡಲಾಗುತ್ತಿದೆ.

ಸೌಹಾರ್ದ ಶ್ರೀಕನಕಗುರುಪೀಠದಲ್ಲಿ  ಮೇಧಾವಿ ಪೀಠಾಧಿಪತಿಯಾಗಿ  ಜಗದ್ಗುರುಗಳು :
ಪ್ರಥಮ ಜಗದ್ಗುರುಗಳ ಆಶಯದಂತೆ ಶ್ರೀಕಾಗಿನೆಲೆ ಮಹಾಸಂಸ್ಥಾನ     ಕನಕಗುರುಪೀಠ    ಶ್ರೀಕ್ಷೇತ್ರ
ಕಾಗಿನೆಲೆಯ    ದ್ವಿತೀಯ     ಜಗದ್ಗುರುಗಳಾಗಿ ಶ್ರೀಮಠದ  ಕಿರಿಯ ಸ್ವಾಮಿಜಿಗಳಾದ ಶ್ರೀ ಶ್ರೀ ಶ್ರೀ
ನಿರಂಜನಾನಂದಪುರಿ       ಮಹಾಸ್ವಾಮಿಗಳನ್ನು ಒಕ್ಕೊರಲಿನಿಂದ   ಶ್ರೀಕನಕ   ಗುರುಪೀಠ  ಟ್ರಸ್ಟ್
ಪೀಠಾಧ್ಯಕ್ಷರನ್ನಾಗಿ  ಆಯ್ಕೆ  ಮಾಡಿತು.  ದಿನಾಂಕ 29-10-2006ನೇ ಭಾನುವಾರದಂದು ಶ್ರೀ ಕ್ಷೇತ್ರ
ಕಾಗಿನೆಲೆಯಲ್ಲಿ  ನಾಡಿನ  ಸಾಧು ಸಂತರು  ಹರ-ಚರಮೂರ್ತಿಗಳು,    ಸಮಾಜದ  ಮುಖಂಡರು
ಪಾಲ್ಗೊಂಡು    ಐತಿಹಾಸಿಕ   ಕಾರ್ಯಕ್ರಮದಲ್ಲಿ  ನೂತನ ಜಗದ್ಗುರುಗಳಿಗೆ ಪೀಠಾರೋಹಣ ಮಾಡಿ ಶುಭ  ಕೋರಿದರು.   ನೂತನ   ಜಗದ್ಗುರುಗಳು ಕುಲಗುರು  ಶ್ರೀ  ರೇವಣಸಿದ್ದೇಶ್ವರ,    ಕುಲದೈವ ಶ್ರೀ ಬೀರಲಿಂಗೇಶ್ವರ  ಹಾಗೂ  ದಾಸ ಶ್ರೇಷ್ಟ ಭಕ್ತ
ಕನಕದಾಸರ    ಪೂರ್ಣಾನುಗ್ರಹವನ್ನು   ಪಡೆದು ಸಮಾಜದಲ್ಲಿ   ಪ್ರೀತ್ಯಾಧಾರಗಳನ್ನು    ಗಳಿಸುತ್ತಾ
ಭಕ್ತರಿಗೆ ದಾರಿದೀಪವಾಗಿದ್ದಾರೆ. ನವಚೈತನ್ಯದ,   ಮಾತೃಹೃದಯಿ,   ಕ್ರಿಯಾಶೀಲ
ವ್ಯಕ್ತಿತ್ವದ,  ಕಾಯಕ  ತಪಸ್ವಿಗಳಾದ  ಶ್ರೀ ಶ್ರೀ ಶ್ರೀ  ನಿರಂಜನಾನಂದಪುರಿ   ಸ್ವಾಮಿಜೀಯವರನ್ನು ಎರಡನೇ   ಜಗದ್ಗುರುಗಳನ್ನಾಗಿ   ಹಾಲುಮತ ಸಮಾಜವು ಸ್ವೀಕರಿಸಿ ಪೀಠಾರೋಹಣ ಮಾಡುವ ಅಮೃತ     ಗಳಿಗೆಯನ್ನು    ಕಣ್ತುಂಬಿಕೊಳ್ಳಲು ಕರ್ನಾಟಕ,     ಆಂಧ್ರಪ್ರದೇಶ,    ಮಹಾರಾಷ್ಟ್ರ ರಾಜ್ಯಗಳಿಂದ ಜನಸಾಗರವು ಶ್ರೀಕ್ಷೇತ್ರ ಕಾಗಿನೆಲೆಗೆ ಹರಿದು ಬಂದು ಜನಜಾತ್ರೆಯಾಗಿ  ಮಾರ್ಪಟ್ಟಿತ್ತು. ಹೊಸ   ಜಗದ್ಗುರುವಿನಿಂದ   ಭಕ್ತ   ಸಮೂಹ ಸಮಾಜದ  ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯತಾ ಭಾವ ತಳೆಯಿತು.

ದಿನಾಂಕ 29-10-2006ರಂದು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿಸ್ವಾಮಿಗಳಿಗೆ ಪಟ್ಟಾಭಿಷೇಕವಾದ ಐತಿಹಾಸಿಕ ಸುಸಂದರ್ಭ.

Leave a Reply

Your email address will not be published. Required fields are marked *

error: Content is protected !!