
ಬಾಳುಮಾಮಾನ ತಂದೆ ಮಾಯಪ್ಪ ಅರಭಾವಿ ತಾಯಿ ಸತ್ಯವ್ವ ಸತ್ಯವಳ ತವರೂರು ಚಿಕ್ಕೋಡಿ ತಾಲ್ಲೂಕಿನ ಅಪ್ಪಾಚಿವಾಡಿ ಇದು ಹಾಲಸಿದ್ಧನೆಂಬ ಪ್ರಸಿದ್ಧ ಸಿದ್ಧನ ಸಮಾಧಿ ಕ್ಷೇತ್ರ ಆದ್ದರಿಂದ ಅವಳು ಗ್ರಾಮದ ದೇವತೆಯಾದ ಹಾಲಸಿದ್ಧನ ಭಕ್ತೆಯಾಗಿದ್ದಳು ಮದುವೆಯಾದ ಸ್ವಲ್ಪದರಲ್ಲಿಯೇ ಸತ್ಯವ್ವ ಗಂಡು ಮಗನಿಗೆ ಜನ್ಮ ನೀಡಿದಳು ಅವನಿಗೆ “ಭೈರು” ಎಂದು ಹೆಸರಿಟ್ಟರು 2-3 ವರ್ಷಗಳ ನಂತರ 1892ರ ಅಕ್ಟೋಬರ 3 ಸೋಮವಾರ ದಿನದಂದು ಸಾಯಂಕಾಲ 4.23ಗಂಟೆಗೆ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದಳು ಊರ¯ಲ್ಲಿಯ ಜೋತಿಷಿಯಲ್ಲಿಗೆ ಹೋಗಿ ಮಗುವಿನ ಜಾತಕ ಬರೆಯಿಸಿದರು ಧನಿಷ್ಠ ನಕ್ಷತ್ರದಲ್ಲಿ ಜನಿಸಿದ್ದು ಲಗ್ನ ಮತ್ತು ರಾಶಿ ಕುಂಭ ಆಗಿದ್ದರಿಂದ ಜನ್ಮನಾಮ “ಸಾರಾಪತಿ”ಎಂದಿದ್ದರೂ ಮನೆಯವರು’ಬಾಳಪ್ಪ” ಎಂದು ಕರೆಯತೊಡಗಿದರು.
ಬಾಲಕ ಆರೋಗ್ಯವಂತನಿದ್ದು ಎತ್ತರದ ಕಟ್ಟುಮಸ್ತಾದವನಾಗಿದ್ದನು. ಆದರೂ ಅವನು ಒಂದು ತರಹದ ಮಂದಮತಿಯ ಮಗುವಾಗಿದ್ದನು. ಎಲ್ಲರೂ ಇವನನ್ನು ಹುಚ್ಚ ಬಾಳು ಎಂದೇ ಕರೆಯುತ್ತಿದ್ದರು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಆದರೂ ಅವನಲ್ಲಿ ಯಾವುದೇ ದುಷ್ಟಗುಣಗಳಿರಲಿಲ್ಲ ಹುಚ್ಚನಂತೆ ಹಿಂದೆ-ಮುಂದೆ ಜಿಗಿಯುತ್ತ ಅರ್ಧ ಕಿ.ಮೀ ವರೆಗೆ ಜಿಗಿದುಕೊಂಡು ಬರುತ್ತಿದ್ದನು ಇದು ಅವನ ದಿನನಿತ್ಯದ ಪರಿಪಾಟಲಾಗಿತ್ತು ಈತನಿಗೆ ಹುಚ್ಚು ಹಿಡಿದಿದೆ ಎಮದು ಕೆಲವರೆಂದರೆ ಇನ್ನೂ ಕೆಲವರು ದೆವ್ವ ಬಡಿದಿದೆ ಎಂದು ಹೇಳುತ್ತಿದ್ದರು ಆದ್ದರಿಂದ ಅವನ ತಂದೆ-ತಾಯಿ ದೆವ್ವ ಬಿಡಿಸುವ ಎಲ್ಲ ಪ್ರಯತ್ನ ಮಾಡಿದರು ಆದರೆ ಅವನು ಮಾತ್ರ ಸುಧಾರಿಸಲಿಲ್ಲ ಮುಂದೆ ಬಾಳಪ್ಪನನ್ನು ಅಕ್ಕೋಳ ಗ್ರಾಮ ವ್ಯಾಪಾರಿ (ಶೇಠ)ಯ ಮನೆಯಲ್ಲಿ ದನಕಾಯಲು ಜೀತಕ್ಕೆ (ಚಾಕರಿ) ಇಟ್ಟರು.ಅವರ ಮನೆಯಲ್ಲಿ ಅವನಿಗಾಗಿ ದನಗಳು ಕಟ್ಟುವ ಕೊಟ್ಟಿಗೆಯಲ್ಲಿ ಮಲಗಲು ಒಂದು ಕೌದಿ ಊಟಕ್ಕಾಗಿ ಸಣ್ಣ ತೂತು ಬಿದ್ದ ತಾಟು. ಒಡಕು ತಂಬಿಗೆ ನೀಡಲಾಗಿತ್ತು ಅವುಗಳನ್ನು ಒಂದು ಮಾಡಿನಲ್ಲಿ ಇಟ್ಟುಕೊಳುತ್ತಿದ್ದನು.
ಒಂದು ದಿನ ರಾತ್ರಿ ಇದ್ದಕ್ಕಿಂತೆ ಕೊಟ್ಟಿಗೆಯಲ್ಲಿ ಬೆಳಕು ಕಾಣಿಸಿಕೊಂಡಿತು ಅದೇಕೋ ವ್ಯಾಪಾರಿ (ಶೇಠಜಿ)ಯ ತಾಯಿಗೆ ನಿದ್ದೆ ಬರಲಿಲ್ಲ ಬಾಳಪ್ಪನ್ನು ದನಕಾಯಲು ಜೀತಕ್ಕೆ ಹೊರಗೆ ಎದ್ದು ಬಂದಾಗ ಕೊಟ್ಟಿಗೆಯಲ್ಲಿ ಪ್ರಕಾಶ ಕಾಣಿಸಿ ಕೊಟ್ಟಿಗೆ ಸನಿಹಕ್ಕೆ ಬಂದಳು ಅಲ್ಲಿ ಮಾಡಿನಲ್ಲಿಟ್ಟ ತೂತುಬಿದ್ದ ತಾಟಿನಿಂದ ಮಂದ ಪ್ರಕಾಶವು ಹೊರಸೂಸಿ ಬರುವುದನ್ನು ಕಂಡು ಗಾಬರಿಗೊಂಡಳು. ಇನ್ನಷ್ಟು ಹತ್ತಿರಕ್ಕೆ ಹೋಗಿ ನೋಡಲಾಗಿ ಆ ಪ್ರಕಾಶದಲ್ಲಿ ಒಂದು ಜೈನ ಬಸದಿ ಕಂಡಂತಾಯಿತು ಆ ತಾಟಿನಲ್ಲಿ ಏನೋ ಮಹಿಮೆ ಅಡಗಿದೆ ಎಂದು ಭಾವಿಸಿ ಮರುದಿನ ಆ ತಾಟನ್ನು ನೀಡಿದರು ಕೆಲವೇ ದಿನಗಳಲ್ಲಿ ಶೇಠಜಿ ವ್ಯಾಪಾರ ಇದ್ದಕ್ಕಿದ್ದಂತೆ ವೃದ್ಧಿಯಾಗಿ ದೊಡ್ಡ ಸಾಹುಕಾರನಾದನು.
ಇದು ಜೀತದಾಳು ಬಾಳುನಿಗೆ ಕೊಟ್ಟ ತೂತುಬಿದ್ದ ತಾಟಿನ ಮಹಿಮೆಯೆಂದು ಅವರಿಗೆ ತಿಳಿಯಲು ತಡವಾಗಲಿಲ್ಲ. ತನಗೆ ಬೇರೊಂದು ತಾಟು ನೀಡಿರುವುದನ್ನು ಬಾಳು ವಿರೋಧಿಸಿ ಜೀತ ಬಿಟ್ಟು ಮನೆಯ ಕಡೆಗೆ ನಡೆದನು ಅಷ್ಟೊತ್ತಿಗೆ ತನ್ನ ಹಿರಿಯಣ್ಣ ಭೈರುನ ಮದುವೆಯಾಗಿತ್ತು. ಅವನು ಕಲಿತು ಶಿಂಪಿಗ ಕೆಲಸ ಮಾಡುತ್ತಿದ್ದನು ಇನ್ನು ಮನೆಯಲ್ಲಿ ಬಾಳು ಮತ್ತು ಅವನಿಗಿಂತ ಚಿಕ್ಕªನÀ ಭೀಮನ ಮದುವೆಯ ಸರದಿಯಿತ್ತು. ಅವರಿಬ್ಬರ ಮದುವೆ ಮಾಡಿ ತನ್ನ ಸಂಸಾರದ ಭಾರ ಕಡಿಮೆಮಾಡಿಕೊಳ್ಳಲು ತಂದೆ ಮಾಯಪ್ಪ ಚಡಪಡಿಸುತ್ತಿದ್ದನು.
ಮದುವೆಗೆ ಹೆಣ್ಣು ನೋಡಲು ಆರಂಭಿಸುತ್ತಿದ್ದಂತೆ ಬಾಳು ತನಗೆ ಮದುವೆ ಬೇಡ ಎಂದು ರೂಯಿಚಂದೂ ಗ್ರಾಮಕ್ಕೆ ಹೇಳದೇ ಕೇಳದೇ ಹೋಗಿಬಿಟ್ಟನು ಅವನಿದ್ದ ಸ್ಥಳದ ಸುದ್ದಿ ತಿಳಿದ ತಂದೆ-ತಾಯಿ ಅಲ್ಲಿಗೆ ಹೋಗಿ ಹಿಡಿದು ತಂದು ಊರ ಚಾವಡಿಯಲ್ಲಿ ಕೂಡಿಹಾಕಿ ದನಕ್ಕೆ ಬಡಿದಂತೆ ಬಡೆದು ಮದುವÉಗೆ ಒಪ್ಪಿಸಿದರು ಇದ್ದ ಊರಲ್ಲಿ ಹಿರೇಪ್ಪ ಖಿಲಾರಿ ಎಂಬುವವನಿಗೆ ಬಾಳುನ ಹಿರಿಯ ಸಹೋದರಿ ಗಂಗೂಬಾಯಿಯನ್ನು ಕೊಡಲಾಗಿತ್ತು. ಆತನು ಇದ್ದುದರಲ್ಲಿ ಸ್ಥಿತಿವಂತನಾಗಿದ್ದನು ಈ ದಂಪತಿಗಳಿಗೆ ಸತ್ಯವ್ವ ಎಂಬ ಮಗಳಿದ್ದಳು ಅವಳೊಂದಿಗೆ ಬಾಳುನ ಮದುವೆ ಮಾಡುವುದು ನಿಶ್ಚಯಿಸಲಾಯಿತು. ಇದಕ್ಕೆಲ್ಲ ನಮ್ಮ ಮಾವ ಹೀರೆಪ್ಪನದೇ ಕಿತಾಪತಿ ಎಂದು “ನೀನು ಈ ರೀತಿ ಜಬರದಸ್ತಿಯಿಂದ ಮದುವೆ ಮಾಡಿಸಿದರೆ ಮುಸುರಿ ನೀರು ಕುಡಿದು ಸತ್ತು ಹೋಗುತ್ತಿ. ನಿನ್ನ ಹೆಣ ಮದುವೆ ಮನೆಯಿಂದಲೇ ಹೋಗುತ್ತದೆ” ಎಂದು ರೆಗಾಡಿದನು ಬಾಳಪ್ಪ ಹೇಳಿ ಕೇಳಿ ಹುಚ್ಚ ಅವನ ಮಾತಿಗೆ ಯಾರೂ ಮಹತ್ವ ನೀಡಲಿಲ್ಲ. ಮುಂದೆ ಮದುವೆ ನಡೆಯಿತು ಮದುವೆಯ ಹಂದರ ಇಳಿಸಿರಲಿಲ್ಲ. ಹಿರೇಪ್ಪನ ಆರೋಗ್ಯ ಕೆಟ್ಟಿತು ಯಾವ ಔಷಧಕ್ಕೂ ಗುಣವಾಗದಿರುವುದನ್ನು ಮನಗಂಡರು ಆಗ ಬಾಳುನನ್ನು ಹತ್ತಿರ ಕರೆದು “ಬಾಳು ಇನ್ನೇನು ನಾನು ಬದುಕಲಾರೆ ನೀನು ನಿನ್ನ ಅಕ್ಕ ಸತ್ಯವ್ವ ನನ್ನ ಮಕ್ಕಳು ಹೂವಪ್ಪ, ಸೊದ್ಧಪ್ಪ, ಲಗಮಾಬಾಯಿಯರನ್ನು ಚೆÀನ್ನಾಗಿ ನೋಡಿಕೊಳ್ಳುತ್ತೇನೆಂದು ವಚನಕೊಡು ಎಂದು ಹೇಳುತ್ತಿದ್ದಂತೆ ಬಾಳು ವಚನ ನೀಡಿದÀನು. ಹಿರೇಪ್ಪ ವಾಂತಿ ಮಾಡಿ ಕೊಂಡು ಬಿದ್ದು ಸÀತ್ತು ಹೋದನು ಇದು ಬಾಳುನ ಮೊದಲನೆಯ ಭವಿಷ್ಯವಾಣಿಯು ಮನೆಯಲ್ಲಿಯೇ ಸತ್ಯವಾಯಿತು. ಮನೆಯ ಜವಾಬ್ದಾರಿ ಹೆಗಲಿಗೆ ಬೀಳುತ್ತಿದ್ದಂತೆ ಬಾಳುನಿಗೆ ಹೊಸ ಕಾಯಿಲೆ ಆರಂಭವಾಯಿತು ಅವನು ಇದ್ದಕ್ಕಿದ್ದಂತೆ ಸತ್ತವರಂತೆ ಬಿದ್ದು ಬಿಡುತ್ತಿದ್ದನು. ಅವನನ್ನು ಎತ್ತಲು ನಾಲ್ಕಾರು ಜನರು ಬೇಕಾಗುತ್ತಿತ್ತು ಹೀಗೆ ಒಂದರೆಡು ವಾರ ನಡೆಯಿತಂತೆ. ಕೆಲವು ತಿಂಗಳು ಕಳೆದ ನಂತರ ಬಾಳು ಸಹಜ ಮನುಷ್ಯರಂತೆ ಆರೋಗ್ಯವಂತನಾದನು. ತಂದೆ ಮಾಯಪ್ಪ ಹಿರೇಪ್ಪನ ಕುರಿ ಆಸ್ತಿ ಮತ್ತು ಅವರ ಮಕ್ಕಳನ್ನು ಸಂಭಾಳಿಸಲು ನೀನು ಅಲ್ಲಿಯೇ ಇದ್ದುಬಿಡು ಎಂದನು ಇದರಿಂದ ಅಕ್ಕನ ಮನೆಯೇ ಇವನ ಮನೆಯಾಯಿತು ಆ ಮನೆಯಲ್ಲಿ ಅಕ್ಕನ ಮಕ್ಕಳು ಬಾಳುನನ್ನು “ಮಾಮಾ” ಎಂದು ಕರೆಯುತ್ತಿದ್ದುದರಿಂದ ಬಾಳು ಮುಂದೆ “ಬಾಳುಮಾಮಾ” ಎಂದಾದನು.
ಮಾವನ ಕುರಿಗಳೊಂದಿಗೆ ತನ್ನದೇ ಆದ ಕೆಲವು ಕುರಿಗಳನ್ನು ಖರೀದಿಸಿ ಎಲ್ಲ ಕುರಿಗಳನ್ನು ಕಾಯತೊಡಗಿದನು. ಬಾಳುಮಾಮನಿಗೆ ಆಗ 33 ವರ್ಷಗಳಾಗಿರಬೇಕು ಕುರಿಗಳನ್ನು ಹೊಡೆದುಕೊಂಡು ಜಮಖಂಡಿ-ಸಾವಳಿಯ ಕಡೆಗೆ ಮೇಯಿಸಲು ಹೊರಟು ನಿಂತನು ತಾಯಿ ಅವನನ್ನು ಬಿಳ್ಕೊಡಲು ಊರ ಹೊರಗಿನ ರಸ್ತೆಯವರೆಗೆ ಬಂದಳು ಆಗ ಬಾಳುಮಾಮಾ ತಾಯಿಗೆ ” ಅವ್ವಾ ಇದು ನಿನ್ನ ನನ್ನ ಬೇಟಿ ಕಡೆಯದೆಂದು ಕಾಣಿಸುತ್ತದೆ” ಎಂದು ಹೇಳಿ ಮುಂದಕ್ಕೆ ಸಾಗಿದನು
ತಾಯಿ ಆಷಾಢ ವಾರಿಗೆ ಪಂಢರಪೂರಕ್ಕೆ ಹೋದಳು ಅಲ್ಲಿ ಕಾಲರಾ ಕಾಣಿಸಿ ಕೊಂಡಿತು ಲಗುಬಗೆಯಿಂದ ಊರಿಗೆ ಹಿಂದಿರುಗಿ ಬಂದು ಮನೆಯಲ್ಲಿ ಹಬ್ಬ ಮಾಡಿದಳು ಇದ್ದಕ್ಕಿದ್ದಂತೆ ಅಸ್ವಸ್ಥಳಾದಳು 10 ವರ್ಷದ ಮಗಳ ಮಗ ಹೂವಪ್ಪ ಹತ್ತಿರದಲ್ಲಿಯೇ ಇದ್ದನು. ಗಂಡ ಹೊಲಕ್ಕೆ ಹೋಗಿದ್ದನು ಗೋಡೆಗೆ ಒರಗಿಕೊಂಡು ಜೀವ ಬಿಟ್ಟಳು ಈ ಸಮಯದಲ್ಲಿ ಬಾಳುಮಾಮ ಕುರಿಕಾಯುತ್ತ ಸಂಚಾರದಲ್ಲಿದ್ದನು ತಾಯಿಯ ಅಂತ್ಯ ಸಂಸ್ಕಾರಕ್ಕೆ ಅವನಿಗೆ ಬರಲಾಗಲಿಲ್ಲ ಬಹಳ ದಿನದ ನಂತರ ಅವÀನಿಗೆ ಸುದ್ದಿ ತಿಳಿಯಿತು.

ಬಾಳುಮಾಮಾನ ಮಹಿಮೆಗಳು ದಿನದಿಂದ ದಿನಕ್ಕೆ ವೃದ್ಧಿಸತೊಡಗಿದವು ಬಾಳುಮಾಮಾನಿಗೆ ಸತ್ಯ ಪ್ರಿಯವಾಗಿತ್ತು ಅವನ ಕೆಲವು ಪವಾಡಗಳಲಿ ಬೆಳ್ಳಿ ನಾಣ್ಯಕೊಡಿಸಿದ್ದು, ಮಜ್ಜಿಗೆಯಲ್ಲಿ ಬೆಣ್ಣೆಮಾಯಮಾಡಿ ಮತ್ತೆ ತರಸಿದ್ದು ಮರಗವ್ವನ ಬೇನೆ ದೂರ ಮಾಡಿದ್ದು ಸಂತಾನ ಹೀನರಿಗೆ ಸಂತಾಭಾಗ್ಯ ಕಲ್ಪಿಸಿದ್ದು ಕಳ್ಳರಿಗೆ ಪಾಠ ಕಲಿಸಿದ್ದು 27 ತಿಂಗಳಿಂದ ಗರ್ಭ ಧರಿಸಿದ ಸ್ತ್ರೀಗೆ ಪ್ರಸವ ಮಾಡಿಸಿದ್ದು ಜಟ್ಟಿಗೆ ಉತ್ಕರ್ಷ ತಂದು ಕೊಟ್ಟದ್ದು ಹೀಗೆ ಹಲವು ಪವಾಡಗಳು ಅವರನ್ನು ಸುತ್ತುವರೆದಿವೆ.
ಬಾಳುಮಾಮಾನ ದಾಂಪತ್ಯ ಹೇಳಿಕೊಳ್ಳುವಂತಿರಲಿಲ್ಲ ಆಗಾಗ ಹೆಂಡತಿ ಪತಿಯೊಂದಿಗೆ ಜಗಳ ಕಾಯುತ್ತಿದ್ದಳು 9ವರ್ಷಗಳ ದೀರ್ಘಕಾಲದ ನಂತರ ಅವಳು ಗರ್ಭಿಣಿಯಾದಳು ಆದರೂ ಬಾಳುಮಾಮಾನೊಂದಿಗೆ ಕುರಿಯ ಹಿಂಡಿನಲ್ಲಿಯೇ ಇರುತ್ತಿದ್ದಳು ಮನೆಗೆ ಹೋಗಲು ಆಗಾಗ ಹಠಮಾಡುತ್ತಲಿದ್ದಳು ಬಾಳುಮಾಮಾ ಬೇಡವೆಂದು ಬುದ್ಧಿವಾದ ಹೇಳುತ್ತಲಿದ್ದನು ಇಂಥ ಸಮಯದಲ್ಲಿ ಸತ್ಯವ್ವಳ ಗರ್ಭಪಾತವಾಯಿತು ತಾಯಿ ಮಗಳು ಕುರಿ ಹಿಂಡಿನಿಂದ ಊರ ಕಡೆಗೆ ಹೋರಟು ಬಂದರು ಇದರಿಂದ ಬಾಳುಮಾಮಾನ ಸಂಸಾರದಲ್ಲಿ ಕಂದಕ ಉಂಟಾಯಿತು ಕುರಿಗಳನ್ನು ಮೇಯಿಸುತ್ತ ಸಂಚರಿಸುವಾಗ ಮೂಳೆ ಮಹಾರಾಜರ ದರ್ಶನವಾಯಿತು ಮೂಳೆ ಮಹಾರಾಜರು ದತ್ತ ಸಂಪ್ರದಾಯದ ನರಸಿಂಹ ಸರಸ್ವತಿ ದತ್ತರ ಮಠವು ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲ್ಲೂಕಿನ ನರಸೋಬಾವಾಡಿಯಲ್ಲಿತ್ತು ಇನ್ನೊಂದು ಮಠವು ಗುಲಬರ್ಗಾ ಜಿಲ್ಲೆಯ ಗಾಣಗಾಪೂರದಲ್ಲಿತ್ತು. ಮೂಳೆ ಮಹಾರಾಜರ ಪೂರ್ವನಾಮ ಬಾಳಕೃಷ್ಣ ಜಯರಾಮ ಮೂಳೆ ಅವರು ಜಾತಿಯಿಂದ ಶಿಂಪಿಗರಾಗಿದ್ದರು. ಅವರು ದತ್ತ ಸಂಪ್ರದಾಯದ ದೀಕ್ಷೆ ಪಡೆದು ಸನ್ಯಾಸಿಗಳಾಗಿ ಬಡವರ ರೋಗ-ರುಜೀನಗಳನ್ನು ಬೆಲ್ಲದ ಚಹಾ ಕುಡಿಸುವುದರ ಮೂಲಕ ನಿವಾರಿಸುತ್ತಿದ್ದರು ಮೂಳೆ ಮಹಾರಾಜರ ಚಹಾ ಎಂದರೆ ಎಲ್ಲ ರೋಗಕ್ಕೂ ರಾಮಬಾಣ ಒಂದರ್ಥದಲ್ಲಿ ಅವರನ್ನು “ಬೆಲ್ಲದ ಚಹಾದ” ಮಹಾರಾಜರೆಂದೇ ಖ್ಯಾತರಾಗಿದ್ದರು ಬಾಳುಮಾಮಾ ಸಂಸಾರ ತ್ಯಾಗ ಮಾಡಿಯಾಗಿತ್ತು. ಮೂಳೆ ಮಹಾರಾಜರಿಂದ ದೀಕ್ಷೆ ಪಡೆದುಕೊಂಡರು ಕುರಿಕಾಯುವುದರಲ್ಲಿಯೇ ಮೋಕ್ಷ ಪಡೆಯ ಬಯಸಿದ ಬಾಳುಮಾಮಾ 04-09-1966ರಂದು ಕೊಲ್ಲಾಪೂರ ಜಿಲ್ಲೆಯ ಭುದರಗಡ ತಾಲ್ಲೂಕಿನ ಆದ ಮಾಳಪೂರದಲ್ಲಿ ಕುರಿ ಕಾಯುತ್ತಿರುವಾಗ ದೇಹಬಿಟ್ಟರು ಅವರ ಸಮಾಧಿಯ ಮೇಲೆ ಇಂದು ಭವ್ಯವಾದ ಮಂದಿರ ನಿರ್ಮಿಸಲಾಗಿದೆ.

ಬಾಳುಮಾಮಾನ ಕುರಿಗಳೆಂದರೆ ದೇವರ ಕುರಿಗಳೆಂದೇ ಕುರುಬರ ಭಾವನೆ ಬಾಳುಮಾಮಾನ ಕುರಿ ಹಿಂಡಿನಲ್ಲಿ ಈಗ ಸುಮಾರು 6000 ಕುರಿಗಳಿವೆ. ಇವು ಯಾವುದೇ ಹೊಲದ ಬೆಳೆ ಮೇಯಿದರೂ ಯಾವುದೇ ರೈತ ಅವುಗಳನ್ನು ಓಡಿಸುವುದಿಲ್ಲ ಈ ಬೆಳೆ ತಿಂದರೆ ಮುಂದಿನ ವರ್ಷ ಅದಕ್ಕೆ ಹತ್ತರಷ್ಟು ಬೆಳೆ ಬರುತ್ತದೆ ಎಂದು ಜನರ ನಂಬಿಗೆ ಅವರಿಗಿರುವ ಬಾಳುಮಾಮಾನ ಮೇಲಿನ ಭಯ-ಭಕ್ತಿ ಅವನ ಕುರಿಗಳು ಮೇಯಲು ಬಂದ ಸ್ಥಳದಲ್ಲಿ ಒಂದು ಜಾತ್ರೆಯೇ ಜರಗುತ್ತದೆ ಬಾಳುಮಾಮಾನ ಕುರಿಹಿಂಡು ಸಂಚರಿಸುವ ದಾರಿಯಲ್ಲಿ ಜನರ ಹಿಂಡು ಕೂಡಿರುತ್ತದೆ. ಅವು ಸಂಚರಿಸಿದ ಸ್ಥಳಗಳು ಈಗ ಪುಣ್ಯ ಕ್ಷೇತ್ರಗಳಾಗಿ ಪರಿವರ್ತಿತಗೊಳ್ಳುತ್ತಿವೆ ಇವರ ಕುರಿ ಹಿಂಡನ್ನು ಕಾಯಲು ಭಕ್ತರಲ್ಲಿ ನಾಮುಂದು-ತಾಮುಂದು ಎಂಬ ಪೈಪೋಟಿ ನಡೆದಿರುತ್ತದೆ. ಹರಕೆ ಹೊತ್ತವರು ಕುರಿಕಾಯುವ ಸೇವೆಮಾಡಿ ಧನ್ಯರಾಗುತ್ತಾರೆ ಎಲ್ಲಿ ಅವರ ಕುರಿಗಳು ತಂಗುತ್ತವೆಯೋ ಸ್ಥಳೀಯರು ಮನೆ ಮನೆಗೆ ಪಟ್ಟಿ ಎತ್ತಿ ಅದರಿಂದ ಅನ್ನಸಂತ್ತರ್ಪಣೆ ನಡೆಸುತ್ತಾರೆ ಆಸ್ಥಳದಲ್ಲಿ ಭಜನೆ ಡೊಳ್ಳಿನ ಹಾಡು ಪೂಜೆ ಪುನಸ್ಕಾರಗಳು ನಿತ್ಯ ಮೂರು ಹೊತ್ತು ನಡೆಯುತ್ತಿವೆ.

ಮಹಾರಾಷ್ಟ್ರದ ಅದಂಪೂರದಲ್ಲಿ ಸಂತ ಬಾಳುಮಾಮರ ಬೃಹತ್ ದೇವಾಲಯವಿದೆ, ಭಕ್ತರಿಗಾಗಿ ಯಾತ್ರಿ ನಿವಾಸ ಮುಂತಾದ ಮುತಾದ ಸೌಲಭ್ಯಗಳನ್ನು ಹೊಂದಿದೆ. ಬೆಳಗಾವಿ – ನಿಪ್ಪಾಣಿ ಮೂಲಕ 100 ಕಿಮೀ ದೂರದಲ್ಲಿದೆ.