
ಶ್ರೀ ಚಿಂಚಲಿ ಮಾಯವ್ವ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಕೇಂದ್ರ ಸ್ಥಳದಿಂದ 10 ಕಿ.ಮೀ ದೂರದಲ್ಲಿರುವ ಚಿಂಚಲಿ ಗ್ರಾಮದಲ್ಲಿ ಮಾಯವ್ವ ನೆಲೆಸಿದ್ದಾಳೆ. ಸ್ಥಳೀಯ ಐತಿಹ್ಯಗಳ ಪ್ರಕಾರ ಅವಳು ಮಾನದೇಶದಿಂದ (ಮಹಾರಾಷ್ಟ್ರ ತಾಲ್ಲೂಕು ಕೇಂದ್ರ) ಕೀಲ ಮತ್ತು ಕಿಟ್ಟ ಎಂಬಿಬ್ಬರು ರಾಕ್ಷಸರನ್ನು ಬೆನ್ನಟ್ಟಿಕೊಂಡು ಬಂದು ಚಿಂಚಲ ಭೂಮಿಯಲ್ಲಿ ಅವರನ್ನು ಸಂಹರಿಸಿದಳು ಮಾಯವ್ವ ಚಿಂಚಲಿಗೆ ಬರುತ್ತಿದ್ದಂತೆ ಸ್ಥಳೀಯ ರಿಗೆ ಹಾಲು ಕೇಳಿದಳು ಅವರು ಹಾಲು ಕೊಡದೆ ಇರುವಾಗ ಹತ್ತಿರದಲ್ಲಿಯೇ ಹರಿಯುವ ಹಳ್ಳದ ನಿರೆಲ್ಲ ಹಾಲಾಗಲಿ ಎಂದಳಂತೆ ಆಗ ಹಳ್ಳದ ನೀರು ಹಾಲಾಗಿ ಹರಿಯಿತಂತೆ ಅಂದಿನಿಂದ ಈ ಹಳ್ಳಕ್ಕೆ ಹಾಲುಹಳ್ಳ ಎಂಬ ಹೆಸರು ಪ್ರಾಪ್ತವಾಯಿತಂತೆ. ಅಲ್ಲಿಯೇ ಇರುವ ದಿಣ್ಣೆಯ ಮೇಲೆ ಕೆಲವು ಕುರುಬರು ಕುರಿಕಾಯುತ್ತಿದ್ದರಂತೆ ಅವರಲ್ಲಿಗೆ ಹೋಗಿ ಉಣ್ಣೆ ಕೇಳಿದಳಂತೆ ಅವರು ಉಣ್ಣೆ ಕೊಡಲಿಲ್ಲವಂತೆ ಕೋಪಗೊಂಡು ಎಲ್ಲ ಕುರಿಗಳು ಕಲ್ಲಾಗಲಿ ಎಂದು ಶಾಪ ನೀಡಿದಳಂತೆ ಅವಯ ಕಲ್ಲಾಗಿ ಆ ದಿಣ್ಣೆಯ ಮೇಲೆ ಬಿದ್ದವಂತೆ ಈ ಸ್ಥಳವನ್ನು “ಉಣ್ಣೆ ಮಟ್ಟೆಪ್ಪನ ಕಲ್ಲು” ಎಮದು ಸ್ಥಳೀಯರು ಕರೆಯುತ್ತಾರೆ. ಇಂಥ ಅನೇಕ ಪವಾಡಗಳನ್ನು ತೋರಿ ಪ್ರಸಿದ್ಧಳಾಗಿ ಕುರುಬ ಜನಾಂಗಕ್ಕೆ ದೇವತೆಯಾದಳು. ಇಲ್ಲಿ ತ್ರಿಮೂರ್ತಿಗಳ ಸಂಗಮ ಇದೆಯೆಂದು ಹೇಳಲಾಗುತ್ತದೆ. ವರ್ಷದಲ್ಲಿ ನಾಲ್ಕು ಬಾರಿ ಮಾಯವ್ವಳ ಎಡಭಾಗದಲ್ಲಿ ಸಿಂಗಾಡಿ (ಶಿವ) ಸುಲತಾನ (ಬೀರಪ್ಪ ಅಥವಾ ಬ್ರಹ್ಮ) ಎಂಬ ವಿಗ್ರಹಳನ್ನು ಸ್ಥಾಪಿಸುತ್ತಾರೆ ಇದು ಭಾರತ ಹುಣ್ಣಿಮೆ ನೂಲಹುಣ್ಣಿಮೆ, ದೀಪಾವಳಿ ಹಾಗೂ ಕಾರ ಹುಣ್ಣಿಮೆಯಲ್ಲಿ ಐದು ದಿನ ಸ್ಥಾಪಿಸಲಾಗುತ್ತದೆ ಮಾಯವ್ವ ವಿಷ್ಣುರೂಪಿ. ಹೀಗಾಗಿ ತ್ರಿಮೂರ್ತಿಗಳ ಸಂಗಮ ಶಕ್ತಿದೇವತೆಯಾಗಿ ಮೆರೆಯುತ್ತಿದ್ದಾಳೆ.

ಮಾಯವ್ವಳ ಪ್ರಮುಖ ಉಲ್ಲೇಖ ಸಿಗುವುದು ಬೀರಪ್ಪನ ಜನಪದಿಯ ಕಥೆಯಲ್ಲಿ ಶಿವ-ಪಾರ್ವತಿಯರು ವಿಹಾರಾರ್ಥವಾಗಿ ಭೊಲೋಕದ ಹಾಲುಹಳ್ಳಕ್ಕೆ ಬಂದರು ಅಲ್ಲಿರುವ ವಿಶಾಲ ಮರದ ಕೆಳಗೆ ವಿಶ್ರಾಂತಿ ಪಡೆದರು ಮರಳುವಾಗ ಈ ಮರದ ಕೆಳಗೆ ಸುಕನ್ಯೆಯರು ವಿಶ್ರಮಿಸಿದರೆ ಅವರು ಗರ್ಭವತಿಯರಾಗಲಿ ಎಂದು ವರವಿತ್ತು ಹೊರಟು ಹೋದರು. ಮುದೊಂದು ದಿನ ಸುಕನ್ಯೆಯರು ಇದೇ ಮರದಡಿಯಲ್ಲಿ ವಿಶ್ರಾಂತಿ ಪಡೆದರು ಪಾರ್ವತಿಯ ವರದಂತೆ ಅವರು ಗರ್ಭಧರಿಸಿದರು ಆ. ಗರ್ಭದಿಂದ ಐದು ಹೆಣ್ಣು ಶಿಶುಗಳು ಹುಟ್ಟಿದವು ಅವುಗಳನ್ನು ಒಂದು ತೆಪ್ಪದಲ್ಲಿರಿಸಿ ಹಾಲಹವೇಲಿ ಹಳ್ಳದಲ್ಲಿ ಬಿಟ್ಟು ಹೋದರು ಅಷ್ಟರಲ್ಲಿ ಅಲ್ಲಿಗೆ ಚಾಮರಾಯನೆಂಬ ಕುರುಬನು ಕುರಿ ಕಾಯುತ್ತ ಬಂದನು ಅವನಿಗೆ ಮಕ್ಕಳಿರಲಿಲ್ಲ ಆದ್ದರಿಂದ ಮಕ್ಕಳ ಮಮತೆಯಿಂದ ಆ ಐದು ಹೆಣ್ಣು ಶಿಶುಗಳನ್ನು ಮನೆಗೆ ತೆಗೆದುಕೊಂಡು ಬಂದು ತನ್ನ ಹೆಂಡತಿ ಶಾಂಭವಿಯ ಕೈಗಿತ್ತನು. ಮಕ್ಕಳಿಲ್ಲದ ಇವರಿಗೆ ಅತ್ಯಾನಂದವಾಯಿತು ಅವುಗಳಿಗೆ ಲಕ್ಷ್ಮಮ್ಮ, ಮಾಯಮ್ಮ, ಮಾಕಾಳೆಮ್ಮ, ಮಂಕಮ್ಮ ಮತ್ತು ಅಕ್ಕಮ್ಮ ಎಂದು ನಾಮಕರಣ ಮಾಡಿದರು. ಶಿಶುಗಳು ಬೆಳೆದು ದೊಡ್ಡವರಾಗಿ ಕುರಿ ಕಾಯತೊಡಗಿದರು. ಕುರಿ ಮೇಯಿಸುತ್ತ ಹಾಲಹವೇಲಿ ಹಳ್ಳಕ್ಕೆ ಬಂದರು ಅಲ್ಲಿರುವ ಆಲದ ಮರದಿಂದ ಕೂಸು ಅಳುವ ಧ್ವನಿಕೇಳಿ ಅತ್ತ ಕಡೆಗೆ ಬಂದರು ತೊಟ್ಟಿಲದಲ್ಲಿ ಅಳುತ್ತಿರುವ ಗಂಡು ಮಗುವನ್ನು ಕಂಡು ಅದನ್ನು ತೆಗೆದುಕೊಳ್ಳಲು ತಾಮುಂದು, ನಾಮುಂದು ಎಂದು ಜಗಳವಾಡಿದರು ಅಕ್ಕಮ್ಮ ಒಂದು ಯುಕ್ತಿ ಹುಡುಕಿದಳು, ನಾವೆಲ್ಲರೂ ನಮ್ಮ ನಮ್ಮ ಉಡಿವೊಡ್ಡಿ ನಿಲ್ಲೋಣ ಯಾರ ಉಡಿಯಲ್ಲಿ ಮಗು ಬೀಳುವುದೋ ಅವರು ಅದನ್ನು ಸಾಕುವುದು ಎಂದು ನಿರ್ಧರಿಸಿದರು ಆ ಮಗು ಮಾಯಮ್ಮಳ ಉಡಿಯಲ್ಲಿ ಬಿದ್ದಿತು ಹೀಗಾಗಿ ಆ ಮಗುವಿನ ಲಾಲನೆ-ಪಾಲನೆ ಅವಳ ಪಾಲಿಗೆ ಬರುತ್ತದೆ. (ಕೆಲವು ಕಥೆಗಳಲ್ಲಿ ಅಕ್ಕಮ್ಮ ಎಂದಿದೆ) ಆ ಮಗುವೆ ಬೀರಪ್ಪ (ಶಿವಶಿದ್ಧ ಬೀರಪ್ಪ).ಮಾಯವ್ವ ಚಿಂಚಲಿಯಲ್ಲಿ ಶಾಶ್ವತವಾಗಿ ನಿಲ್ಲಲು ನಿರ್ಧರಿಸಿದಳು. ಆಗ್ರಾಮದಲ್ಲಿಯ ಹಾಳು ದಿನ್ನೆಯಲ್ಲಿರುವ ಹಿರಿದೇವಿಯ ಮಂದಿರವಿತ್ತು . ಅಲ್ಲಿಯೆ ಮಾಯವ್ವ ಆಶ್ರಯ ಪಡೆದಳು ಆದ್ದರಿಂದ ಅವಳ ಜಾತ್ರೆ, ವಿಶೇಷ ದಿನಗಳಂದು ಪ್ರಥಮ ಪೂಜೆ ಹಿರಿದೇವಿಗೆ ಸಲ್ಲುತ್ತದೆ. ಅಲ್ಲಿಯ ಹಿರಿಯರೂ ಹಿರಿದೇವಿಯೇ ಗ್ರಾಮದೇವತೆ ಎಂದು ನಂಬಿದ್ದಾರೆ.

ಭಾರತದುದ್ದಕ್ಕೂ ಬೀರಪ್ಪ ದೇವರ ನೆಲೆಗಳು ಹುಣಸೆ ಮರದ ಕೆಳಗೆ ಇವೆ. ಹುಣಸೆಗೂ ಬೀರಪ್ಪನಿಗೂ ಮತ್ತು ಏಳುಮಕ್ಕಳ ತಾಯಂದಿರಿಗೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಅನಾದಿ ಕಾಲದಿಂದ ಹುಣಸೆ ಮರಗಳ ಸಮೂಹದಲ್ಲಿ ದೇವರ ನೆಲೆಇರುವುದು ಕಂಡು ಬರುತ್ತದೆ. ಗ್ರಾಮದ ಹೆಸರು ಚಿಂಚಲಿ ಚಿಂಚ ಪ್ರಾಕೃತ ಪದ; ಅದರರ್ಥ ಹುಣಸೆ ಈ ಕ್ಷೇತ್ರದಲ್ಲಿ ಹುಣಸೆ ವನವಿದ್ದು, ಅಲ್ಲಿ ಬೀರಪ್ಪ, ಅವನನ್ನು ಸಾಕಿದ ಮಾಯವ್ವ ಇರುವುದರಿಂದ ಆ ದೇವಿಯನ್ನ ಹುಣಸೆಮರದ ಮಾಯವ್ವ ಅಥವಾ ಚಿಂಚಲಿ ಮಾಯವ್ವ ಎಂದು ಪ್ರಸಿದ್ಧಳಾದಳು ಹಾಲಹವೇಲಿ ಅಥವಾ ಹಾಲು ಹಳ್ಳವೂ ಅಲ್ಲಿರುವುದರಿಂದ ಹಾಲುಮತದ ಕುರುವರು ಹೈನು ಉತ್ಪಾದಕರು ಅವರಿಂದ ಅಲ್ಲಿಯ ಹಳ್ಳಕ್ಕೆ ಹಾಲುಹಳ್ಳ ಎಂದು ಪ್ರಸಿದ್ಧಿ ಪಡೆದಿದೆ ಅವಳ ಬಗೆಗಿರುವ ತ್ರಿಮೂರ್ತಿಗಳ ಅವತಾರ ಅನಂತರ ಅಂಟಿಕೊಂಡಿದೆ. ಅವಳ
ಪ್ರಖ್ಯಾತಿ ಪಡೆದ ನಂತರ ಕುರುಬ ಕುಲದಿಂದ ಕವಲೊಡೆದ ಇನ್ನಿತರ ಜಾತಿಯವರು ಇವಳ ಭಕ್ತರಾಗಿದ್ದಾರೆ. ಕೆಲವರ ಕುಲದೈವ; ಕೆಲವರ ಮನೆದೇವರು