ಹಾಲುಮತ ಕುರುಬ ಜನಾಂಗದ ಕುಲಗುರು ರೇವಣಸಿದ್ಧರು. ರೇವಣಸಿದ್ಧನಿಗೆ ಸಿದ್ಧೇಶ್ವರ, ಕರಿಸಿದ್ದೇಶ್ವರ, ಕಾಡುಸಿದ್ಧೇಶ್ವರ, ಚೆನ್ನಮಲ್ಲೇಶ, ಮಳೆಯ ಮಲ್ಲೇಶ, ಸಿದ್ಧರ ಮಲ್ಲಯ್ಯ, ದೊಡ್ಡಯ್ಯ, ಭೀಮೇಶ್ವರ ಹಾಗೂ ಡಿ(ದಿ)ಳ್ಳೆಪ್ಪ ಎಂಬ ಹೆಸರುಗಳುಂಟು. ಶರಣರ ಹಿರಿಯ ಸಮಕಾಲೀನನಾಗಿದ್ದ ರೇವಣಸಿದ್ಧನು ಶಾಂತಿಮಯ ಮುತ್ತಯ್ಯನ ಮಗನು. ಇವನ ಕಾಲವನ್ನು ಇತಿಹಾಸಕಾರರು ಕ್ರಿ.ಶ.1110 ರಿಂದ 1227ರವರೆಗೆ ಎಂದು ಗುರುತಿಸಿದ್ದಾರೆ (ಬಿರಾದಾರ ಬಿ. ಜಿ. (ಡಾ.), ಕುರುಬರ ಗುರು ಒಡೆಯರು, ಪುಟ 198). ಚಿಕ್ಕಂದಿನಲ್ಲಿ ತಂದೆತಾಯಿಗಳನ್ನು ಕಳೆದುಕೊಂಡ ರೇವಣಸಿದ್ಧನು ನಾಥ ಪಂಥದ ಅನುಯಾಯಿಯಾಗಿದ್ದು ಉತ್ತರ ಭಾರತವನ್ನೆಲ್ಲ ಸಂಚರಿಸಿದನೆಂದು ನವನಾಥರ ಚರಿತ್ರೆ’ ತಿಳಿಸುತ್ತದೆ. ನಾಥಪಂಥದ ಸಿದ್ಧಾಂತಗಳು ಹಿಡಿಸದೆ ಸಿದ್ಧರೇವಣನು ಕೊಲ್ಲಿಪಾಕಿಯ ಸೋಮೇಶ್ವರನ ಸನ್ನಿಧಾನದಲ್ಲಿ ಶೈವಸಿದ್ಧಪಂಥವನ್ನು ಸ್ವೀಕರಿಸುತ್ತಾನೆ. ಇದನ್ನು ಹರಿಹರ ಕವಿಯುಲಿಂಗೋದ್ಭವ’ ಎಂದು ರೇವಣಸಿದ್ಧೇಶ್ವರ ರಗಳೆ ಎಂಬ ಕಾವ್ಯದಲ್ಲಿ ವಿವರಿಸಿದ್ದಾನೆ. ಹುಟ್ಟುವಾಗಲೆ ಕಂತೆ(ಕಂಬಳಿ), ವಜ್ರಕುಂಡಲ, ಲಾಕುಳ(ಯೋಗದಂಡ), ಪಾವುಗೆ(ಮರದ ಪಾದರಕ್ಷೆ), ಕೋವಣ(ಲಂಗೋಟೆ) ಧರಿಸುವುದು ಅಸಾಧ್ಯವಾದ್ದರಿಂದ ನಾವು ಇದು ರೇವಣಸಿದ್ದನ ನಾಥಪಂಥದಿಂದ ಶೈವಸಿದ್ಧ ಪಂಥಕ್ಕೆ ಮತಾಂತರ ಪ್ರಕ್ರಿಯೆಯೆಂದು ವೈಜ್ಞಾನಿಕವಾಗಿ ಯೋಚಿಸಬಹುದು. ನಾಥಸಿದ್ಧರಿಗೂ ರೇವಣ, ಅಲ್ಲಮ ಮೊದಲಾದ ಶೈವ ಸಿದ್ಧರಿಗೂ ಸಂಬಂಧವಿದ್ದಿರಬೇಕು. ಇವರೆಲ್ಲರೂ ಮೊದಲು ನಾಥಸಿದ್ಧರೇ ಆಗಿದ್ದರು’ ಎಂದು ಶ್ರೀ ಕುಂದಣಗಾರ ಮತ್ತು ಕಪಟರಾಳ ಕೃಷ್ಣ ಮೊದಲಾದ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ರೇವಣಸಿದ್ಧರು ಹಾಲುಮತ ಕುರುಬ ಜನಾಂಗಕ್ಕೆ ಸೇರಿದವರೆಂದು ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾದ ಡಾ. ಎಂ.ಎಂ. ಕಲಬುರ್ಗಿ ಪ್ರತಿಪಾದಿಸಿದ್ದಾರೆ (ಡಾ. ಎಂ.ಎಂ. ಕಲಬುರ್ಗಿ, ಮಾರ್ಗ ಸಂಪುಟ 4). ರೇವಣಸಿದ್ಧನು ಕುರುಬ ಜನಾಂಗ ಮೂಲದವನು ಎಂದು ಮಹಾರಾಷ್ಟ್ರದ ಪ್ರಸಿದ್ಧ ವಿದ್ವಾಂಸರಾದ ಡಾ. ರಾಮಚಂದ್ರ ಚಿಂತಾಮಣಿ ಢೇರೆ ಅವರುರೇವಣಸಿದ್ಧರ ಸ್ಥಾನ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಅಪ್ಪಾಚಿವಾಡಿ’. ಇವನು ದುಗ್ಧ(ಹಾಲು) ಸಂಪ್ರದಾಯದ ಧನಗಾರ(ಕುರುಬ) ಮೂಲದ ಪೂಜನೀಯ ವ್ಯಕ್ತಿ’ ಎಂದು ಅಭಿಪ್ರಾಯಪಡುತ್ತಾರೆ(ಡಾ.ರಾ.ಚಿ.ಢೇರೆ, ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ). ನಾಥಪಂಥದ ಸಿದ್ಧರ ಸಹಚರ್ಯ ಇದ್ದಾಗಲೇ ರೇವಣಸಿದ್ಧ ಅನೇಕ ಸಿದ್ದಿಗಳನ್ನು ಹೊಂದಿದ್ದರೆಂದು ನವನಾಥರ ಚರಿತ್ರೆ ತಿಳಿಸುತ್ತದೆ. ವೈದ್ಯದಲ್ಲಿಯೂ ಅಪ್ರತಿಮ ಸಿದ್ಧಿಯನ್ನು ಪಡೆದಿದ್ದರು ಎಂಬುದಕ್ಕೆ ತಮ್ಮ ಮಗ ರುದ್ರಮುನಿಯ ಮೂರು ತಿಂಗಳ ಪಿಂಡವನ್ನು ತಮ್ಮ ಪತ್ನಿ ಸುಂದರನಾಚಿಯ ಗರ್ಭದಿಂದ ತೆಗೆದು ಪೋಷಿಸಿ ಬೆಳೆಸಿದರು ಎಂಬುದು ಸಾಕ್ಷಿ ಒದಗಿಸುತ್ತದೆ. ಇವರು ಬಹುತೇಕ ರಾಜಮಹಾರಾಜರಿಂದ ಪೂಜಿತರಾದವರು. ಬಿಜ್ಜಳ ತನ್ನ ಮಗಳನ್ನು ಶ್ರವಣಬೆಳಗೊಳ ಮೊದಲಾದ ಕಡೆಗೆ ತೀರ್ಥಯಾತ್ರೆಗೆ ಕಳಿಸುವಾಗ ರೇವಣಸಿದ್ದರನ್ನು ಜೊತೆ ಮಾಡಿ ಕಳಿಸುತ್ತಿದ್ದನೆಂಬ ಸಂಗತಿ ಬಿಜ್ಜಳ ಚರಿತ್ರೆಯಿಂದ ತಿಳಿದು ಬರುತ್ತದೆ. ದೇವಗಿರಿ ಯಾದವರ ಐದನೆಯ ಭಿಲ್ಲಮಲ್ಲನಿಗೆ ರಾಜಗುರುವಾಗಿ ಪರೋಕ್ಷವಾಗಿ ರಾಜ್ಯವಾಳಿದ ಸಂಗತಿ ಹಳೆ ಮೈಸೂರು ಕಡೆಯ ಕುರುಬರ ಮದುವೆಗಳಲ್ಲಿ ವಧು-ವರರಿಗೆ ಹೇಳುವ ಆಶೀರ್ವಚನದಲ್ಲಿ ಬರುವಭಿಲ್ಲ ರಾಜ್ಯವನಾಳಿ’ ಎಂಬ ಮಾತಿನಿಂದ ರುಜುವಾತಾಗುತ್ತದೆ. ಯಾದವರ ಅಧೀನ ರಾಜನಾದ ಶಿಲಾಹಾರ ವಂಶದ ವಿಕ್ರಮಾದಿತ್ಯ ಸಿದ್ಧಗಿರಿಯಲ್ಲಿ ರೇವಣಸಿದ್ಧರಿಗೆ ಒಂದು ಮಠ ಕಟ್ಟಿಸಿಕೊಟ್ಟಿರುವುದಕ್ಕೆ ಸಾಕ್ಷಿ ಇದೆ. ಹಾಗೆಯೆ ಮೂರನೆಯ ಕುಲೋತ್ತುಂಗ ಚೋಳ ಹಳೆಯ ಮೈಸೂರಿನ ಭಾಗವನ್ನು ಆಳುವಾಗ(ರೇವಣಸಿದ್ಧ ಎರಡನೆಯ ಚೋಳನ ಮಗಳು ಸೌಂದರಿಯನ್ನು ಮದುವೆಯಾಗಿದ್ದರು) ರೇವಣಸಿದ್ದರಿಗೆ ಆನೆಕಲ್ ರಾಜಪುರದಲ್ಲಿ ಒಂದು ಗುರುಮಠ ಕಟ್ಟಿಸಿ ಕೊಟ್ಟಿರುವುದಕ್ಕೆ ಆಧಾರವಿದೆ. ಚೋಳ ರಾಜನ ಅಧೀನ ರಾಜನಾದ ತೆಂಗಿನಕಲ್ ಚಾಮರಾಜ ರೇವಣಸಿದ್ಧೇಶ್ವರರ ಬೆಟ್ಟಕ್ಕೆ ಅಡಿಯಿಂದ ಮುಡಿಯವರೆಗೆ ಮೆಟ್ಟಿಲನ್ನು ಕಟ್ಟಿಸಿ, ಶಿವಲಿಂಗಗಳ ಪ್ರತಿಷ್ಠಾಪನೆಯ ಕಾರ್ಯ, ದೊಡ್ಡ ರೇವಣಾರಾಧ್ಯ ಹಾಗೂ ಚಿಕ್ಕ ರೇವಣಾರಾಧ್ಯ(ರುದ್ರಮುನಿ)ರ ಸಾನಿಧ್ಯದಲ್ಲಿ ನೆರವೇರಿಸಿದ್ದನ್ನು ಭೀಮೇಶಾದ್ರಿ ಪುರಾಣ’ ದಾಖಲಿಸುತ್ತದೆ. ಹಾಗೆಯೆ ಉಜ್ಜನೀಪುರವರಾಧೀಶನಾದ ಗುತ್ತಲದ ವಿಕ್ರಮಾದಿತ್ಯನಿಗೆ ಕತ್ತಿ ಕೊಟ್ಟಿದ್ದನ್ನು (ಕತ್ತಿ ಇಲ್ಲಿ ರಾಜಕೀಯ ಶಕ್ತಿಗೆ ಸಂಕೇತ) ಗ್ರಂಥಗಳು ದಾಖಲಿಸುತ್ತವೆ. ಇವರ ಹೆಸರಿನಲ್ಲಿರುವ ಮಠಗಳು, ದೇವಾಲಯಗಳು, ಗುಡ್ಡಗಳು, ಕೊಳ್ಳಗಳು ಇವರ ಸಿದ್ಧಿ, ಪ್ರಸಿದ್ಧಿ, ಪ್ರಭಾವ ಮತ್ತು ಜನಪ್ರಿಯತೆಗೆ ಪ್ರತೀಕವಾಗಿವೆ(ಪ್ರೊ. ಸುಧಾಕರ, ಹಾಲಕೆನೆ, ರೇವಣಸಿದ್ಧೇಶ್ವರ ಲೇಖನ). ರೇವಣಸಿದ್ಧರು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಕರ್ತರೂ ಆಗಿದ್ದರೆಂಬುದಕ್ಕೆ ಹರಿಹರ ಕವಿಯತಟಾಕಂಗಳನೆತ್ತಿಸುತ್ತಂ, ಶಿವಪುರಂಗಳ ಮಾಡಿಸುತ್ತಂ, ಸತ್ರಂಗಳಂ ನಿರ್ಮಿಸುತ್ತಂ, ಹೆಳವರ್ಗೆ ಕಾಲ್ಗಳಂ, ಕುರುಡರ್ಗೆ ಕಣ್ಗಳಂ, ಬಂಜೆಯರ್ಗೆ ಮಕ್ಕಳಂ ಕೊಟ್ಟು, ಅರಸುಮಕ್ಕಳ್ಗೆ ರಾಜ್ಯಮಂ, ಕಂಡ ಕಂಡ ಬಡವರ್ಗೆ ಸಂಪದವನೀಯುತ್ತಂ’ ಎಂಬ ವರ್ಣನೆ ಅವರ ಸಾಮಾಜಿಕ ಕೆಲಸ ಕಾರ್ಯಗಳ ಮಾಹಿತಿಯನ್ನು ಒದಗಿಸುತ್ತದೆ. ಇವರು ಪಂಚಾಚಾರ್ಯರಲ್ಲಿ ಒಬ್ಬರೆಂದು ಪರಿಗಣಿಸುತ್ತ ಅವರನ್ನು ರೇಣುಕಾಚಾರ್ಯರೆಂದು ಪ್ರಚಾರ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ರೇವಣಸಿದ್ಧರು ಶರಣ ಸಂಪ್ರದಾಯದ ಪುರೋಹಿತಶಾಹಿ ವಿರೋಧಿಗಳೆಂಬುದಕ್ಕೆ ಅವರು ಹುಟ್ಟುಹಾಕಿದ ಕುರುಬರ ಕುಲಗುರುಗಳ ಸಂಪ್ರದಾಯವಾದ ಒಡೆಯರು’ ಸಾಕ್ಷಿಯಾಗಿದ್ದಾರೆ. ಸಂಸ್ಕøತ ಮಂತ್ರಗಳಿಗೆ ಬದಲಾಗಿ ಅಚ್ಚ ಕನ್ನಡ ಮಂತ್ರಗಳನ್ನು ರಚಿಸಿ ಕುರುಬರ ಮದುವೆಯಲ್ಲಿ ಪಠಣ ಮಾಡಿ ಪ್ರಗತಿಪರ ಮಾಂಗಲ್ಯಧಾರಣೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಕುರುಬರ ಗುರುಗಳಾದ ಒಡೆಯರ ಸಾಮಾಜಿಕ, ಧಾರ್ಮಿಕ ಆಚರಣೆಯಲ್ಲಿ ಕಂಡುಬರುವಕಾಲಿಲ್ಲದ ಐನೋರು’ ಮತ್ತು ಒಡೇರಮ್ಮನಿಗೆ’ ಇರುವ ಸ್ವಾತಂತ್ರ್ಯ, ಗೌರವಗಳು ಇಂದಿನ ಸಂದರ್ಭದಲ್ಲಿ ಪ್ರಗತಿಪರ ಹೆಜ್ಜೆಗಳಾಗಿವೆ. ಕುರುಬರ ಕುಲಗುರು ರೇವಣಸಿದ್ದರಿಗೂ ಮತ್ತು ಕುರುಬರ ಕುಲದೈವ ಬೀರಪ್ಪನಿಗೂ ಧಾರ್ಮಿಕವಾದ ಅವಿನಾಭಾವ ಸಂಬಂಧವಿದೆ. ಎಲ್ಲೆಲ್ಲಿ ರೇವಣಸಿದ್ಧರು ಸಂಚಾರಮಾಡಿ ಧರ್ಮ ಪ್ರಚಾರ ಮಾಡಿ ಮಠ ಕಟ್ಟಿದರೋ ಅಲ್ಲೆಲ್ಲ ಬೀರಪ್ಪ ಮತ್ತು ಬೀರಪ್ಪನ ಪರಿಷ್ಕøತ ರೂಪವಾದ ವಿರಭದ್ರನ ದೇವಾಲಯಗಳನ್ನು ಪ್ರತಿಷ್ಟಾಪಿಸಿದ್ದಾರೆ ಹಾಗೂ ಹಾಲುಮತ ಕುರುಬ ಮತ್ತು ಲಿಂಗವಂತ ಜನಾಂಗಗಳ ಸಂಕರಶೀಲತೆಗೆ ಬುನಾದಿಯನ್ನೂ ಹಾಕಿದ್ದಾರೆ. ರೇವಣಸಿದ್ಧರು ನಾಥ ಪಂಥದ ಅನುಯಾಯಿಯಾಗಿದ್ದಾಗ ಉತ್ತರ ಭಾರತದ 700 ಗ್ರಾಮಗಳನ್ನು ಸುತ್ತಿ ಬಂದಿದ್ದರೆಂದೂ ಮತ್ತು ದಿ(ಡಿ)ಳ್ಳಿ(ಲ್ಲಿ)ಯವರೆಗೆ ಹೋಗಿ ಬಂದಿದ್ದರೆಂದೂ ಗ್ರಂಥಗಳಲ್ಲಿ ಉಲ್ಲೇಖವಿದೆ. ದಿಲ್ಲಿಯನ್ನು ಸುತ್ತಿ ಬಂದ ಇವರಿಗೆ ದಿಳ್ಳೆಪ್ಪ ಅಥವಾ ಡಿಳ್ಳೆಪ್ಪ ಎಂಬ ಹೆಸರು ಬಂದಿದೆಯೆಂದು ಪ್ರೊ. ಸುಧಾಕರ ಅವರು ಅಭಿಪ್ರಾಯಪಡುತ್ತಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಎಂಬ ಗ್ರಾಮದಲ್ಲಿ ಡಿಳ್ಳೆಪ್ಪನ ದೇವಾಲಯವೊಂದಿದ್ದು, ಹಲವರು ಅದು ಮೂಲತಃ ರೇವಣಸಿದ್ದರು ಸ್ಥಾಪಿಸಿದ ಬೀರಪ್ಪನ ದೇವಳವೆಂದೂ ಅಭಿಪ್ರಾಯಪಡುತ್ತಾರೆ. ಈ ಕುರಿತು ಸಮಗ್ರ ಸಂಶೋಧನೆಯ ಅಗತ್ಯವಿದೆ. ರೇವಣ್ಣ ಸಿದ್ಧೇಶ್ವರರನ್ನು ಕುರಿತು ಜನಪದ ಗೀತೆಗಳು, ಪುರಾಣಗಳು, ಐತಿಹ್ಯಗಳು ಕರ್ನಾಟಕದ ಹಲವು ಪ್ರದೇಶಗಳಲ್ಲಿ ಪ್ರಚಲಿತದಲ್ಲಿವೆ. ಲಭ್ಯ ಮಾಹಿತಿಗಳ ಪ್ರಕಾರ ಸಾಮಾಜಿಕ ಸಂಘರ್ಷದ ಕಾಲಘಟ್ಟವೊಂದರಲ್ಲಿ ಕುರುಬರ ನಾಯಕತ್ವ ವಹಿಸಿ ಅವರಿಗೆ ಸಾಮಾಜಿಕ ಸ್ಥಾನ-ಮಾನ ತಂದು ಕೊಡಲು ಹೋರಾಡಿದ ಸಿದ್ಧ ಪುರುಷನೆಂದರೆ ಕುರುಬರ ಕುಲಗುರು ರೇವಣ್ಣಸಿದ್ಧನಾಗಿದ್ದಾನೆ. ಕುರುಬರ ಯಾವ ಒಂದು ಸಾಂಸ್ಕøತಿಕ ಆಚರಣೆಯನ್ನು ಗಮನಿಸಿದರೂ ಅದಕ್ಕೆ ಸಂಬಂಧಿಸಿದಂತೆ ಅದರ ಅಭಿವ್ಯಕ್ತಿ ರೂಪ ಆ ಚಟುವಟಿಕೆಯಲ್ಲಿಯೇ ಅಡಕವಾಗಿರುತ್ತದೆ. ರೇವಣ್ಣಸಿದ್ಧೇಶ್ವರ ಜಾತ್ರೆಯ ಕಾಲದಲ್ಲಿ ಕಂತೆ ಮಡಗುವ ಆಚರಣೆಯ ಹಾಡಿನಲ್ಲಿ ಒಂದು ಪ್ರಾಚೀನ ಪಟ್ಟಣದಲ್ಲಿ ನಡೆದ ಕುರುಬ ಜನಾಂಗದ ಶೋಷಣೆ ಮತ್ತು ಅದನ್ನು ಎದುರಿಸಿದ ರೇವಣ್ಣರ ಸಾಹಸವನ್ನು ಈ ಜನಪದ ಹಾಡು ಕಟ್ಟಿಕೊಡುತ್ತದೆ. ಇದನ್ನು ಸಂಗ್ರಹಿಸಿದವರು ವಿದ್ವಾಂಸರಾದ ಎಸ್.ಜಿ. ಸಿದ್ಧರಾಮಯ್ಯ ಅವರಾಗಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಹಾಲುಮತದ ಕುರುಬರನ್ನು ಹೀನಕುರುಬ ಜಿಡ್ಡುಗುರುಬ ಎಂದು ಜರಿದು ಕಲ್ಯಾಣ ನಗರಿಯಿಂದ ಏಳು ಬೇಲಿಯಾಚೆ ಅಟ್ಟಿದ ಪ್ರಸಂಗವು ಜನಪದ ಸಾಹಿತ್ಯದಲ್ಲಿ ಬರುತ್ತದೆ. ಆಗ ಕಲ್ಯಾಣ ನಗರಿಯ ಪ್ರಜೆಗಳಾದ ಜೈನರು, ಲಿಂಗಾಯತರು ಕುರುಬರಿಗೆ ಈ ಪದವನ್ನು ಬಳಸುತ್ತಾರೆ. ಅವರಿದ್ದಿದ್ದಿತ್ತಾಕೆ ಇದ್ದಲ ಚೆಲ್ಲೋರೆ ಅವರಿದ್ದಲ್ಲಿ ಜಿಡ ನಿಲಬಾರ | ಆಲುಮತನೋರ ಆರು ಕಳ್ಯಾಚೆ ಇಡಿರಲ್ಲ || ಎಂದು ಕುರುಬರನ್ನು ಒಂದು ಕುಲವಲ್ಲ, ಬಾಂದಗವಲ್ಲ ಅಂತ ಊರು ಬಿಟ್ಟು ದೂರ ಆರು ಕಳ್ಳೆಗಳ ಆಚೆ ಇಡುತ್ತಾರೆ. ಇದನ್ನು ತಿಳಿದ ರೇವಣಸಿದ್ಧನು ಮೇಲ್ವರ್ಗದವರ ಮೇಲೆ ಮುನಿದು ಬೀಳುತ್ತಾನೆ. ಶಿವನ ಕುರಿತು ಉಗ್ರ ತಪಸ್ಸು ಮಾಡಿ, ಅವನ ತಪಸ್ಸು ಎಷ್ಟು ಉಗ್ರವಾಗಿರುತ್ತದೆಂದರೆ ಅವನ ಒಂದೊಂದು ಅಂಗದಲ್ಲಿ ಒಂದೊಂದು ಮರಗಿಡಗಳು ಬೆಳೆದು ಕಾಡು ನಿರ್ಮಾಣವಾಗಿ ಹಕ್ಕಿಪಕ್ಷಿ, ಉರಗ, ಚೇಳುಗಳು ವಾಸಿಸುತ್ತವೆ. ಹೀಗೆ ರೇವಣ್ಣನವರ ತಪಸ್ಸು ದಿನದಿನಕ್ಕೆ ತೀವ್ರವಾದಂತೆ ಅವರ ಶರೀರದ ಸುತ್ತ ಹುತ್ತ ಬೆಳೆಯುತ್ತದೆ. ಆಗ ದನದ ಹಿಂಡಿನಲ್ಲಿದ್ದ ಸತ್ಯವಂತರ ಮನೆಯ ಸತ್ಯುಳ್ಳ ಹಸುವೇ ಹೋಗಿ ನಿತ್ಯ ಹುತ್ತಕ್ಕೆ ನೊರೆಹಾಲು ಕರೆಯತೊಡಗುತ್ತದೆ. ಇದನ್ನು ಕಂಡು ಹಸುವಿನ ಒಡೆಯ – ಏನೆಂದು ನಾ ಕಾಣೆ ಎಂದೆಂದು ನಾ ಕಾಣೆ ಏನು ಮಾಯಗಳು ತಿಳಿಯಾವೆ | ನಿಮಸಮ್ದ ರೇವಣುರಲ್ಲದೆ ಬದುಲಲ್ಲ. ಎಂದು ರೇವಣ್ಣನ ತಪಸ್ಸಿನ ಪ್ರಭೆಗೆ ಬೆರಗಾಗಿ, ಗುದ್ದಲಿಯನ್ನು ತರಿಸಿ ಹುತ್ತವನ್ನು ಬಗೆಸಿ, ಹಚ್ಚಿದ ಜಡೆಯನ್ನೂ ಬಿಡಿಸಿ ನೋಡುತ್ತಾನೆ. ಆಗ ರೇವಣ್ಣನವರ ತಪಸ್ಸನ್ನು ಮೆಚ್ಚಿ ಶಿವನೂ ನಾರಾಯಣನೂ ಬಂದು ರೇವಣ್ಣನವರಿದಿರಿಗೆ ನಿಂತು ಕೇಳುತ್ತಾರೆ. ಅತ್ತೂರ ಕೊಡುವೆ ಅತ್ತೋ ತೇಜಿ ಕೊಡುವೆ ಮತ್ತೆ ನಮಸಮ್ದ ದೊರೆತನ | ನಾ ಕೊಡುವೆ ನೀವತ್ತೀದ ತ್ರಬಸ ಯಿಳಿಗುರುವೆ. ಎಂದು ಕೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹಾಲುಮತದ ಜನಪದರುಶಿವ ಮತ್ತು ನಾರಾಯಣರಿಂದಲೂ’ ತಮ್ಮ ಗುರುವಿಗೆ ಗುರು ಅಂತಾ ಸಂಭೋಧಿಸಿರುವುದು. ರೇವಣ್ಣ ಹಿಡಿದ ಪಟ್ಟು ಬಿಡುವುದಿಲ್ಲ. ತಾನು ಯಾವುದಕ್ಕಾಗಿ ತಪಸ್ಸು ಮಾಡಿದ್ದನೋ ಆ ಉದ್ದೇಶವನ್ನು ಅವರ ಮುಂದಿಟ್ಟು ಹಠ ಹಿಡಿಯುತ್ತಾನೆ.


ಅತ್ತೂರು ಐದಾವೆ, ಅತ್ತೋ ತೇಜಿ ಐದಾವೆ
ಮತ್ತೆ ನಿಮಸಮ್ದ ದೊರೆತನ | ನಮಗೀವೆ
ಅತ್ತು ಕಳ್ಯಾಚೆ ಕುರುಬರ | ಕೊಟ್ಟಾರೆ
ನಾನತ್ತೀದ ತ್ರಬಸ ಯಿಳುದೇನು.
ಎಂದು ಹಠ ಹಿಡಿಯುತ್ತಾರೆ. ಅವನ ನಿಶ್ಚಲವಾದ ನಿರ್ಧಾರವನ್ನು ಕಂಡು ಶಿವ ಮತ್ತು ನಾರಾಯಣರು ಇವನನ್ನು ಕುರಿತು ಹೀಯಾಳಿಸುತ್ತಾರೆ. ಇದಕ್ಕೂ ಜಗ್ಗದ ರೇವಣ್ಣ ಈ ಹೀಯಾಳಿಕೆಯನ್ನು ಅವರಿಗೇ ತಿರುಗಿಸುತ್ತಾನೆ.
ಸೀಮೆಯ ನಾನೊಲ್ಲೆ ಭೂಮಿಯ ನಾನೊಲ್ಲೆ
ಜಿಡ್ಡುಗುರುಬರನ್ನು ನಾನು | ಪಡೆದದ್ದೇ
ಆದರೆ ಅವರು ಕಟ್ಟು ಮರಿ
ಚೆಂಡನ್ನು ನಡೆಸ್ಯಾರು
ಎಂದು ಉತ್ತರಿಸುತ್ತಾನೆ. ಹೀಗೆ ತಪಸ್ಸನ್ನು ಮಾಡಿ ಶಿವನಾರಾಯಣರನ್ನು ಗೆದ್ದ ರೇವಣ್ಣನವರು ಅವರು ನೀಡಿದ ವರದಿಂದ `ಎತ್ತು ಕರಡೆ ಜೂಜು ಮತ್ತೆ ಪಗಡೆ ಜೂಜು” ಆಡಿ ಕಲ್ಯಾಣ ನಗರಿಯ ಮೇಲ್ವರ್ಗದವರನ್ನು ಗೆದ್ದುಕೊಳ್ಳುತ್ತಾನೆ. ಕಾಳಗವನ್ನು ಗೆದ್ದ ರೇವಣ್ಣನು ಪಲ್ಲಕ್ಕಿ ಏರಿ ಬಂದು ಕಲ್ಯಾಣ ಪಟ್ಟಣದೊಳಗೆ ಕುರುಬರ ಗುರುತನವನ್ನು ಪಡೆಯುತ್ತಾನೆ. ಅವನಿಗೆ ಗುರುತನ ಆದ ಸಂಗತಿಯನ್ನು ಕಲ್ಯಾಣದೊಳಗೆ ಶಾಸನವಾಗಿ ಕೆತ್ತಿಸಿದರಂತೆ ಅದನ್ನು ಕುರಿತು ಜನಪದ ಅಭಿವ್ಯಕ್ತಿ ಹೀಗಿದೆ.
ಕಲ್ಯಾಣ ಪಟ್ಟಣದೊಳಗೆ ಅಲ್ಲೇನೆ ಚೋಜಿಗ
ಅಲ್ಲಿ ನಮ ಗುರುವೀಗೆ ಗುರುತಾನ | ಆದವೆಂದು
ಕಲ್ಲೀಗಿ ಸಾಸಾಣ ವೊಡುದಾವು.
ಗುರುತನ ಪಡೆದ ರೇವಣ್ಣನು ಮತ್ತೆ ಬಿಜ್ಜಳರಾಯನ ಪಟ್ಟಸಾಲೆಯೊಳಗೆ ಒಪ್ಪಗೆ ಹಾಕಿದ ಮಣೆ ಮೇಲೆ ಪಟ್ಟದ ವೀಳ್ಯೆ ಪಡೆಯುತ್ತಾನೆ. ಹೀಗೆ ಕುರುಬರ ಗುರುತನದ ಪಟ್ಟ ಪಡೆದ ರೇವಣ್ಣನಿಗೆ ಗುರು ಕೈಂಕರ್ಯದ ಸತ್ತಿಗೆ ಹಿಡಿದವು. ಮರುಗ-ಮಲ್ಲಿಗೆ, ಸಿರಿಗಂಧ ರುದ್ರಾಕ್ಷಿಸರ ಧರಿಸಿದ ರೇವಣ್ಣನಿಗೆ ಉತ್ತರ ದೇಶದ ಶಿಷ್ಯರೂ ಸಹ ಸತ್ತಿಗೆ ಪಾಲಿಕೆಗಳನ್ನು ಕೊಂಡು ಕಾಣಿಕೆಯಾಗಿ ಅರ್ಪಿಸುತ್ತಾರೆ.
ಈ ಐತಿಹಾಸಿಕ ಜನಪದ ಕಾವ್ಯವು ಪ್ರಮುಖವಾಗಿ ಸಾಮಾಜಿಕ ಸಂಘರ್ಷವೊಂದನ್ನು ವಸ್ತುವಾಗಿಸಿ ಕೊಂಡಿರುವ ಅನುಭವಾತ್ಮಕ ಚಿತ್ರವನ್ನು ತೆರೆದಿಡುತ್ತದೆ. ಈ ಅನುಭವವನ್ನು ಹಾಡುತ್ತಿರುವ ಮನಸ್ಸು ಸಂಘರ್ಷದಲ್ಲಿ ನೋವುಂಡ ನೆಲೆಗೆ ಸೇರಿದ್ದಾಗಿದೆ. ಜನಾಂಗವೊಂದು ಅನುಭವಿಸಿದ ಸಾಮಾಜಿಕ ಅವಮಾನವೇ ಈ ನೆಲೆ. ಸಾಮಾನ್ಯವಾಗಿ ನೋವಿನ ನೆಲೆಯಿಂದ ಬಂದ ಮಾತುಗಳು ನೇರ ಹೇಳಿಕೆಗಳಾಗಿರುವುದಿಲ್ಲ. ಪಟ್ಟಪಾಡು ಹುಟ್ಟು ಹಾಡಾಗುತ್ತದೆ. ಅಲ್ಲದೇ ಈ ಹಾಡು ನಿರ್ಧಿಷ್ಟ ಆಚರಣೆಯ ಸಂದರ್ಭದಲ್ಲಿ ಬಳಸುವ ಇತರ ಪರಿಕರಗಳಂತೆ ಒಂದು ಪರಿಕರವಾದರೂ ಇದು ಬಹಳ ಮುಖ್ಯ ಪರಿಕರ ಎಂಬುದು ಗಮನಾರ್ಹ. ಆದ್ದರಿಂದ ಆಚರಣೆಯ ಸ್ವರೂಪವನ್ನು ವಿವರಗಳಾದ್ಯಂತವಾಗಿ ಕಾಲಗತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿಕೊಂಡು ಹೋಗುವ ಪ್ರಧಾನ ವಾಹಕ ಇದು. ಹೀಗಾಗಿ ಆಚರಣೆಗೂ, ಈ ಗೀತೆಗೂ ಜೀವರಕ್ತ ಸಂಬಂಧವಿದೆ.

ಹಾಲುಮತ ಕುರುಬ ಜನಾಂಗದ ಕುಲಗುರು ರೇವಣಸಿದ್ಧರು. ರೇವಣಸಿದ್ಧನಿಗೆ ಸಿದ್ಧೇಶ್ವರ, ಕರಿಸಿದ್ದೇಶ್ವರ, ಕಾಡುಸಿದ್ಧೇಶ್ವರ, ಚೆನ್ನಮಲ್ಲೇಶ, ಮಳೆಯ ಮಲ್ಲೇಶ, ಸಿದ್ಧರ ಮಲ್ಲಯ್ಯ, ದೊಡ್ಡಯ್ಯ, ಭೀಮೇಶ್ವರ ಹಾಗೂ ಡಿ(ದಿ)ಳ್ಳೆಪ್ಪ ಎಂಬ ಹೆಸರುಗಳುಂಟು. ಶರಣರ ಹಿರಿಯ ಸಮಕಾಲೀನನಾಗಿದ್ದ ರೇವಣಸಿದ್ಧನು ಶಾಂತಿಮಯ ಮುತ್ತಯ್ಯನ ಮಗನು. ಇವನ ಕಾಲವನ್ನು ಇತಿಹಾಸಕಾರರು ಕ್ರಿ.ಶ.1110 ರಿಂದ 1227ರವರೆಗೆ ಎಂದು ಗುರುತಿಸಿದ್ದಾರೆ (ಬಿರಾದಾರ ಬಿ. ಜಿ. (ಡಾ.), ಕುರುಬರ ಗುರು ಒಡೆಯರು, ಪುಟ 198). ಚಿಕ್ಕಂದಿನಲ್ಲಿ ತಂದೆತಾಯಿಗಳನ್ನು ಕಳೆದುಕೊಂಡ ರೇವಣಸಿದ್ಧನು ನಾಥ ಪಂಥದ ಅನುಯಾಯಿಯಾಗಿದ್ದು ಉತ್ತರ ಭಾರತವನ್ನೆಲ್ಲ ಸಂಚರಿಸಿದನೆಂದು ನವನಾಥರ ಚರಿತ್ರೆ’ ತಿಳಿಸುತ್ತದೆ. ನಾಥಪಂಥದ ಸಿದ್ಧಾಂತಗಳು ಹಿಡಿಸದೆ ಸಿದ್ಧರೇವಣನು ಕೊಲ್ಲಿಪಾಕಿಯ ಸೋಮೇಶ್ವರನ ಸನ್ನಿಧಾನದಲ್ಲಿ ಶೈವಸಿದ್ಧಪಂಥವನ್ನು ಸ್ವೀಕರಿಸುತ್ತಾನೆ. ಇದನ್ನು ಹರಿಹರ ಕವಿಯುಲಿಂಗೋದ್ಭವ’ ಎಂದು ರೇವಣಸಿದ್ಧೇಶ್ವರ ರಗಳೆ ಎಂಬ ಕಾವ್ಯದಲ್ಲಿ ವಿವರಿಸಿದ್ದಾನೆ. ಹುಟ್ಟುವಾಗಲೆ ಕಂತೆ(ಕಂಬಳಿ), ವಜ್ರಕುಂಡಲ, ಲಾಕುಳ(ಯೋಗದಂಡ), ಪಾವುಗೆ(ಮರದ ಪಾದರಕ್ಷೆ), ಕೋವಣ(ಲಂಗೋಟೆ) ಧರಿಸುವುದು ಅಸಾಧ್ಯವಾದ್ದರಿಂದ ನಾವು ಇದು ರೇವಣಸಿದ್ದನ ನಾಥಪಂಥದಿಂದ ಶೈವಸಿದ್ಧ ಪಂಥಕ್ಕೆ ಮತಾಂತರ ಪ್ರಕ್ರಿಯೆಯೆಂದು ವೈಜ್ಞಾನಿಕವಾಗಿ ಯೋಚಿಸಬಹುದು. ನಾಥಸಿದ್ಧರಿಗೂ ರೇವಣ, ಅಲ್ಲಮ ಮೊದಲಾದ ಶೈವ ಸಿದ್ಧರಿಗೂ ಸಂಬಂಧವಿದ್ದಿರಬೇಕು. ಇವರೆಲ್ಲರೂ ಮೊದಲು ನಾಥಸಿದ್ಧರೇ ಆಗಿದ್ದರು’ ಎಂದು ಶ್ರೀ ಕುಂದಣಗಾರ ಮತ್ತು ಕಪಟರಾಳ ಕೃಷ್ಣ ಮೊದಲಾದ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ರೇವಣಸಿದ್ಧರು ಹಾಲುಮತ ಕುರುಬ ಜನಾಂಗಕ್ಕೆ ಸೇರಿದವರೆಂದು ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾದ ಡಾ. ಎಂ.ಎಂ. ಕಲಬುರ್ಗಿ ಪ್ರತಿಪಾದಿಸಿದ್ದಾರೆ(ಡಾ. ಎಂ.ಎಂ. ಕಲಬುರ್ಗಿ, ಮಾರ್ಗ ಸಂಪುಟ 4). ರೇವಣಸಿದ್ಧನು ಕುರುಬ ಜನಾಂಗ ಮೂಲದವನು ಎಂದು ಮಹಾರಾಷ್ಟ್ರದ ಪ್ರಸಿದ್ಧ ವಿದ್ವಾಂಸರಾದ ಡಾ. ರಾಮಚಂದ್ರ ಚಿಂತಾಮಣಿ ಢೇರೆ ಅವರುರೇವಣಸಿದ್ಧರ ಸ್ಥಾನ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಅಪ್ಪಾಚಿವಾಡಿ’. ಇವನು ದುಗ್ಧ(ಹಾಲು) ಸಂಪ್ರದಾಯದ ಧನಗಾರ(ಕುರುಬ) ಮೂಲದ ಪೂಜನೀಯ ವ್ಯಕ್ತಿ’ ಎಂದು ಅಭಿಪ್ರಾಯಪಡುತ್ತಾರೆ(ಡಾ.ರಾ.ಚಿ.ಢೇರೆ, ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ). ನಾಥಪಂಥದ ಸಿದ್ಧರ ಸಹಚರ್ಯ ಇದ್ದಾಗಲೇ ರೇವಣಸಿದ್ಧ ಅನೇಕ ಸಿದ್ದಿಗಳನ್ನು ಹೊಂದಿದ್ದರೆಂದು ನವನಾಥರ ಚರಿತ್ರೆ ತಿಳಿಸುತ್ತದೆ. ವೈದ್ಯದಲ್ಲಿಯೂ ಅಪ್ರತಿಮ ಸಿದ್ಧಿಯನ್ನು ಪಡೆದಿದ್ದರು ಎಂಬುದಕ್ಕೆ ತಮ್ಮ ಮಗ ರುದ್ರಮುನಿಯ ಮೂರು ತಿಂಗಳ ಪಿಂಡವನ್ನು ತಮ್ಮ ಪತ್ನಿ ಸುಂದರನಾಚಿಯ ಗರ್ಭದಿಂದ ತೆಗೆದು ಪೋಷಿಸಿ ಬೆಳೆಸಿದರು ಎಂಬುದು ಸಾಕ್ಷಿ ಒದಗಿಸುತ್ತದೆ. ಇವರು ಬಹುತೇಕ ರಾಜಮಹಾರಾಜರಿಂದ ಪೂಜಿತರಾದವರು. ಬಿಜ್ಜಳ ತನ್ನ ಮಗಳನ್ನು ಶ್ರವಣಬೆಳಗೊಳ ಮೊದಲಾದ ಕಡೆಗೆ ತೀರ್ಥಯಾತ್ರೆಗೆ ಕಳಿಸುವಾಗ ರೇವಣಸಿದ್ದರನ್ನು ಜೊತೆ ಮಾಡಿ ಕಳಿಸುತ್ತಿದ್ದನೆಂಬ ಸಂಗತಿ ಬಿಜ್ಜಳ ಚರಿತ್ರೆಯಿಂದ ತಿಳಿದು ಬರುತ್ತದೆ. ದೇವಗಿರಿ ಯಾದವರ ಐದನೆಯ ಭಿಲ್ಲಮಲ್ಲನಿಗೆ ರಾಜಗುರುವಾಗಿ ಪರೋಕ್ಷವಾಗಿ ರಾಜ್ಯವಾಳಿದ ಸಂಗತಿ ಹಳೆ ಮೈಸೂರು ಕಡೆಯ ಕುರುಬರ ಮದುವೆಗಳಲ್ಲಿ ವಧು-ವರರಿಗೆ ಹೇಳುವ ಆಶೀರ್ವಚನದಲ್ಲಿ ಬರುವಭಿಲ್ಲ ರಾಜ್ಯವನಾಳಿ’ ಎಂಬ ಮಾತಿನಿಂದ ರುಜುವಾತಾಗುತ್ತದೆ. ಯಾದವರ ಅಧೀನ ರಾಜನಾದ ಶಿಲಾಹಾರ ವಂಶದ ವಿಕ್ರಮಾದಿತ್ಯ ಸಿದ್ಧಗಿರಿಯಲ್ಲಿ ರೇವಣಸಿದ್ಧರಿಗೆ ಒಂದು ಮಠ ಕಟ್ಟಿಸಿಕೊಟ್ಟಿರುವುದಕ್ಕೆ ಸಾಕ್ಷಿ ಇದೆ. ಹಾಗೆಯೆ ಮೂರನೆಯ ಕುಲೋತ್ತುಂಗ ಚೋಳ ಹಳೆಯ ಮೈಸೂರಿನ ಭಾಗವನ್ನು ಆಳುವಾಗ(ರೇವಣಸಿದ್ಧ ಎರಡನೆಯ ಚೋಳನ ಮಗಳು ಸೌಂದರಿಯನ್ನು ಮದುವೆಯಾಗಿದ್ದರು) ರೇವಣಸಿದ್ದರಿಗೆ ಆನೆಕಲ್ ರಾಜಪುರದಲ್ಲಿ ಒಂದು ಗುರುಮಠ ಕಟ್ಟಿಸಿ ಕೊಟ್ಟಿರುವುದಕ್ಕೆ ಆಧಾರವಿದೆ. ಚೋಳ ರಾಜನ ಅಧೀನ ರಾಜನಾದ ತೆಂಗಿನಕಲ್ ಚಾಮರಾಜ ರೇವಣಸಿದ್ಧೇಶ್ವರರ ಬೆಟ್ಟಕ್ಕೆ ಅಡಿಯಿಂದ ಮುಡಿಯವರೆಗೆ ಮೆಟ್ಟಿಲನ್ನು ಕಟ್ಟಿಸಿ, ಶಿವಲಿಂಗಗಳ ಪ್ರತಿಷ್ಠಾಪನೆಯ ಕಾರ್ಯ, ದೊಡ್ಡ ರೇವಣಾರಾಧ್ಯ ಹಾಗೂ ಚಿಕ್ಕ ರೇವಣಾರಾಧ್ಯ(ರುದ್ರಮುನಿ)ರ ಸಾನಿಧ್ಯದಲ್ಲಿ ನೆರವೇರಿಸಿದ್ದನ್ನು ಭೀಮೇಶಾದ್ರಿ ಪುರಾಣ’ ದಾಖಲಿಸುತ್ತದೆ. ಹಾಗೆಯೆ ಉಜ್ಜನೀಪುರವರಾಧೀಶನಾದ ಗುತ್ತಲದ ವಿಕ್ರಮಾದಿತ್ಯನಿಗೆ ಕತ್ತಿ ಕೊಟ್ಟಿದ್ದನ್ನು (ಕತ್ತಿ ಇಲ್ಲಿ ರಾಜಕೀಯ ಶಕ್ತಿಗೆ ಸಂಕೇತ) ಗ್ರಂಥಗಳು ದಾಖಲಿಸುತ್ತವೆ. ಇವರ ಹೆಸರಿನಲ್ಲಿರುವ ಮಠಗಳು, ದೇವಾಲಯಗಳು, ಗುಡ್ಡಗಳು, ಕೊಳ್ಳಗಳು ಇವರ ಸಿದ್ಧಿ, ಪ್ರಸಿದ್ಧಿ, ಪ್ರಭಾವ ಮತ್ತು ಜನಪ್ರಿಯತೆಗೆ ಪ್ರತೀಕವಾಗಿವೆ(ಪ್ರೊ. ಸುಧಾಕರ, ಹಾಲಕೆನೆ, ರೇವಣಸಿದ್ಧೇಶ್ವರ ಲೇಖನ). ರೇವಣಸಿದ್ಧರು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಕರ್ತರೂ ಆಗಿದ್ದರೆಂಬುದಕ್ಕೆ ಹರಿಹರ ಕವಿಯತಟಾಕಂಗಳನೆತ್ತಿಸುತ್ತಂ, ಶಿವಪುರಂಗಳ ಮಾಡಿಸುತ್ತಂ, ಸತ್ರಂಗಳಂ ನಿರ್ಮಿಸುತ್ತಂ, ಹೆಳವರ್ಗೆ ಕಾಲ್ಗಳಂ, ಕುರುಡರ್ಗೆ ಕಣ್ಗಳಂ, ಬಂಜೆಯರ್ಗೆ ಮಕ್ಕಳಂ ಕೊಟ್ಟು, ಅರಸುಮಕ್ಕಳ್ಗೆ ರಾಜ್ಯಮಂ, ಕಂಡ ಕಂಡ ಬಡವರ್ಗೆ ಸಂಪದವನೀಯುತ್ತಂ’ ಎಂಬ ವರ್ಣನೆ ಅವರ ಸಾಮಾಜಿಕ ಕೆಲಸ ಕಾರ್ಯಗಳ ಮಾಹಿತಿಯನ್ನು ಒದಗಿಸುತ್ತದೆ. ಇವರು ಪಂಚಾಚಾರ್ಯರಲ್ಲಿ ಒಬ್ಬರೆಂದು ಪರಿಗಣಿಸುತ್ತ ಅವರನ್ನು ರೇಣುಕಾಚಾರ್ಯರೆಂದು ಪ್ರಚಾರ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ರೇವಣಸಿದ್ಧರು ಶರಣ ಸಂಪ್ರದಾಯದ ಪುರೋಹಿತಶಾಹಿ ವಿರೋಧಿಗಳೆಂಬುದಕ್ಕೆ ಅವರು ಹುಟ್ಟುಹಾಕಿದ ಕುರುಬರ ಕುಲಗುರುಗಳ ಸಂಪ್ರದಾಯವಾದ ಒಡೆಯರು’ ಸಾಕ್ಷಿಯಾಗಿದ್ದಾರೆ. ಸಂಸ್ಕøತ ಮಂತ್ರಗಳಿಗೆ ಬದಲಾಗಿ ಅಚ್ಚ ಕನ್ನಡ ಮಂತ್ರಗಳನ್ನು ರಚಿಸಿ ಕುರುಬರ ಮದುವೆಯಲ್ಲಿ ಪಠಣ ಮಾಡಿ ಪ್ರಗತಿಪರ ಮಾಂಗಲ್ಯಧಾರಣೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಕುರುಬರ ಗುರುಗಳಾದ ಒಡೆಯರ ಸಾಮಾಜಿಕ, ಧಾರ್ಮಿಕ ಆಚರಣೆಯಲ್ಲಿ ಕಂಡುಬರುವಕಾಲಿಲ್ಲದ ಐನೋರು’ ಮತ್ತು ಒಡೇರಮ್ಮನಿಗೆ’ ಇರುವ ಸ್ವಾತಂತ್ರ್ಯ, ಗೌರವಗಳು ಇಂದಿನ ಸಂದರ್ಭದಲ್ಲಿ ಪ್ರಗತಿಪರ ಹೆಜ್ಜೆಗಳಾಗಿವೆ. ಕುರುಬರ ಕುಲಗುರು ರೇವಣಸಿದ್ದರಿಗೂ ಮತ್ತು ಕುರುಬರ ಕುಲದೈವ ಬೀರಪ್ಪನಿಗೂ ಧಾರ್ಮಿಕವಾದ ಅವಿನಾಭಾವ ಸಂಬಂಧವಿದೆ. ಎಲ್ಲೆಲ್ಲಿ ರೇವಣಸಿದ್ಧರು ಸಂಚಾರಮಾಡಿ ಧರ್ಮ ಪ್ರಚಾರ ಮಾಡಿ ಮಠ ಕಟ್ಟಿದರೋ ಅಲ್ಲೆಲ್ಲ ಬೀರಪ್ಪ ಮತ್ತು ಬೀರಪ್ಪನ ಪರಿಷ್ಕøತ ರೂಪವಾದ ವಿರಭದ್ರನ ದೇವಾಲಯಗಳನ್ನು ಪ್ರತಿಷ್ಟಾಪಿಸಿದ್ದಾರೆ ಹಾಗೂ ಹಾಲುಮತ ಕುರುಬ ಮತ್ತು ಲಿಂಗವಂತ ಜನಾಂಗಗಳ ಸಂಕರಶೀಲತೆಗೆ ಬುನಾದಿಯನ್ನೂ ಹಾಕಿದ್ದಾರೆ. ರೇವಣಸಿದ್ಧರು ನಾಥ ಪಂಥದ ಅನುಯಾಯಿಯಾಗಿದ್ದಾಗ ಉತ್ತರ ಭಾರತದ 700 ಗ್ರಾಮಗಳನ್ನು ಸುತ್ತಿ ಬಂದಿದ್ದರೆಂದೂ ಮತ್ತು ದಿ(ಡಿ)ಳ್ಳಿ(ಲ್ಲಿ)ಯವರೆಗೆ ಹೋಗಿ ಬಂದಿದ್ದರೆಂದೂ ಗ್ರಂಥಗಳಲ್ಲಿ ಉಲ್ಲೇಖವಿದೆ. ದಿಲ್ಲಿಯನ್ನು ಸುತ್ತಿ ಬಂದ ಇವರಿಗೆ ದಿಳ್ಳೆಪ್ಪ ಅಥವಾ ಡಿಳ್ಳೆಪ್ಪ ಎಂಬ ಹೆಸರು ಬಂದಿದೆಯೆಂದು ಪ್ರೊ. ಸುಧಾಕರ ಅವರು ಅಭಿಪ್ರಾಯಪಡುತ್ತಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಎಂಬ ಗ್ರಾಮದಲ್ಲಿ ಡಿಳ್ಳೆಪ್ಪನ ದೇವಾಲಯವೊಂದಿದ್ದು, ಹಲವರು ಅದು ಮೂಲತಃ ರೇವಣಸಿದ್ದರು ಸ್ಥಾಪಿಸಿದ ಬೀರಪ್ಪನ ದೇವಳವೆಂದೂ ಅಭಿಪ್ರಾಯಪಡುತ್ತಾರೆ. ಈ ಕುರಿತು ಸಮಗ್ರ ಸಂಶೋಧನೆಯ ಅಗತ್ಯವಿದೆ. ರೇವಣ್ಣ ಸಿದ್ಧೇಶ್ವರರನ್ನು ಕುರಿತು ಜನಪದ ಗೀತೆಗಳು, ಪುರಾಣಗಳು, ಐತಿಹ್ಯಗಳು ಕರ್ನಾಟಕದ ಹಲವು ಪ್ರದೇಶಗಳಲ್ಲಿ ಪ್ರಚಲಿತದಲ್ಲಿವೆ. ಲಭ್ಯ ಮಾಹಿತಿಗಳ ಪ್ರಕಾರ ಸಾಮಾಜಿಕ ಸಂಘರ್ಷದ ಕಾಲಘಟ್ಟವೊಂದರಲ್ಲಿ ಕುರುಬರ ನಾಯಕತ್ವ ವಹಿಸಿ ಅವರಿಗೆ ಸಾಮಾಜಿಕ ಸ್ಥಾನ-ಮಾನ ತಂದು ಕೊಡಲು ಹೋರಾಡಿದ ಸಿದ್ಧ ಪುರುಷನೆಂದರೆ ಕುರುಬರ ಕುಲಗುರು ರೇವಣ್ಣಸಿದ್ಧನಾಗಿದ್ದಾನೆ. ಕುರುಬರ ಯಾವ ಒಂದು ಸಾಂಸ್ಕøತಿಕ ಆಚರಣೆಯನ್ನು ಗಮನಿಸಿದರೂ ಅದಕ್ಕೆ ಸಂಬಂಧಿಸಿದಂತೆ ಅದರ ಅಭಿವ್ಯಕ್ತಿ ರೂಪ ಆ ಚಟುವಟಿಕೆಯಲ್ಲಿಯೇ ಅಡಕವಾಗಿರುತ್ತದೆ. ರೇವಣ್ಣಸಿದ್ಧೇಶ್ವರ ಜಾತ್ರೆಯ ಕಾಲದಲ್ಲಿ ಕಂತೆ ಮಡಗುವ ಆಚರಣೆಯ ಹಾಡಿನಲ್ಲಿ ಒಂದು ಪ್ರಾಚೀನ ಪಟ್ಟಣದಲ್ಲಿ ನಡೆದ ಕುರುಬ ಜನಾಂಗದ ಶೋಷಣೆ ಮತ್ತು ಅದನ್ನು ಎದುರಿಸಿದ ರೇವಣ್ಣರ ಸಾಹಸವನ್ನು ಈ ಜನಪದ ಹಾಡು ಕಟ್ಟಿಕೊಡುತ್ತದೆ. ಇದನ್ನು ಸಂಗ್ರಹಿಸಿದವರು ವಿದ್ವಾಂಸರಾದ ಎಸ್.ಜಿ. ಸಿದ್ಧರಾಮಯ್ಯ ಅವರಾಗಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಹಾಲುಮತದ ಕುರುಬರನ್ನು ಹೀನಕುರುಬ ಜಿಡ್ಡುಗುರುಬ ಎಂದು ಜರಿದು ಕಲ್ಯಾಣ ನಗರಿಯಿಂದ ಏಳು ಬೇಲಿಯಾಚೆ ಅಟ್ಟಿದ ಪ್ರಸಂಗವು ಜನಪದ ಸಾಹಿತ್ಯದಲ್ಲಿ ಬರುತ್ತದೆ. ಆಗ ಕಲ್ಯಾಣ ನಗರಿಯ ಪ್ರಜೆಗಳಾದ ಜೈನರು, ಲಿಂಗಾಯತರು ಕುರುಬರಿಗೆ ಈ ಪದವನ್ನು ಬಳಸುತ್ತಾರೆ. ಅವರಿದ್ದಿದ್ದಿತ್ತಾಕೆ ಇದ್ದಲ ಚೆಲ್ಲೋರೆ ಅವರಿದ್ದಲ್ಲಿ ಜಿಡ ನಿಲಬಾರ | ಆಲುಮತನೋರ ಆರು ಕಳ್ಯಾಚೆ ಇಡಿರಲ್ಲ || ಎಂದು ಕುರುಬರನ್ನು ಒಂದು ಕುಲವಲ್ಲ, ಬಾಂದಗವಲ್ಲ ಅಂತ ಊರು ಬಿಟ್ಟು ದೂರ ಆರು ಕಳ್ಳೆಗಳ ಆಚೆ ಇಡುತ್ತಾರೆ. ಇದನ್ನು ತಿಳಿದ ರೇವಣಸಿದ್ಧನು ಮೇಲ್ವರ್ಗದವರ ಮೇಲೆ ಮುನಿದು ಬೀಳುತ್ತಾನೆ. ಶಿವನ ಕುರಿತು ಉಗ್ರ ತಪಸ್ಸು ಮಾಡಿ, ಅವನ ತಪಸ್ಸು ಎಷ್ಟು ಉಗ್ರವಾಗಿರುತ್ತದೆಂದರೆ ಅವನ ಒಂದೊಂದು ಅಂಗದಲ್ಲಿ ಒಂದೊಂದು ಮರಗಿಡಗಳು ಬೆಳೆದು ಕಾಡು ನಿರ್ಮಾಣವಾಗಿ ಹಕ್ಕಿಪಕ್ಷಿ, ಉರಗ, ಚೇಳುಗಳು ವಾಸಿಸುತ್ತವೆ. ಹೀಗೆ ರೇವಣ್ಣನವರ ತಪಸ್ಸು ದಿನದಿನಕ್ಕೆ ತೀವ್ರವಾದಂತೆ ಅವರ ಶರೀರದ ಸುತ್ತ ಹುತ್ತ ಬೆಳೆಯುತ್ತದೆ. ಆಗ ದನದ ಹಿಂಡಿನಲ್ಲಿದ್ದ ಸತ್ಯವಂತರ ಮನೆಯ ಸತ್ಯುಳ್ಳ ಹಸುವೇ ಹೋಗಿ ನಿತ್ಯ ಹುತ್ತಕ್ಕೆ ನೊರೆಹಾಲು ಕರೆಯತೊಡಗುತ್ತದೆ. ಇದನ್ನು ಕಂಡು ಹಸುವಿನ ಒಡೆಯ – ಏನೆಂದು ನಾ ಕಾಣೆ ಎಂದೆಂದು ನಾ ಕಾಣೆ ಏನು ಮಾಯಗಳು ತಿಳಿಯಾವೆ | ನಿಮಸಮ್ದ ರೇವಣುರಲ್ಲದೆ ಬದುಲಲ್ಲ. ಎಂದು ರೇವಣ್ಣನ ತಪಸ್ಸಿನ ಪ್ರಭೆಗೆ ಬೆರಗಾಗಿ, ಗುದ್ದಲಿಯನ್ನು ತರಿಸಿ ಹುತ್ತವನ್ನು ಬಗೆಸಿ, ಹಚ್ಚಿದ ಜಡೆಯನ್ನೂ ಬಿಡಿಸಿ ನೋಡುತ್ತಾನೆ. ಆಗ ರೇವಣ್ಣನವರ ತಪಸ್ಸನ್ನು ಮೆಚ್ಚಿ ಶಿವನೂ ನಾರಾಯಣನೂ ಬಂದು ರೇವಣ್ಣನವರಿದಿರಿಗೆ ನಿಂತು ಕೇಳುತ್ತಾರೆ. ಅತ್ತೂರ ಕೊಡುವೆ ಅತ್ತೋ ತೇಜಿ ಕೊಡುವೆ ಮತ್ತೆ ನಮಸಮ್ದ ದೊರೆತನ | ನಾ ಕೊಡುವೆ ನೀವತ್ತೀದ ತ್ರಬಸ ಯಿಳಿಗುರುವೆ. ಎಂದು ಕೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹಾಲುಮತದ ಜನಪದರುಶಿವ ಮತ್ತು ನಾರಾಯಣರಿಂದಲೂ’ ತಮ್ಮ ಗುರುವಿಗೆ ಗುರು ಅಂತಾ ಸಂಭೋಧಿಸಿರುವುದು. ರೇವಣ್ಣ ಹಿಡಿದ ಪಟ್ಟು ಬಿಡುವುದಿಲ್ಲ. ತಾನು ಯಾವುದಕ್ಕಾಗಿ ತಪಸ್ಸು ಮಾಡಿದ್ದನೋ ಆ ಉದ್ದೇಶವನ್ನು ಅವರ ಮುಂದಿಟ್ಟು ಹಠ ಹಿಡಿಯುತ್ತಾನೆ.
ಅತ್ತೂರು ಐದಾವೆ, ಅತ್ತೋ ತೇಜಿ ಐದಾವೆ
ಮತ್ತೆ ನಿಮಸಮ್ದ ದೊರೆತನ | ನಮಗೀವೆ
ಅತ್ತು ಕಳ್ಯಾಚೆ ಕುರುಬರ | ಕೊಟ್ಟಾರೆ
ನಾನತ್ತೀದ ತ್ರಬಸ ಯಿಳುದೇನು.
ಎಂದು ಹಠ ಹಿಡಿಯುತ್ತಾರೆ. ಅವನ ನಿಶ್ಚಲವಾದ ನಿರ್ಧಾರವನ್ನು ಕಂಡು ಶಿವ ಮತ್ತು ನಾರಾಯಣರು ಇವನನ್ನು ಕುರಿತು ಹೀಯಾಳಿಸುತ್ತಾರೆ. ಇದಕ್ಕೂ ಜಗ್ಗದ ರೇವಣ್ಣ ಈ ಹೀಯಾಳಿಕೆಯನ್ನು ಅವರಿಗೇ ತಿರುಗಿಸುತ್ತಾನೆ.
ಸೀಮೆಯ ನಾನೊಲ್ಲೆ ಭೂಮಿಯ ನಾನೊಲ್ಲೆ
ಜಿಡ್ಡುಗುರುಬರನ್ನು ನಾನು | ಪಡೆದದ್ದೇ
ಆದರೆ ಅವರು ಕಟ್ಟು ಮರಿ
ಚೆಂಡನ್ನು ನಡೆಸ್ಯಾರು
ಎಂದು ಉತ್ತರಿಸುತ್ತಾನೆ. ಹೀಗೆ ತಪಸ್ಸನ್ನು ಮಾಡಿ ಶಿವನಾರಾಯಣರನ್ನು ಗೆದ್ದ ರೇವಣ್ಣನವರು ಅವರು ನೀಡಿದ ವರದಿಂದ `ಎತ್ತು ಕರಡೆ ಜೂಜು ಮತ್ತೆ ಪಗಡೆ ಜೂಜು” ಆಡಿ ಕಲ್ಯಾಣ ನಗರಿಯ ಮೇಲ್ವರ್ಗದವರನ್ನು ಗೆದ್ದುಕೊಳ್ಳುತ್ತಾನೆ. ಕಾಳಗವನ್ನು ಗೆದ್ದ ರೇವಣ್ಣನು ಪಲ್ಲಕ್ಕಿ ಏರಿ ಬಂದು ಕಲ್ಯಾಣ ಪಟ್ಟಣದೊಳಗೆ ಕುರುಬರ ಗುರುತನವನ್ನು ಪಡೆಯುತ್ತಾನೆ. ಅವನಿಗೆ ಗುರುತನ ಆದ ಸಂಗತಿಯನ್ನು ಕಲ್ಯಾಣದೊಳಗೆ ಶಾಸನವಾಗಿ ಕೆತ್ತಿಸಿದರಂತೆ ಅದನ್ನು ಕುರಿತು ಜನಪದ ಅಭಿವ್ಯಕ್ತಿ ಹೀಗಿದೆ.
ಕಲ್ಯಾಣ ಪಟ್ಟಣದೊಳಗೆ ಅಲ್ಲೇನೆ ಚೋಜಿಗ
ಅಲ್ಲಿ ನಮ ಗುರುವೀಗೆ ಗುರುತಾನ | ಆದವೆಂದು
ಕಲ್ಲೀಗಿ ಸಾಸಾಣ ವೊಡುದಾವು.
ಗುರುತನ ಪಡೆದ ರೇವಣ್ಣನು ಮತ್ತೆ ಬಿಜ್ಜಳರಾಯನ ಪಟ್ಟಸಾಲೆಯೊಳಗೆ ಒಪ್ಪಗೆ ಹಾಕಿದ ಮಣೆ ಮೇಲೆ ಪಟ್ಟದ ವೀಳ್ಯೆ ಪಡೆಯುತ್ತಾನೆ. ಹೀಗೆ ಕುರುಬರ ಗುರುತನದ ಪಟ್ಟ ಪಡೆದ ರೇವಣ್ಣನಿಗೆ ಗುರು ಕೈಂಕರ್ಯದ ಸತ್ತಿಗೆ ಹಿಡಿದವು. ಮರುಗ-ಮಲ್ಲಿಗೆ, ಸಿರಿಗಂಧ ರುದ್ರಾಕ್ಷಿಸರ ಧರಿಸಿದ ರೇವಣ್ಣನಿಗೆ ಉತ್ತರ ದೇಶದ ಶಿಷ್ಯರೂ ಸಹ ಸತ್ತಿಗೆ ಪಾಲಿಕೆಗಳನ್ನು ಕೊಂಡು ಕಾಣಿಕೆಯಾಗಿ ಅರ್ಪಿಸುತ್ತಾರೆ.
ಈ ಐತಿಹಾಸಿಕ ಜನಪದ ಕಾವ್ಯವು ಪ್ರಮುಖವಾಗಿ ಸಾಮಾಜಿಕ ಸಂಘರ್ಷವೊಂದನ್ನು ವಸ್ತುವಾಗಿಸಿ ಕೊಂಡಿರುವ ಅನುಭವಾತ್ಮಕ ಚಿತ್ರವನ್ನು ತೆರೆದಿಡುತ್ತದೆ. ಈ ಅನುಭವವನ್ನು ಹಾಡುತ್ತಿರುವ ಮನಸ್ಸು ಸಂಘರ್ಷದಲ್ಲಿ ನೋವುಂಡ ನೆಲೆಗೆ ಸೇರಿದ್ದಾಗಿದೆ. ಜನಾಂಗವೊಂದು ಅನುಭವಿಸಿದ ಸಾಮಾಜಿಕ ಅವಮಾನವೇ ಈ ನೆಲೆ. ಸಾಮಾನ್ಯವಾಗಿ ನೋವಿನ ನೆಲೆಯಿಂದ ಬಂದ ಮಾತುಗಳು ನೇರ ಹೇಳಿಕೆಗಳಾಗಿರುವುದಿಲ್ಲ. ಪಟ್ಟಪಾಡು ಹುಟ್ಟು ಹಾಡಾಗುತ್ತದೆ. ಅಲ್ಲದೇ ಈ ಹಾಡು ನಿರ್ಧಿಷ್ಟ ಆಚರಣೆಯ ಸಂದರ್ಭದಲ್ಲಿ ಬಳಸುವ ಇತರ ಪರಿಕರಗಳಂತೆ ಒಂದು ಪರಿಕರವಾದರೂ ಇದು ಬಹಳ ಮುಖ್ಯ ಪರಿಕರ ಎಂಬುದು ಗಮನಾರ್ಹ. ಆದ್ದರಿಂದ ಆಚರಣೆಯ ಸ್ವರೂಪವನ್ನು ವಿವರಗಳಾದ್ಯಂತವಾಗಿ ಕಾಲಗತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿಕೊಂಡು ಹೋಗುವ ಪ್ರಧಾನ ವಾಹಕ ಇದು. ಹೀಗಾಗಿ ಆಚರಣೆಗೂ, ಈ ಗೀತೆಗೂ ಜೀವರಕ್ತ ಸಂಬಂಧವಿದೆ.


Leave a Reply

Your email address will not be published. Required fields are marked *

error: Content is protected !!