ಸಜ್ಜಲಗುಡ್ಡದ ಶ ರ ಣಮ್ಮ ಇಪ್ಪತ್ತನೆಯ ಶತಮಾನದ ಶಿವಶರಣಿಯರ ಚರಿತ್ರೆಯಲ್ಲಿ ಅಚ್ಚಳಿಯದ ಹೆಸರು ಬಡ ಹಾಲುಮತ ಕುರುಬ ಮನೆತನದಲ್ಲಿ 1881 ರಲ್ಲಿ ಯಮನವ್ವ ಎಂಬ ಶರಣೆ ಇಂದಿನ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೆನೂರ ಎಂಬಲ್ಲಿ ಜನಿಸಿದಳು. ಯಮನವ್ವ ಗುಡದೂರ ಮಠಕ್ಕೆಬಂದರು ಅಲ್ಲಿಯ ದೊಡ್ಡ ಬಸವಾರಾರ್ಯರ ಆಶೀರ್ವಾದದಿಂದ ಯಮನವ್ವ ಒಬ್ಬ ಶರಣೆಯಾಗಿ ಹೊರಹೊಮ್ಮಿದ್ದರು ಅಲ್ಲಿಂದ ಯಮನವ್ವ ಸಿದ್ಧಮ್ಮ ಹೆಸರುಗಳು ಕಳಚಿಕೊಂಡು “ಶರಣಮ್ಮ”
ಎಂಬ ಹೆಸರು ರೂಢವಾಯಿತು ಗುರುಗಳು ಪಕ್ಕದ ಗ್ರಾಮಗಳಾದ ಹಂಚಿನಾಳ ಸಾಸ್ವಿಹಾಳಗಳಲ್ಲಿ ಎರಡು ಮಠಗಳನ್ನು ಸ್ಥಾಪಿಸಿದ್ಧರು ಆ ಮಠಗಳ ಉಸ್ತುವಾರಿ ಶರಣಮ್ಮರಿಗೆ ವಹಿಸಿದ್ದರು ಶರಣಮ್ಮಳ ಭಕ್ತಿಗೆ ಮೆಚ್ಚಿದ ಗುರು ದೊಡ್ಡಬಸವಾರ್ಯರು ಒಂದು ದಿನ ಶರಣಮ್ಮಳಿಗೆ ದೀಕ್ಷೆ ನೀಡಿ ಲಿಂಗಧಾರಣೆ ಮಾಡಿದರು. ಲಿಂಗಾಯುತರಲ್ಲದ ಶರಣಮ್ಮಳಿಗೆ ಲಿಂಗಧಾರಣೆ ಮಾಡಿದ್ದು ಸಾಕಷ್ಟು ಲಿಂಗಾಯತರಿಗೆ ಸರಿ ಬರಲಿಲ್ಲ ಅವರೆಲ್ಲರೂ ಬಹಿರಂಗವಾಗಿ ದೊಡ್ಡಬಸವಾರ್ಯರನ್ನು ಹಿಂದುಮುಂದು ನೋಡದೆ ಟೀಕಿಸತೊಡಗಿದರು ತನ್ನಿಂದ ಗುರುಗಳಿಗೇಕೆ ತೊಂದರೆ ಎಂದು ಶರಣಮ್ಮ ತಮ್ಮ ಅಂಗದಲ್ಲಿರುವ ಇಷ್ಟಲಿಂಗವನ್ನು ತನ್ನ ಜಡೆಯಲ್ಲಿ ಬಚ್ಚಿಟ್ಟು ಕೊಳ್ಳುತ್ತಿದ್ದಳೂ ಈ ಸಂಗತಿ ಕಂದಗಲ್ಲಿನ ಪರ್ವತಶಾಸ್ತ್ರಿಗಳ ಕಿವಿಗೂ ಬಿದ್ದಿತು ಅವರು ಒಮ್ಮೆ ಮಠಕ್ಕೆ ಬಂದು “ಶರಣಮ್ಮ ನೀನು ಲಿಂಗಮುಟ್ಟಿ ಲಿಂಗವೇ ಆಗಿದ್ದಿಯ ಅದನ್ನೇಕೆ ಮುಚ್ಚಿಟ್ಟುಕೊಳ್ಳುತ್ತಿದ್ದಿಯ ಎಲ್ಲರಂತೆ ಅಂಗದ ಮೇಲೆ ಧರಿಸು ಶರಣಬಸಪ್ಪನವರು ಕಡಕೋಳ ಮಡಿವಾಳಪ್ಪನವರಿಗೂ ಲಿಂಗದೀಕ್ಷೆ ಮಾಡಿದಾಗ ಇಂತದೇಕಠಿಣ ಪ್ರಸಂಗ ಅವರಿಗೆ ಬಂದಿತ್ತು ನಿನ್ನ ಗುರು ಯಾವುದಕ್ಕೂ ಅಂಜಲಾರ ಅಳುಕಲಾರ ಗೊಡ್ಡು ಸಂಪ್ರದಾಯಗಳಿಗೆ ಎಂದಿಗೂ ಕಿವಿಕೊಡಬೇಡ” ಎಂದು
ಧೈರ್ಯಹೇಳಿ ಲಿಂಗವನ್ನು ಎದೆಯ ಮೇಲೆ ಧರಿಸಿಕೊಳ್ಳಲು ಹೇಳಿಹೋದರು ಅಂದಿನಿಂದ ಶರಣಮ್ಮ ಎಲ್ಲರಿಗೂ ಕಾಣುವ ರೀತಿಯಲ್ಲಿ ಲಿಂಗಧರಿಸ ತೊಡಗಿದರು.

ಮುದ್ದೇಬಿಹಾಳ ತಾಲ್ಲೂಕಿನ ಬಲದಿನ್ನಿ ನೀಲಕಂಠರಾವ ನಾಡಗೌಡರಿಗೆ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡು ಮಕ್ಕಳು 1941-42ರಲ್ಲಿ ಮಗಳು ಅಯ್ಯಮ್ಮಳಿಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಣಿಸಿಕೊಂಡಿತಂತೆ ಯಾವವೈಧ್ಯರಿಂದಲೂ ಅವಳನ್ನು ಗುಣಮುಖ ಮಾಡಲಾಗಲಿಲ್ಲ ಅವಳು ಸಾವು-ಬದುಕಿನ ಮಧ್ಯ ಹೊರಳಾಡುತ್ತಿದ್ದಳು ಅವರ ಹಿತೈಶಿಗಳೊಬ್ಬರು ಶರಣಮ್ಮ ನವರನ್ನು ಕಾಣುವಂತೆ ಸಲಹೆ ನೀಡಿದರಂತೆ ಇದರಿಂದ ನಾಡಗೌಡರಿಗೆ ಕೊನೆಯ ಪ್ರಯತ್ನ ಏಕೆ ಮಾಡಬಾರದು ಎಂದು ಶರಣಮ್ಮರ ಮಠಕ್ಕೆ ಬಂದು ತಮ್ಮ ಮಗಳ ಸ್ಥಿತಿಯನ್ನು ವಿವರಿಸಿದರು ಅಮ್ಮನವರು ಉತ್ತತ್ತಿ ಕಲ್ಲುಸಕ್ಕರೆ ಕೈಗಿತ್ತು ಹೊತ್ತಿರುವಾಗಲೇ ಮನಗೆ ಹೋಗ್ರಿ ಎಂದು ಕಳುಹಿಸಿಕೊಟ್ಟರು ನಾಡಗೌಡರು ಮನೆಗೆ ಹೋಗುತ್ತಿದ್ದಂತೆ ಅವರ ಮಗಳು ರೊಟ್ಟಿ ತಿನ್ನತ್ತು ಕುಳಿತಿದ್ದಳಂತೆ ನಾಡಗೌಡರಿಗೆ ನಂಬಲಿಕ್ಕಾಗಲಿಲ್ಲವಂತೆ ಅಮ್ಮನವರ ಆಶೀರ್ವಾದದಲ್ಲಿ ಎಷ್ಟೊಂದು ಶಕ್ತಿಯಿದೆ ಎಂದು ಭವಪರವಶರಾದರಂತೆ ಅಂದಿನಿಂದ ಅವರು ಶರಣಮ್ಮಳ ಭಕ್ತರಾಗಿ ಬಿಟ್ಟರಂತೆ ಅವರು ಈಮಠಕ್ಕೆ ಮಾಡಿದ ಸೇವೆ ಅಷ್ಟಿಷ್ಟಲ್ಲ.
ದೇವರಾಜ ಅರಸರಿಂದ ಹಿಡಿದು ಅನೇಕ ರಾಜಕಾರಣಿಗಳು ಅಮನವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ ಅನೇಕ ಜನರು ಮಂತ್ರಿಗಳಾಗಿದ್ದಾರೆ ಎಸ್.ಆರ್. ಕಂಠಿಯಂತವರು ಅಮ್ಮನವರ ಆಶೀರ್ವಾದದಿಂದ ಮುಖ್ಯ ಮಂತ್ರಿಗಳೂ ಆದರು ಎಸ್.ಆರ್. ಕಂಠಿ, ಪಿ.ಎಂ. ನಾಡಗೌಡರು, ಎಸ್.ಬಿ. ನಾಗರಾಳ, ಸಿ.ಎನ್. ಪಾಟೀಲ ರಂತಹವರಿಗೆ ಅಮ್ಮನವರ ಮಠ ತವರು ಮನೆಯಾಗಿತ್ತು ಸಾಹಿತಿಗಳಾದ ಬೀಚಿ ಎಸ್.ಎಸ್.ಒಡೆಯರಡಾ|| ನಂದಿಮಠ, ಚನ್ನವೀರ ಕಣವಿ, ಡಾ|| ಎಂ.ಎಂ. ಕಲಬುರ್ಗಿ, ಡಾ|| ತಿಪ್ಪೇರುದ್ರಸ್ವಾಮಿ, ಎಂ. ಚಿದಾನಂದಮೂರ್ತಿ, ಜಿ.ಎಸ್. ಶಿವರುದ್ರಪ್ಪ, ಎಸ್.ಎಲ್. ಭೈರಪ್ಪ, ಡಾ|| ಡಿ.ಎಸ್. ಕರ್ಕಿ, ಡಾ|| ಸಿದ್ಧಯ್ಯ ಪುರಾಣಿಕ ,
ಜಯದೇವಿತಾಯಿ ಲಿಗಾಡೆ ಮುಂತಾದವರು ಅಮ್ಮನವರ ಬಗ್ಗೆ ಭಕ್ತಿಪರವಾದ ಭಾವನೆಯುಳ್ಳವರಾಗಿದ್ದರೆಮದು ಕಂಡು ಬರುತ್ತದೆ.

ಅಮ್ಮನವರ ಶಾಪದಿಂದ ನಾಯಿಯಾಗಿ , ಕಪ್ಪೆಯಾಗಿ ಹುಟ್ಟಿದ ಕಥೆಗಳೂ ಜನರ ಮಧ್ಯ ಹರಿದಾಡುತ್ತಿವೆ. ಅಮ್ಮನವರಿ ಕಂಬಳಿಹಾಳಕ್ಕೆ ಮಳೆ ತರಿಸಿದರಂತೆ, ಇಸ್ಮಾಯಿಲ್ ಸಾಹೇಬರ ಹೊಟ್ಟೆನೋವು ದೂರಮಾಡಿದರಂತೆ ಕೆಲವರಚರ್ಮರೋಗ ಗುಣಮುಖ ಮಾಡಿದರಂತೆ ಹರ್ನಿಯಾ ದಿಂದ ನರಳುವವರಿಗೆ ಸರಿಯಾಗಿ ಆಪರೇಶನ ಆಗುವಂತೆ ಆಶೀರ್ವಾಧಿಸಿದರಂತೆ ಪೆಟ್ರೋಮ್ಯಾಕ್ಸ ಹೊತ್ತಿಸುವಾಗ ಸ್ಫೋಟಗೊಂಡು ಮೈಸುಟ್ಟು ಗೊಂಡವನನ್ನು ಗುಣಮುಖ
ಮಾಡಿದರಂತೆ ಬಾವಿಯಲ್ಲಿಯ ಝರಿ ಇರುವ ಸ್ಥಳ ಹೇಳಿದರಂತೆ ಬೊರವೆಲ್ ಹಾಕಿಸಿ ನೀರು ತರಿಸಿದರಂತೆ ಪ್ರಸೂತಿ ಮಾಡಿಸಲು ವೈದ್ಯರನ್ನು ಕಳುಹಿಸಿದರಂತೆ ವೈದ್ಯಕೀಯ ಶೀಟು ಕೊಡಿಸಿದರಂತೆ ವಿಮಾನ ಅಪಘಾತ ತಪ್ಪಿಸಿದರಂತೆ ಸಂತಾನ ಭಾಗ್ಯ ಕೊಡಿಸಿದರಂತೆ ಹೀಗೆ ಹತ್ತು ಹಲವಾರು ಪವಾಡಗಳನ್ನು ಶರಣಮ್ಮ ಮಾಡಿದರೆಂಬ ಪ್ರತೀತಿಗಳಿವೆ ಅಮ್ಮನವರ ಆಸೆಯಂತೆ ಅಂದಿನ ಶಿಕ್ಷಣ ಮಂತ್ರಿಗಳಾಗಿದ್ದ ಎಸ್.ಆರ್. ಕಂಠಿಯವರು 1964ರಲ್ಲಿ ಸಜ್ಜಲಗುಡ್ಡದಲ್ಲಿ ಸರಕಾರಿ ಪ್ರೌಢಶಾಲೆ ತೆರೆಯಲಾಯಿತು ಅದರ ಮರುವರ್ಷವೇ ಅಲ್ಲಿ ಕಟ್ಟಡ ನಿರ್ಮಿಸಲಾಯಿತು ನಂತರ ವಿದ್ಯಾರ್ಥಿನಿಲಯ ಆರಂಭಿಸಲಾಯಿತು ಶಾಲೆಗೆ ಹೋಗದ ಶರಣಮ್ಮನವರಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯಿತ್ತು.
ಸಜ್ಜಲಗುಡ್ಡದ ಶರಣಮ್ಮನವರು 24-02-1981 ಬೆಳಿಗ್ಗೆ 12-30ಗಂಟೆಗೆ ವಿಧಿವಶರಾದರು
25-02-1981ರಂದು ಸಾಯಂಕಾಲ ಸಜ್ಜಲಗುಡ್ಡದ ಮಠದ ಮಂಟಪದಲ್ಲಿ ಅಮ್ಮನವರ ಸಮಾಧಿ ಮಾಡಲಾಯಿತು.