ಉತ್ತರ ಕರ್ನಾಟಕದ ಮನೆಮಾತಾಗಿರುವ ಯಲ್ಲಾಲಿಂಗರು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಿರಗಿ ಎಂಬ ಹಳ್ಳಿಯಲ್ಲಿ ಒಂದು ಸಾದಾರಣ ಕುರುಬ ಕುಟುಂಬದಲ್ಲಿ ಜನಿಸಿದರು ಇವರ ಪೂರ್ವನಾಮ “ಯಲ್ಲಪ್ಪ” ಚಿಕ್ಕಂದಿನಲ್ಲಿಂದ ಕುರಿ-ಆಡುಗಳನ್ನು ಕಾಯ್ದು ಕೊಂಡಿದ್ದನು ವಯಸ್ಸಿಗೆ ಬರುತ್ತಿದ್ದಂತೆ ತಂದೆ-ತಾಯಿಗಳು ವಿವಾಹ ಮಾಡಿದರು. ಸಂಸಾರದ ಭಾರ ಹೆಗಲಿಗೆ ಬೀಳುತ್ತಿದ್ದಂತೆ ಯಲ್ಲಪ್ಪ ವಿಚಲಿತರಾದರು ದಿಕ್ಕು ಕಾಣದೆ ಚಡಪಡಿಸತೊಡಗಿದರು ಸಂಸಾರ ನಿರ್ವಹಣೆಗಾಗಿ ದುಡಿಯಲೇ ಬೇಕಾಗುತ್ತದೆ. ಆದ್ದರಿಂದ ಬಟಕುರ್ಕಿ ಗ್ರಾಮದ ಕುಲಕರ್ಣಿಯ ಮನೆಯಲ್ಲಿ ಜೀತಕ್ಕೆ ನಿಂತರು ಜೀತಕ್ಕಿರುವಾಗ ಅವರ ಪತ್ನಿ ಗರ್ಭವತಿಯಾದಳು. ದಿನಗಳು ತುಂಬುತ್ತಿದ್ದಂತೆ ಹೆರಿಗೆ ಸನಿಹಕ್ಕೆ ಬಂತು. ಸಂಕಟ ಸಮಯದಲ್ಲಿ ಅವರು ಲಚ್ಯಾಣದ ಸಿದ್ಧಲಿಂಗರನ್ನು ನೆನೆಯುತ್ತ ಅವಳ ಹೆರಿಗೆಗೆ ಸ್ವತಃ ಯಲ್ಲಪ್ಪ ಸಿದ್ಧರಾದರು. ಪ್ರಸವವೇದನೆಯು ಸರಿಯಾಗಿ ಆಗದೆ ಕೂಸು ಹುಟ್ಟುವ ಮೊದಲೇ ತೀರಿಕೊಂಡಿತ್ತು. ಕೂಸು ಹೊರ ಬರುವ ಮೊದಲೇ ಪತ್ನಿಯೂ ತೀರಿಕೊಂಡಳು ಗರ್ಭದೊಂದಿಗೆ ಚಿತೆಗೆ ಏರಿಸಿದರು. ಸ್ವಲ್ಪ ಹೊತ್ತಿನಲ್ಲಿ ಗರ್ಭದಲ್ಲಿಯ ಕೂಸು ಸಿಡಿದು ಹೊರಗೆ ಬಿದ್ದಿತು. ಮಾಂಸದ ಮುದ್ದೆಯನ್ನು ನೋಡುತ್ತಿದ್ದಂತೆ ಯಲ್ಲಪ್ಪ ಹುಚ್ಚನಂತೆ ಗಹಗಹಿಸಿ ನಗತೊಡಗಿದರು ಚಿತೆಯು ಆರಿದ ಮೇಲೆ ಅದೇ ಬೂದಿಯನ್ನು ಮೈಗೆ ಬಳಿದುಕೊಂಡು ಹುಚ್ಚನಂತೆ ಕುಣಿದಾಡತೊಡಗಿದರು. ಯಲ್ಲಪ್ಪನ ಕಣ್ಮೂಂದೆ ಸಿದ್ಧಲಿಂಗರೇ ಕಾಣತೊಡಗುತ್ತಾರೆ.


ಹಿಂದೆ-ಮುಂದೆ ನೋಡದೇ ಒಂದೇ ಉಸುರಿನಲ್ಲಿ ಓಡೋಡುತ್ತ ಲಚ್ಯಾಣಕ್ಕೆ ಬಂದು ಸಿದ್ಧಿಲಿಂಗರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರ ಗದ್ದಲನೋಡಿ ತನಗೆ ಗುರುಗಳ ದರ್ಶನ ಸಿಗಲಾರದು ಎಂದು ಚಡಪಡಿಸಿದರು ಸಂಜೆಯವರೆಗೆ ಕಾದು ಕಾದು ಕೊನೆಗೆ ನಿರಾಶೆಯಿಂದ ತನ್ನೊಂದಿಗೆ ಬಂದಿದ್ದ ಮುಸಲ್ಮಾನ ಗೆಳೆಯನೊಂದಿಗೆ ಊರಹೊರಗೆ ಬಂದು ಅಲ್ಲಿ ಆಳೆತ್ತರ ಬೆಳೆದು ನಿಂತ ಎಕ್ಕೆ ಮರದ ಕೆಳಗೆ ಪದ್ಮಾಸನ ಹಾಕಿ ತಪಸ್ಸಿಗೆ ಕುಳಿತೇ ಬಿಟ್ಟರು. ಕೆಲವೇ ದಿನಗಳಲ್ಲಿ ಯೋಗ ಬಲದಿಂದ ಯಲ್ಲಪ್ಪನ ದೇಹ ನೆಲಬಿಟ್ಟು ಅಂತರದಲ್ಲಿ ತೇಲತೊಡಗಿತು. ಯಲ್ಲಪ್ಪನ ಅವಸ್ಥೇ ಕಂಡ ಅವನ ಗೆಳೆಯ ಗಾಬರಿಗೊಂಡನು. ಇದು ಯಾವುದೋ ಭೂತದ ಚೇಷ್ಟೆ ಇರಬಹುದೆಂದು ಭಾವಿಸಿ ಯಲ್ಲಪ್ಪನನ್ನು ಬಿಟ್ಟು ಅಲ್ಲಿಂದ ಹೊರಟು ಹೋದನು.


ಇಂಡಿ ತಾಲ್ಲೂಕಿನ ಬಂಥನಾಳ ಮಠಕ್ಕೆ ಶಂಕರಲಿಂಗ ಮಹಾರಾಜರು ಲಚ್ಯಾಣದ ವಿಶ್ವಕರ್ಮಿ ಕುಲಕ್ಕೆ ಸೇರಿದ ಸಿದ್ಧಲಿಂಗರಿಗೆ ದೀಕ್ಷೆ ನೀಡಿದ್ದರು. ಮುಂದೆ ಸಿದ್ಧಲಿಂಗರು ತಮ್ಮದೇಣಾದ ಪ್ರತ್ಯೇಕ ಮಠವನ್ನು ಲಚ್ಯಾಣದಲ್ಲಿ ಸ್ಥಾಪಿಸಿದರು ಅವರು ಕುರುಬ ಕುಲದ ಗುರುಲಿಂಗಜಂಗಮರ ವ್ಯಕ್ತಿತ್ವಕ್ಕೆ ಶರಣಾಗಿದ್ದರು. ಅವರು ನಡೆದ ಹಾದಿಯೇ ಇವರಿಗೆ ರಾಜಮಾರ್ಗವಾಗಿತ್ತು. ಸಿದ್ಧಲಿಂಗರ ಬಾಯಿಂದ ಬರುವ ಒರಟು ಮಾತುಗಳು ಭವಿಷ್ಯದಲ್ಲಿ ಸತ್ಯಾವಾಗುತ್ತಿದ್ದವು. ಇದರಿಂದ ಭಕ್ತರು ಇವರ ಬಾಯಿಂದ ಉದುರುವ ಬೈಗುಳ ರೂಪದ ವಾಕ್ಯಗಳಲ್ಲಿ ತಮ್ಮ ಭವಿಷ್ಯವನ್ನು ಕಾಣುತ್ತಿದ್ದರು ಕಚ್ಚೆ, ಕೈ, ಬಾಯಿಗಳು ಇಚ್ಛೆಯಲ್ಲಿರ ಬೇಕೆಂದು ಅವರು ಆಗಾಗ ಹೇಳುತ್ತಿದ್ದರು. ಸದಾ ಸುರಾಪಾನದಲ್ಲಿ ಮಗ್ನರಾಗಿ ಜ್ಞಾನಿಗೆ ವಾದವಿಲ್ಲ ಅರಿತವರಿಗೆ ಜಾತಿಯಿಲ್ಲ ಯೋಗಿಗೆ ಕುಲವಿಲ್ಲವೆಂದು ಭಕ್ತರಿಗೆ ಸಾರುತ್ತಿದ್ದರು.


ಯಲ್ಲಪ್ಪ ಮಹಾರಾಜರು ಕುಳಿತು ಧ್ಯಾನ ಮಾಡುತ್ತಿರುವುದು ಸಿದ್ಧಲಿಂಗರ ಅಂತರದೃಷ್ಟಿಗೆ ಕಂಡಿತು ತಮ್ಮ ಭಕ್ತರನ್ನು ಕರೆದು “ನೀವೆಲ್ಲ ನನ್ನ ನಿಜವಾದ ಭಕ್ತರಲ್ಲ” ನನ್ನನ್ನು ಅರಿತಿರುವ ಭಕ್ತನೊಬ್ಬ ಊರ ಹೊರಗೆ ತಪಸ್ಸಿಗೆ ಕುಳಿತಿದ್ದಾನೆ ನಡೆಯಿರಿ ಅವನನ್ನು ನೋಡುವಿರಂತೆ ಎಂದು ಸಿದ್ಧಲಿಂಗರು ಯಲ್ಲಪ್ಪ ಧ್ಯಾನಕ್ಕೆ ಕುಳಿತ ಎಕ್ಕೆಮರದ ಎದುರು ಬಂದು ನಿಂತರು ಸಿದ್ಧಲಿಂಗರು ಯಲ್ಲಪ್ಪನನ್ನು ತೋರಿಸಿ “ಇವನೇ ನನ್ನ ನಿಜವಾದ ಶಿಷ್ಯ” ಎಂದು ತಮ್ಮ ಅನುಯಾಯಿಗಳಿಗೆ ಹೇಳಿದರು. ಭೂಮಿಯಿಂದ ಅಂತರದಲ್ಲಿ ಧ್ಯಾನಕ್ಕೆ ಕುಳಿತ ಯಲ್ಲಪ್ಪನನ್ನು ಕಂಡು ಎಲ್ಲರೂ ಬೆರಗಾದರು. ಸಿದ್ಧಲಿಂಗರು ಬಂದಿರುವುದನ್ನು ಅಂತರದೃಷ್ಟಿಯಿಂದ ಕಂಡ ಯಲ್ಲಪ್ಪ ಎದ್ದು ಬೆರಗಾದರೂ ಸಿದ್ಧಲಿಂಗರ ಪಾದಕ್ಕೆ ಎರಗಿದರು ತನಗೆ ದರ್ಶನ ನಿಡಿದುದಕ್ಕಾಗಿ ಸಂತೋಷ ಗೊಂಡನು ಸಿದ್ಧಲಿಂಗರು ಯಲ್ಲಪ್ಪನನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲು ಮುಂದಾದರು “ಯಲ್ಲಪ್ಪ ನಿನ್ನನ್ನು ಮೂರುದಿನ ಜೀವಂತವಾಗಿ ಮಣ್ಣಿನಲ್ಲಿ ಹುಗಿಯುತ್ತೇನೆ ಮೂರನೆಯ ದಿನ ಮಣ್ಣು ತೆಗೆದಾಗ ನೀನು ಜೀವಂತವಾಗಿದ್ದರೆ ಆಗ ನಿನ್ನನ್ನು ನನ್ನ ಶಿಷ್ಯನಾಗಿ ಸ್ವೀಕರಿಸುತ್ತೇನೆ” ಎಂದು ಹೇಳಿದರು ಯಲ್ಲಪ್ಪ ಇದಕ್ಕೆ ಒಪ್ಪಿಗೆ ಸೂಚಿಸಿದಾಗ ಎಲ್ಲರೆದುರು ಯಲ್ಲಪ್ಪನನ್ನು ಜೀವಂತ ಹೂಳಲಾಯಿತು. ಮೂರು ದಿನದ ನಂತರಮಣ್ಣು ತೆರದು ನೋಡುತ್ತಾರೆ ಅಲ್ಲಿ ಯಲ್ಲಪ್ಪ ಜಪಮಾಡುತ್ತ ಕುಳಿತಿದ್ದನು.


ಯಲ್ಲಪ್ಪನನ್ನು ಹೊರತೆಗೆದು ಸಿದ್ಧಲಿಂಗರು ದೀಕ್ಷೆ ನೀಡಿದರು ಬೆತ್ತ, ಕುಂಡಲ, ಜೋಳಿಗೆ ಕೊಟ್ಟು “ಯಲ್ಲಪ್ಪ ಇಂದಿನಿಂದ ಯಲ್ಲಾಲಿಂಗ ಮಹಾರಾಜನಾಗಿ ದೇಶದಲ್ಲಿ ಮೆರೆ” ಎಂದು ಆಶೀರ್ವದಿಸಿ “ಇಲ್ಲಿಂದ ಪಶ್ಚಿಮಕ್ಕೆ ಪಯಣ ಬೆಳೆಸಿ ಏಳು ಹಗಲು, ಏಳು ರಾತ್ರಿ ಮುಗಿಯುತ್ತಿದ್ದ ದಿನದಂದು ನಿಂತ ಜಾಗದಲ್ಲಿ ಗುಡಿಸಲು ಹಾಕಿಕೊಂಡು ನಂತರ ಅಲ್ಲಿಯೇ ಮಠ ಕಟ್ಟಿಕೋ” ಎಂದು ಹರಸಿದರು ಯಲ್ಲಾಲಿಂಗರು ತಮ್ಮ ಪಯಣ ಆರಂಭಿಸಿ ಬೆಳಗಾಂವ ಜಿಲ್ಲೆಯ ರಾಯಬಾಗತಾಲ್ಲೂಕಿನ ಮುಗಳಖೋಡ ಗ್ರಾಮದ ರುದ್ರ ಭೂಮಿಯಲ್ಲಿ ಬಂದು ನೆಲೆಸಿದರು ಊರಲ್ಲಿ ಭಿಕ್ಷೆ ಬೇಡಿಕೊಂಡು ತಮ್ಮ ದಿನನಿತ್ಯದ ಆಹಾರ ಸಂಪಾದಿಸುತ್ತಿದ್ದರು ಇವರ ಇರುವಿಕೆಯು ಊರ ಕೆಲವರಿಗೆ ಸರಿಬರಲಿಲ್ಲ. ಅವರು ಯಲ್ಲಪ್ಪ ಮಹಾರಾಜರಿಗೆ ನಾನಾ ತರಹದ ಕಷ್ಟಗಳನ್ನು ಕೊಡುತ್ತಿದ್ದರು ಯಲ್ಲಾಲಿಂಗರು ಅವರಿಗೆಲ್ಲ ತಕ್ಕ ಪಾಠ ಕಲಿಸಿದರು ಇವರ ವಾಕ್ಯಗಳು ಸತ್ಯವಾಗ ತೊಡಗಿದವು ಅವರಲ್ಲಿ ನಾನಾತರಹದ ಜನರು ಬಂದು ಅವರನ್ನು ಹೋಗಳ ತೊಡಗಿದರು ಮಟ್ಕಾ ಹಾವಳಿಯ ಅಂದಿನ ದಿನಗಳಲ್ಲಿ ಹೆಚ್ಚಾಗಿತ್ತು ಢೊಂಗಿ ಭಕ್ತರಾಗಿ ಯಲ್ಲಾಲಿಂಗ ಮಹಾರಾಜ ಸೇವೆ ಮಾಡಿದಂತೆ ನಟಿಸಿ ಅವರ ಬಾಯಿಯಿಂದ ಲಚ್ಯಾಣದ ಸಿದ್ಧಲಿಂಗ ಸ್ವಾಮಿಗಳು ಬಂಥನಾಳ ಮಠದಿಂದ ಪೀಠಾಧಿಪತಿಗಳಾಗಿದ್ದ ಸಂಗನಬಸವ ಸ್ವಾಮಿಗಳಿಗೆ ತಮ್ಮ ಮಠವನ್ನು ವಹಿಸಿಕೊಟ್ಟು ಲಿಂಗೈಕ್ಯರಾದರು ಇತ್ತ ಯಲ್ಲಾಲಿಂಗ ಪ್ರಭುಗಳು ಗುಡಿಸಲಿದ್ದ್ದ ಸ್ಥಳದಲ್ಲಿ ಭವ್ಯ ಮಠವನ್ನು ಕಟ್ಟಲು ಮುಂದಾದರು ಅವರು ಹೋದಲ್ಲೆಲ್ಲ ಅವರ ಜೋಳಿಗೆ ತುಂಬು ತುಳುಕುತ್ತಿತ್ತು ಭಕ್ತರು ಮಠದ ಏಳ್ಗೆಗೆ ಮನಬಿಚ್ಚಿ ಕಾಣಿಕೆ ಸಲ್ಲಿಸಿದರು ಪ್ರಭುಗಳು ಕಾಲಿಟ್ಟ ಮನೆಗಳು ಪಾವನಗೊಳಗತೊಡಗಿದವು ಅವರ ಬರುವಿಕೆಗಾಗಿ ಭಕ್ತರು ಪರಿತಪಿಸತೊಡಗಿದರು. ನೋಡುನೋಡುತ್ತಿದ್ದಂತೆ 40 ಎಕರೆ ಜಮೀನು ಖರಿದಿಸಿ ಅಲ್ಲಿ ಸುಂದರ ಮತ್ತು ಭವ್ಯ ಮಠವು ಎದ್ದು ನಿಂತಿತು ಭಕ್ತರಿಗಾಗಿ ಬೇರೆ ಬೇರೆ ಕಡೆಗಳಲ್ಲಿ ಮಠಗಳು ತಲೆಯೆತ್ತತೊಡಗಿದವು ಯಲ್ಲಾಲಿಂಗರು ಹೈದರಿ ಎಂಬಲ್ಲಿಗೆ ಬಂದು ಅತ್ಯಂತ ಕಠಿಣ ಸಾಧನೆ ಕೈಕೊಂಡು ಅನೇಕ ಸಿದ್ಧಿಗಳನ್ನು ಪಡೆದರು ಅಲ್ಲಿರುವ ದರ್ಗಾದ ಖಾಜಿಯು ಪ್ರತ್ಯಕ್ಷನಾಗಿ ಯಲ್ಲಾಲಿಂಗರು ಕಟ್ಟುವ ಎಲ್ಲ ಮಠದ ಪಕ್ಕದಲ್ಲಿ ತನ್ನ ಸ್ಮಾರಕ ನಿರ್ಮಿಸುವಂತೆ ಹೇಳಿ ಮಾಯವಾದನು ಅಂದಿನಿಂದ ಯಲ್ಲಾಲಿಂಗರ ಮಠದ ಪಕ್ಕದಲ್ಲಿ ಖಾಜಿಯ ಸ್ಮಾರಕ ದರ್ಗಾ ನಿರ್ಮಿಸುವುದು ರೂಢವಾಯಿತು ಮಠ ಮತ್ತು ದರ್ಗಾಗಳಲ್ಲಿ ಹಸಿರು ಮತ್ತು ಕೇಸರಿ ಧ್ವಜ ಹಾರಿಸುವ ಧಾರ್ಮಿಕ ಪದ್ಧತಿಯು ಆರಂಭವಾಯಿತು ಇದರಿಂದ ಯಲ್ಲಾಲಿಂಗರ ಮೇಲೆ ಸೂಫಿ ಸಂತರ ಪ್ರಭಾವವಿತ್ತು ಎಂದು ಹೇಳಬಹುದು. ಅವರು ಮೊದಮೊದಲು ಲಚ್ಯಾಣಕ್ಕೆ ಬರುವ ಮುಂದೆ ಅವರೊಂದಿಗೆ ಒಬ್ಬ ಮುಸಲ್ಮಾನ ವ್ಯಕ್ತಿ ಇರುತ್ತಿದ್ದನು.

https://www.youtube.com/watch?v=us5pRPzWIu0


ಯಲ್ಲಾಲಿಂಗ ಪ್ರಭುಗಳು ಶತಮಾನಕ್ಕಿಂತಲೂ ಹೆಚ್ಚು ಸಮಯ ಬದುಕಿದ್ದರು ಅವರು ಜೀವಿಸುವವರೆಗೂ ಬೆಳಗಿನ ಜಾವ ಹೈದರಖಾಜಿಯ ದರ್ಗಾಕ್ಕೆ ಬಂದುಪೂಜೆ ಸಲ್ಲಿಸಿ ಸಕ್ಕರೆ ಹಂಚಿದನಂತರವೇ ಅವರ ಮಠದ ಕಾರ್ಯಗಳು ಸಾಗುತ್ತಿದ್ದವು ಪ್ರಭಗಳ ಖ್ಯಾತಿ ಹೆಚ್ಚಿದಂತೆ ಮಠಗಳಲ್ಲಿ ಅಂಬಲಿ ಕೇಂದ್ರಗಳು ಆರಂಭಗೊಂಡವು ಕಾಲಕ್ರಮದಲ್ಲಿ ಅನ್ನಪ್ರಸಾದಗಳು ಆರಂಭಗೊಂಡವು. ವಿಶೇಷವಾಗಿ ಅಮವಾಸೆಯ ದಿನದಂದು ಜನಸಾಗರ ಇರುತ್ತಿತ್ತು. ಭಕ್ತರಲ್ಲಿ ಪ್ರಭುಗಳಿಂದ ಪಾರಮಾರ್ಥಿಕ ದೀಕ್ಷೆ ಪಡೆಯುವ ಹಂಬಲ ದಿನೆ ದಿನೆ ಹೆಚ್ಚತೊಡಗಿತು. ಯಲ್ಲಾಲಿಂಗರು ತಮ್ಮ ಗುರು ಸಿದ್ಧಲಿಂಗರ ಪುಣ್ಯತಿಥಿಯಂದು ಲಚ್ಯಾಣಕ್ಕೆ ದರ್ಶನ ನೀಡುವುದನ್ನು ಎಂದಿಗೂ ತಪ್ಪಿಸುತ್ತಿರಲಿಲ್ಲ. ಒಂದು ಪುಣ್ಯ ತಿಥಿಯಂದು ಯಲ್ಲಾಲಿಂಗರ ಕಾರು ಲಚ್ಯಾಣ ಮಠ ಪ್ರವೇಶಿಸಿ ಸಂಗನಬಸವರ ಎದುರಿಗೆ ನಿಂತಿತು ಜನರು ಓಡೋಡಿ ಬಂದು ಯಲ್ಲಾಲಿಂಗರ ಪಾದಕ್ಕೇರಗಲು ಪೈಪೋಟಿ ನಡೆಸುವುದನು ಗಮನಿಸಿದ ಸಂಗನಬಸವರಿಗೆ ಒಳಗೊಳಗೆ ಸ್ವಲ್ಪ ಕೋಪ ಬಂತು ಯಲ್ಲಾಲಿಂಗರನ್ನು ಚುಚ್ಚಿ ” ಏನಪಾ ಯಲ್ಲಪ್ಪ ನಿನಗೆ ಜಗತ್ತೇ ಯಲ್ಲಾಲಿಂಗ ಎಂದು ಕರೆಯುತ್ತಿದೆ; ಆದರೆ ನಿನ್ನ ಕೊರಳಲ್ಲಿ ಲಿಂಗವೇ ಇಲ್ವಲ್ಲ. ಆದ್ದರಿಂದ ನಿನಗೆ ಈ ಜನ್ಮದಲ್ಲಿ ಮುಕ್ತಿ ಇಲ್ಲದಂಗಾತಲ್ಲಪ್ಪ” ಎಂದರಂತೆಅವರ ಚುಚ್ಚು ಮಾತಿಗೆ ಯಲ್ಲಾಲಿಂಗರು ಆವೇಷಭರಿತರಾಗಿ ದೆಹವನ್ನು ಝಾಡಿಸಿದರು ಆಗ ಅವರ ಶರೀರದಲ್ಲಿ ಸಾವಿರಾರು ಲಿಂಗಗಳು ಕಂಡವಂತೆಈ ಪವಾಡದಿಂದ ಸಂಗನ ಬಸವ ಸ್ವಾಮಿಗಳು ಮಂತ್ರಮುಗ್ದರಾದರಂತೆ ಇದರಿಂದ ಯಲ್ಲಾಲಿಂಗರು ಲಿಂಗಧರಿಸಿರಲಿಲ್ಲ ಎಂಬುದು ಕಂಡು ಬರುತ್ತದೆ ಅವರದು ಭಂಡಾರ ಸಂಸ್ಕøತಿ ಎಂಬುದು ಸ್ಪಷ್ಟವಾಗುತ್ತದೆ.


ಯಲ್ಲಾಲಿಂಗರು ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ನೂರಾರು ಮಠಗಳನ್ನು ಸ್ಥಾಪಿಸಿದರು 4ನೇಯ ಫೆಬ್ರವರಿ 1986 ರಂದು ತೊಟ್ಟಿಲು ಕಾರ್ಯಕ್ರಮ ಮುಗಿದು ಒಂಭತ್ತನೆ ದಿನದ ಬೆಳಗ್ಗೆ ಇದ್ದಕ್ಕಿದ್ದಂತೆ ತಮ್ಮ ಉತ್ತರಾಧಿಕಾರಿಯಾದ ಸಿದ್ಧರಾಮರನ್ನು ಜಿಡಗಾದಿಂದಬರಲು ಸೂಚಿಸಿದರು ಸಿದ್ಧರಾಮರು ಸಾಯಂಕಾಲ ಮುಗಳಖೋಡ ಮಠಕ್ಕೆ ಪ್ರತ್ಯಕ್ಷರಾದರು. ವಯಸ್ಸಿನಿಂದ ಬಳಲಿದ ಯಲ್ಲಾಲಿಂಗರು ಮಗುವಿನಂತೆ ಮಲಗಿದ್ದರು ಆಗ ಪ್ರಭುಗಳು ನಾನು ಬದುಕುವ ಆಶೆ ಬಿಟ್ಟಿದ್ದೇನೆ ಎಂದರು. ಮರುದಿನ 5-2-1986ರ ಬೆಳಿಗ್ಗೆ 9 ಗಂಟೆಗೆ ಕೊನೆಯದಾಗಿ ಉತ್ತರಾಧಿಕಾರಿ ಸಿದ್ಧರಾಮರೊಂದಿಗೆ ಏಕಾಂತದಲ್ಲಿ ಮಾತನಾಡಿ ಅಂತಿಮ ಉಸಿರು ಎಳೆದು ಕೊಂಡರು ಅವರ ಲಿಂಗೈಕ್ಯ ವಾರ್ತೆ ನಾಡಿದಾದ್ಯಂತ ಹರಡಿತು ಎಲ್ಲ ಭಕ್ತರಿಗೆ ಅವರ ಅಂತಿಮ ದರ್ಶನಕ್ಕೆ 2-3 ದಿನಗಳಾದರೂ ಬೇಕು ಅಲ್ಲಿಯವರೆಗೆ ಶವ ಕೆಡದಂತೆ ಔಷಧಿ ನಿಡಲು ಮಿರಜದಿಂದ ನುರಿತ ವೈದ್ಯರನ್ನು ಕರೆಸಲಾಯಿತು. ಇಲ್ಲಿಗೆ ಬಂದ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ಯಲ್ಲಾಲಿಂಗರ ನರನಾಡಿಗಳಲ್ಲಿ ಇನ್ನು ಜೀವವಿತ್ತಂತೆ ಆದರೆ ಅವರ ದೇಹಮಾತ್ರ ನಿಶಬ್ಧವಾಗಿತ್ತು ಅವರ ಶರೀರಕ್ಕೆ ರಾಸಾಯನದ ಅವಶ್ಯಕತೆಯಿಲ್ಲ ಎಂದು ವೈದ್ಯರು ನಿಶ್ಚಿಯಿಸಿದರು. ಇದರಿಂದ ಭಕ್ತ ಜನರಿಗೆ ಆದ ಆನಂದ ಅಷ್ಟಿಷ್ಟಲ್ಲ.ಅವರ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದವರೆಲ್ಲೂರೂ ಹಾಗೆಯೇ ಉಳಿದು ಕೊಂಡಿದ್ದರು ಬಂದ ಭಕ್ತಿಗಾಗಿ ಅವಿರತ ಪ್ರಸಾದದ ವ್ಯವಸ್ಥೆ ಮಾಡಲಾಯಿತು ದೇಶದ ಮೂಲೆ ಮೂಲೆಗಳಿಂದ ತಂಡೋಪ ತಂಡಗಳಾಗಿ ಭಕ್ತರು ಮುಗಳಖೋಡಕ್ಕೆ ಹರಿದು ಬಂದರು 8-2-1986 ರ ಬೆಳಗಿನ ಜಾವ ಅವರ ಅಂತ್ಯಕ್ರಿಯೆ ಮಠದಲ್ಲಿ ನೆರವೇರಿಸಲಾಯಿತು. ಒಬ್ಬ ಸಾಮಾನ್ಯ ಅನರಕ್ಷಕ ಕುರುಬ ಸಂಸಾರದ ತೆರೆಗಳಿಗೆ ಸಿಕ್ಕು ತನ್ನವರನ್ನು ಕಳೆದುಕೊಂಡು ವೈರಾಗ್ಯದ ಮಾರ್ಗದಲ್ಲಿ ಕಂಡುಕೊಂಡರು.

ಇಂಥ ಶಕ್ತಿಯನ್ನು ಪಶುಪಾಲಕ ಹಾಲುಮತಸ್ಥರು ಅನುವಂಶೀಯವಾಗಿ ಪಡೆದುಕೊಂಡು ಬಂದಿದ್ದಾರೆಂಬುದಕ್ಕೆ ಮುಗಳಖೋಡ ಯಲ್ಲಾಲಿಂಗರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!