ಕಿತ್ತೂರು ಬೆಳಗಾವಿ ಜಿಲ್ಲೆಯ ಒಂದು ಸಣ್ಣ ಹಳ್ಳಿ. 150 ವರ್ಷಗಳ ಹಿಂದೆ ಅದು ಕಿತ್ತೂರು ರಾಜ್ಯದ ರಾಜಧಾನಿ ಆಗಿತ್ತು. ಕಿತ್ತೂರು, ನಂದಗಡ, ಖಾನಾಪುರ, ಬೈಲಹೊಂಗಲ, ಬೀಡಿ, ಸಂಪಗಾವಿ, ಅಳಣಾವರ ಮುಂತಾದ ಊರುಗಳು ರಾಜ್ಯದ ದೊಡ್ಡ ವ್ಯಾಪಾರ ಕೇಂದ್ರಗಳಾಗಿದ್ದವು ಬೇಸಾಯಕ್ಕೆ ಮತ್ತು ಬಟ್ಟೆ ತಯಾರಿಕೆಗೆ ಕಿತ್ತೂರು ರಾಜ್ಯ ಪ್ರಸಿದ್ಧವಾಗಿತ್ತು.

ಮಲ್ಲಸರ್ಜ ದೇಸಾಯಿ ಕಿತ್ತೂರಿನ ದೊರೆಗಳಲ್ಲಿ ಪ್ರಸಿದ್ಧಿ ಅವನು 1816ರಲ್ಲಿ ತೀರಿಕೊಂಡ ಅವನ ಹಿರಿಯ ರಾಣಿ ರುದ್ರಮ್ಮ, ಕಿರಿಯ ರಾಣಿ ಚೆನ್ನಮ್ಮ ಮಲ್ಲಸರ್ಜನ ನಂತರ ರುದ್ರಮ್ಮನ ಮಗ ಶಿವಲಿಂಗರುದ್ರಸರ್ಜ ಪಟ್ಟಕ್ಕೆ ಬಂದ. ರಾಜ್ಯದ ಆಡಳಿತ, ಕುದುರೆ ಸವಾರಿ, ಯುದ್ಧ ಮಾಡುವುದು ಚನ್ನಮ್ಮನಿಗೆ ಚೆನ್ನಾಗಿ ಗೊತ್ತಿತ್ತು. ರಾಜ್ಯಭಾರ ನಡೆಸಲು ಅವಳು ಮಗನಿಗೆ ಸಹಾಯ ಮಾಡುತ್ತಿದ್ದಳು. 1824ರಲ್ಲಿ ರುದ್ರಸರ್ಜರು ಕ್ಷಯರೋಗದಿಂದ ಮರಣಿಸಿದರು. ಮಕ್ಕಳಿರಲಿಲ್ಲವಾದ್ದರಿಂದ, ಮಾಸ್ತಮರಡಿಯಬಾಳಪ್ಪಗೌಡರ ಮಗ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡ ನಂತರ ಅವನಿಗೆ ಮಲ್ಲಸರ್ಜ ಎಂದು ಹೆಸರಿಟ್ಟರು. ಈ ಏರ್ಪಾಡುಗಳನ್ನೆಲ್ಲ ಮಾಡಿದವಳು. ಚೆನ್ನಮ್ಮನೇ, ಕಿತ್ತೂರು ಸಿಂಹಾಸನವು ಬರಿದಾಗಲು ಬಿಡಬಾರದೆಂದು ಅವಳು ನಿರ್ಧರಿಸಿದ್ದಳು. ಅವಳ ಶೌರ್ಯ ಮತ್ತು ಸದ್ಗುಣಗಳು ಪ್ರಜೆಗಳಿಗೆಲ್ಲ ಗೊತ್ತಿತ್ತು. ಶಿವಲಿಂಗಪ್ಪ (ಮಲ್ಲಸರ್ಜ)ನು ಇನ್ನೂ ಚಿಕ್ಕವನಾಗಿದ್ದರಿಂದ ರಾಜ್ಯದ ಆಡಳಿತದ ಜವಾಬ್ದಾರಿ-ಯನ್ನು ಚೆನ್ನಮ್ಮನೇ ವಹಿಸಿಕೊಂಡಳು.

ಕಿತ್ತೂರಿನ ಮಲ್ಲಸರ್ಜ ದೊರೆಯ ತೋಟದಲ್ಲಿ ಹುಲಿಯೊಂದು ಸುತ್ತಮುತ್ತಲಗ್ರಾಮಸ್ಥರಿಗೆ ತೊಂದರೆ ಕೊಡುತ್ತಿತ್ತು. ಹಾಲುಮತದ ಕುರುಬರ ಸಂಗೊಳ್ಳಿಯ ಭರಮಣ್ಣನಿಗೆ ವಿಷಯ ತಿಳಿದು ಹುಲಿಯೊಂದಿಗೆ ಹೋರಾಡಿ ಹುಲಿಯನ್ನು ಕತ್ತರಿಸಿ ಕೊಂದ. ಆ ವೀರಭರಮಣ್ಣನಿಗೆ ಅರಸರು ಮೆಚ್ಚಿ “ರಕ್ತಮಾನ್ಯದ ಹೊಲ”ವನ್ನು ಬಳುವಳಿಯಾಗಿ ಕೊಟ್ಟರು. ಇಂತಹ ಸಾಹಸಿ ಧೀರ ಭರಮಣ್ಣನಿಗೆ ಹೆಂಡತಿ ಕೆಂಚವ್ವ, ಇಬ್ಬರು ಮಕ್ಕಳಾದ ಸಿದ್ದಣ್ಣ ಮತ್ತು ರಾಯಣ್ಣ. ಬಾಲ್ಯದಲ್ಲಿ ಸಿದ್ದಣ್ಣ ಮತ್ತು ರಾಯಣ್ಣನೂ ಕುರಿ ಮೇಯಿಸಲು ಹೋಗುತ್ತಿದ್ದರು. ಸಂಜೆ ಮನೆಗೆ ಬರುತ್ತಲೇ ರಾಯಣ್ಣ ಶಕ್ತಿ ಕಟ್ಟೆಗೆ ಓಡುತ್ತಿದ್ದ. ಗೆಳೆಯರೊಡನೆ ಅಂಗಸಾಧನೆ ಮಾಡುತ್ತಿದ್ದ, ನಾನಾ ಆಯುಧಗಳ ಅಭ್ಯಾಸ ಮಾಡುತ್ತಿದ್ದ, ವೇಗವಾಗಿ ಓಡುವುದರಲ್ಲೂ ಇಡೀ ಕಿತ್ತೂರು ರಾಜ್ಯದಲ್ಲೇ ಇರಲಿಲ್ಲ. ಗೆಳೆಯರ ಗುಂಪಿನಲ್ಲಿ ಸಂಗೊಳ್ಳಿ ರಾಯಣ,್ಣ ಗುರಿಕಾರ ಬಾಳಣ್ಣ, ಬಿಚ್ಚುಗತ್ತಿ ಚನ್ನಬಸಣ್ಣ ಎಂದೇ ಅವರು ಹೆಸರಾದರು. ಈ ತ್ರಿಮೂರ್ತಿಗಳೂ ಕಿತ್ತೂರಿಗೆ ಹೊರಟರು. ಸೈನ್ಯದ ಅಧಿಕಾರಿಗಳ ಮುಂದೆ ತಮ್ಮ ತಮ್ಮ ಸಾಹಸ ತೋರಿಸಿದರು. ಅಧಿಕಾರಿಗಳು ಮೆಚ್ಚಿಕೊಂಡರು. ಚನ್ನಮ್ಮ ರಾಣಿಗೆ ವರದಿ ಮಾಡಿದರು. ಸಂಗೊಳ್ಳಿಯ ಯುವ ವೀರರನ್ನು ನೋಡಿ ರಾಣಿಗೆ ಸಂತೋಷವಾಯಿತು. ರಾಯಣ್ಣನು ವೀರ ಭರಮಣ್ಣನ ಮಗ ಎಂಬ ಸಂಗತಿ ತಿಳಿಯುತ್ತಲೇ ರಾಣಿಗೆ ವಿಶೇಷ ಪ್ರೀತಿ ವಾತ್ಸಲ್ಯವೂ ಹೆಚ್ಚಿತ್ತು. ಆ ಮೂವರನ್ನು ನೇರವಾಗಿ ತನ್ನ ಅಂಗರಕ್ಷಕ ಪಡೆಗೇ ಸೇರಿಸಿಕೊಂಡುಬಿಟ್ಟಳು. ಅವರಿಗೆ ಆಯುಧ ಶಾಲೆಯಿಂದ ಸಮವಸ್ತ್ರ, ಕತ್ತಿ-ಢಾಲು ಮುಂತಾದುವನ್ನು ಕೊಡಿಸಿದಳು.

  ಸಂಗೊಳ್ಳಿಯ ಯುವಕರಿಗೆಲ್ಲ ರಾಯಣ್ಣ ಆಪ್ತ, ಹುಡುಗರಿಗೆಲ್ಲ  ಅವನೇ ಆದರ್ಶ. ಕಾಮನ ಹಬ್ಬದಲ್ಲಿ ಅವನ ಹುಲಿವೇಷದ    ರಂಗೇ   ರಂಗು   ಅದನ್ನು ನೋಡಲು    ಅಕ್ಕಪಕ್ಕದ    ಹಳ್ಳಿಗಳಿಂದಲೂ   ಜನ ಬರುತ್ತಿದ್ದರು. ಹಿಂದೂಸ್ಥಾನದ ಒಂದೊಂದೇ ರಾಜ್ಯವನ್ನು ಬ್ರಿಟಿಷರು  ಕಬಳಿಸುತ್ತಿದ್ದ  ಕಾಲ,  ಅದು ಆಗ ಕಿತ್ತೂರು ಧನ   ಧಾನ್ಯಗಳಿಂದ   ತುಂಬಿ  ತುಳುಕುತ್ತಿತ್ತು. ಅಲ್ಲಿನ ಖಜಾನೆಯಲ್ಲಿ    ಆಗ    ಹದಿನೈದು ಲಕ್ಷಕೂ  ಹೆಚ್ಚು ರೂಪಾಯಿಗಳಿದ್ದವು.    ಐದು ಲಕ್ಷ ರೂ.      ಬಾಳುವ ಬಂಗಾರದ   ಆಭರಣಗಳಿದ್ದವು   ಕಿತ್ತೂರಿನ ವಾರ್ಷಿಕ ವರಮಾನ  ಐದು ಲಕ್ಷ ರೂ.  ಗಳಷ್ಟಿತ್ತು.   ಆದ್ದರಿಂದ ಆ ರಾಜ್ಯದ   ಮೇಲೂ  ಬ್ರಿಟಿಷರು ಕಣ್ಣು ಬಿತ್ತು.  ರಾಣಿ ಚೆನ್ನಮ್ಮನಿಗೆ   ಅದು  ಗೊತ್ತಾಯಿತು ಹಳ್ಳಿ ಹಳ್ಳಿಗಳಲ್ಲೂ ಡಂಗುರು    ಸಾರಿ   ವೀರರನ್ನು  ಒಟ್ಟುಗೂಡಿಸಿದಳು.   ಸಂಗೊಳ್ಳಿಯಿಂದ   ರಾಯಣ್ಣ  ಅನೇಕ   ತರುಣರನ್ನು  ಕರೆತಂದ  ಕರೆತಂದ  ಆಗ ಕಿತ್ತೂರಿನ ಪ್ರಧಾನ ದಂಡನಾಯಕನಾಗಿದ್ದವನು. 

ಥ್ಯಾಕರೆ ಎಂಬ ಇಂಗ್ಲಿಷ್ ಅಧಿಕಾರಿ ಧಾರವಾಡದ ಕಲೆಕ್ಟರ್ ಆಗಿದ್ದ ಕಿತ್ತೂರಿನ ಖಜಾನೆಯನ್ನು ವಶಮಾಡಿಕೊಳ್ಳಲು 1824 ಅಕ್ಟೋಬರ್ 21 ರಂದು ಅವನು ಸೈನ್ಯ ಸಮೇತ ಕಿತ್ತೂರಿಗೆ ಬಂದ. ಅವನ ಬಳಿ ಎರಡು ತೋಪುಗಳೂ ಇದ್ದವು. ರಾಣಿಯು ಅವನನ್ನು ಒಳಕ್ಕೆ ಬಿಡಲಿಲ್ಲ ಕೋಟೆಯ ಬಾಗಿಲುಗಳನ್ನು ಮುಚ್ಚಿಸಿಬಿಟ್ಟಳು. ಆಗ ಥ್ಯಾಕರೆಗೆ ಸಿಟ್ಟು ಬಂತು ದಿನಾಂಕ 23ರಂದು ಇನ್ನೂ ಎರಡು ತೋಪುಗಳನ್ನು ತರಿಸಿ ಕೋಟೆಯ ಬಾಗಿಲಿಗೆ ಎದುರಾಗಿ ನಿಲ್ಲಿಸಿದ 24 ನಿಮಿಷಗಳೊಳಗೆ ಬಾಗಿಲು ತೆಗೆಯಬೇಕು ಇಲ್ಲದೆ ಹೋದರೆ ಗುಂಡು ಹೊಡೆದು ಬಾಗಿಲು ಉಡಾಯಿಸಿ ಬಿಡುತ್ತೇನೆ ಒಳಗೆ ನುಗ್ಗುತ್ತೇನೆ ಎಂದು ಎಚ್ಚರಿಕೆ ಕೊಟ್ಟ. ಬತೇರಯ ಕಿಂಡಿಯಿಂದ ರಾಯಣ್ಣ, ಚನ್ನಬಸು, ಬಾಳಣ್ಣ ಹೊರಗಿನ ದೃಶ್ಯ ನೋಡುತ್ತಿದ್ದರು, ಕಿತ್ತೂರಿಗೆ ಅವಮಾನ ಮಾಡ್ತಿದ್ದಾನೆ ಆ ಬಿಳೇ ಮೊಕದವನ್ನ ಜೀವಸೈತ ಬಿಡಬಾರದು ಎಂದ ರಾಯಣ್ಣ “ನನ್ನ ಕತ್ತಿಗೆ ಆತನ ಜೀವ ಮೀಸಲು” ಎಂದು ಕತ್ತಿ ಮೇಲೆತ್ತಿದ ಬಿಚ್ಚುಗತ್ತಿ ಚನ್ನಬಸು, “ನಿನ್ನ ತನಕ ನಾನೆಲ್ಲಿ ಬಿಟ್ಟೇನು”ಎಂದು ಕೋವಿ ಗುರಿಯಿಟ್ಟ ಗುರಿಕಾರ ಬಾಳಣ್ಣ. ರಾಣಿ ಯುದ್ದಕ್ಕೆ ಅಪ್ಪಣೆ ಕೊಟ್ಟಳು. ಕೋಟೆಯ ಬಾಗಿಲುಗಳು ಒಮ್ಮೆಲೆ ತೆಗೆದುಕೊಂಡವು “ಹರಹರಮಹಾದೇವ್” ಘೋಷಣೆ ಹೊರಟಿತು. ಕಿತ್ತೂರಿನ ವೀರರು ಹಸಿದ ಹುಲಿಗಳಂತೆ ಮುಂದೆ ನುಗ್ಗಿದರು. ರೆಪ್ಪೆ ಹೊಡೆಯುವುದರೊಳಗೆ ತೋಪುಗಳ ಬಳಿಗೆ ಧಾವಿಸಿದರು. ತೋಪು ಹಾರಿಸಲು ನಿಂತಿದ್ದವರ ತಲೆಗಳನ್ನೇ ಹಾರಿಸಿದರು! ಇಂಗ್ಲಿಷರ ತೋಪುಗಳನ್ನು ಕೋಟೆಯ ಒಳಕ್ಕೆ ಸಾಗಿಸಿಬಿಟ್ಟರು. ಅಷ್ಟರಲ್ಲಿ ಥ್ಯಾಕರೆಯುತನ್ನ ಕುದುರೆಯನ್ನು ಮಂದಕ್ಕೆ ಓಡಿಸುತ್ತಾ ಬಂದ ಅವನ ಜತೆ ಅನೇಕ ಇಂಗ್ಲಿಷ್ ಸೈನಿಕರೂ ಇದ್ದರು ರಣರಂಗದಲ್ಲಿದ್ದ ರಾಣಿಯನ್ನು ಸೆರೆಹಿಡಿಯಬೇಕೆಂದು ಥ್ಯಾಕರೆ ಬಯಸಿದ್ದ. ಆಗ ರಾಣಿಯ ಪಕ್ಕದಲ್ಲಿದ್ದ ಅಮಟೂರು ಸಾದನವರ ಬಾಳಪ್ಪನಿಗೆ ಅದು ಗೊತ್ತಾಯಿತು. ಕೂಡಲೇ ಅವನ ಬಂದೂಕು ಢಂ ಅಂದಿತು ಒಂದೇ ಗುಂಡಿಗೆ ಥ್ಯಾಕರೆಯ ತಲೆ ಒಡೆಯಿತು. ಧೊಪ್ಪನೆ ನೆಲಕ್ಕೆ ಉರುಳಿದ ಹತ್ತಿರವೇ ಇದ್ದ ಕಿತ್ತೂರಿನ ವೀರನೊಬ್ಬ ಥ್ಯಾಕರೆಯ ತಲೆ ಕತ್ತರಿಸಿದ. ಅದನ್ನು ಕತ್ತಿಯ ಮೊನೆಗೆ ಸಿಕ್ಕಿಸಿ ಮೇಲೆತ್ತಿದ. ಯುದ್ಧದಲ್ಲಿ ಕಿತ್ತೂರು ಗೆದ್ದಿತು. ರಾಣಿಗೆ ವಿಜಯವಾಯಿತು.

ಆದರೆ ಇಂಗ್ಲಿಷರು ಸುಮ್ಮನಾಗಲಿಲ್ಲ ಮುಂಬೈ, ಬಳ್ಳಾರಿ, ಸೊಲ್ಲಾಪುರ, ಬೆಳಗಾವಿ ಮುಂತಾದ ಕಡೆಗಳಲ್ಲಿಯ ಸೈನ್ಯವನ್ನು ಒಟ್ಟುಗೂಡಿಸಿ ಪುನಃ ಯುದ್ಧಕ್ಕೆ ಸಿದ್ಧರಾದರು. ರಾಣಿ ಚೆನ್ನಮ್ಮನೂ ಸುಮ್ಮನೆ ಕೂಡಲಿಲ್ಲ ಕಿತ್ತೂರು ಹಳ್ಳಿ ಹಳ್ಳ್ಳಿಗಳಲ್ಲೂ ಡಂಗೂರ ಸಾರಿದಳು. ಸುಮಾರು ಹತ್ತು ಸಾವಿರ ವೀರರು ಸೇರಿದರು. ಜತೆಗೆ 2000 ಕುದುರೆಗಳು, 1000 ಒಂಟೆಗಳು, 50 ಆನೆಗಳು ಇದ್ದವು. 20 ತೋಪುಗಳು ಇದ್ದವು ಇಂಗ್ಲಿಷ್ ಸೈನ್ಯವನ್ನು ಸೋಲಿಸಲು ರಾಣಿ ನಿರ್ಧರಿಸಿದ್ದಳು. ಅಲ್ಲದೆ, ಧಾರವಾಡವನ್ನೂ ವಶಪಡಿಸಿಕೊಳ್ಳಲು ಯೋಚಿಸಿದ್ದಳು. 1824 ಡಿಸೆಂಬರ್ ಮೊದಲ ವಾರದಲ್ಲಿ ಘನಘೋರ ಯುದ್ಧ ನಡೆಯಿತು. ಆದರೆ ಕಿತ್ತೂರಿನ ಕೆಲವು ದ್ರೋಹಿಗಳು ಉಗ್ರಾಣಕ್ಕೆ ನೀರು, ಹಿಟ್ಟು ಬೆರೆಸಿಬಿಟ್ಟಿದ್ದರು. ಕಿತ್ತೂರಿನ ಸೈನಿಕರ ತೋಪುಗಳಿಗೆ ಬಂದೂಕುಗಳಿಗೆ ಮದ್ದುಗುಂಡು ಇಲ್ಲದಂತೆ ಅಯಿತು ಆದ್ದರಿಂದ ಇಂಗ್ಲಿಷರ ಕೈ ಮೇಲಾಯಿತು ವ್ಯರ್ಥವಾಗಿ ತನ್ನ ಪ್ರೀತಿಯ ಸೈನಿಕರ ಪ್ರಾಣಹಾನಿ ಅಗುವುದೆಂದು ರಾಣಿಗೆ ಗೊತ್ತಾಯಿತು ಆದ್ದರಿಂದ ಯುದ್ಧ ನಿಲ್ಲಿಸಿ ಆತ್ಮರಕ್ಷಣೆ ಮಾಡಿಕೊಳ್ಳಲು ಹೇಳಿದಳು.

ಸರದಾರ ಗುರುಸಿದ್ದಪ್ಪ ಮತ್ತು ರಾಯಣ್ಣ ಮತ್ತಿತರರು ರಾಣಿಯನ್ನು ಕಾಪಾಡಲು ಪ್ರಯತ್ನ ಪಟ್ಟರು. ಆಕೆಯನ್ನೂ ರಾಜಪರಿವಾರವನ್ನೂ ಕರೆದುಕೊಂಡು ಸಂಗೊಳ್ಳಿಗೆ ಹೊರಟರು ಆದರೆ ಇಂಗ್ಲಿಷರ ಸೈನ್ಯ ಅವರನ್ನು ಅಡ್ಡಗಟ್ಟಿತು. ಎಲ್ಲರೂ ಸೆರೆ ಸಿಕ್ಕಿಹೋದರು, ಇಂಗ್ಲಿಷರು ರಾಣಿ ಚೆನ್ನವ್ವ, ವೀರವ್ವ ಮತ್ತು ಚನ್ನವ್ವನ ಸ್ವಂತ ಸೊಸೆ ಜಾನಕಿಬಾಯಿ ಮೂವರನ್ನು ಬೈಲಹೊಂಗಲಕ್ಕೆ ಸಾಗಿಸಿ ಬಂಧನದಲ್ಲಿಟ್ಟರು. ರಾಯಣ್ಣನನ್ನೂ ಇನ್ನು ಉಳಿದವರನ್ನು ಧಾರವಾಡದ ಸೆರೆ ಮನೆಯಲ್ಲಿ ಹಾಕಿದರು, ಕೆಲವು ದಿನಗಳು ಕಳೆದವು. ಇಂಗ್ಲಿಷರು ತಾವು ಒಳ್ಳೆಯವರು ಎಂದು ತೋರಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಕೆಲವು ಯುದ್ಧ ಬಂದಿಗಳನ್ನು ಬಿಡುಗಡೆ ಮಾಡಿದರು ಅವರ ಪೈಕಿ ರಾಯಣ್ಣನೂ ಒಬ್ಬನಾಗಿದ್ದ. ಸೆರೆಮನೆಯ ವಾಸದಿಂದ ರಾಯಣ್ಣನ ದೇಹ ಸೊರಗಿತ್ತು. ರಾಯಣ್ಣನಿಲ್ಲದ ಕಿತ್ತೂರು ಸಹ ಸೊರಗಿ ಹೋಗಿತ್ತು. ಖಜಾನೆಯನ್ನು ಬ್ರಿಟಿಷರು ಲೂಟಿ ಮಾಡಿದ್ದರು.

ಅರಮನೆಯ ಗೋಡೆಯಲ್ಲಿ ಉತ್ತರ ದಿಕ್ಕಿನಲ್ಲಿ ಒಂದು ಕಿಂಡಿಯಿತ್ತು, ಅರಸರು ಇದರ ಮೂಲಕ ಧೃವ ನಕ್ಷತ್ರದ ದರ್ಶನ ಮಾಡುತ್ತಿದ್ದರು, ನ್ಯಾಯ, ನೀತಿ ಧರ್ಮ ಬಿಡಬಾರದು, ಸತ್ಯ, ಧರ್ಮ ಶಾಶ್ವತವಾಗಿ ಉಳಿಯಬೇಕು ಎಂಬುದನ್ನು ಕಂಡ ರಾಯಣ್ಣನಿಗೆ ಹೊಸ ಹುರುಪು ಹುಟ್ಟಿತು. ಕಿತ್ತೂರನ್ನು ಪುನಃ ಸ್ವತಂತ್ರವನ್ನಾಗಿ ಮಾಡಬೇಕು ಬ್ರಿಟಿಷರನ್ನು ಮಣಿಸಬೇಕು ಎಂಬ ಸಂಕಲ್ಪ ಮಾಡಿದ. ಆದರೆ ಅವನ ಬಳಿ ಸೈನ್ಯ ಇಲ್ಲ ಹಣ ಇಲ್ಲ ಏನಾದರೂ ಮಾಡಲೇ ಬೇಕು ಎಂದು ಮುರಿದು ಬಿದ್ದ ಕೋಟೆಯನ್ನೇರಿದ ಸುತ್ತಲೂ ನೋಡಿದ 10-15ಮೈಲಿ ಭೂ ಪ್ರದೇಶ ನಿಚ್ಚಳವಾಗಿ ಕಾಣುತ್ತಿತ್ತು. ಎತ್ತ ನೋಡಿದರೂ ಸಮಾಧಾನವಿಲ್ಲ ಎಲ್ಲೆಡೆ ದಾಸ್ಯದ ಕತ್ತಲೇ ಕಾಡುತ್ತಿತ್ತು. ನೋವಿನ ನಿಟ್ಟುಸಿರು ಬಿಟ್ಟ ಕೆಳಕ್ಕೆ ಇಳಿದ. ಅರಸರ ಸಮಾಧಿಗಳಿಗೆ ನಮಸ್ಕರಿಸಿದ. ಕಲ್ಮಠದಕಿತ್ತೂರಿನ ರಾಜಗುರುಗಳಿಗೆ ದೂರದಿಂದಲೇ ನಮಸ್ಕರಿಸಿದ. ಸಂಗೊಳ್ಳಿ ದಾರಿ ಹಿಡಿದ. ಕೆಲವೇತಿಂಗಳಲ್ಲಿ ಎಲ್ಲವೂ ಬದಲಾವಣೆಯಾಗಿದ್ದವು. ಹಳ್ಳಿಯ ಗೌಡ್ರು, ಕುಲಕರ್ಣಿ ಇಂಗ್ಲೀಷರ ನೌಕರರಾಗಿದ್ದರು ಕಿತ್ತೂರಿನ ರಾಣಿಯನ್ನು ಮರೆತಿದ್ದರು. ಸ್ವದೇಶದ ಮೇಲೆ ಭಕ್ತಿ ಕಡಿಮೆಯಾಗಿತ್ತು. ಹಣದ ವ್ಯಾಮೋಹದಿಂದ ದೇಶಭಕ್ತರಿಗೆ ಕಿರುಕುಳ ಕೊಡುತ್ತಿದ್ದರು. ಇದನ್ನೆಲ್ಲಾ ನೋಡಿ ರಾಯಣ್ಣನಿಗೆ ಒಳಗೊಳಗೆ ದ್ವೇಷ ಹೆಚ್ಚುತ್ತಿತ್ತು. ಧಾರವಾಡದ ಜೈಲಿನಿಂದ ಬಂದ ರಾಯಣ್ಣನಿಗೆ 28 ವರ್ಷ ವಯಸ್ಸಾಗಿತ್ತು. ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಿದ್ಧನಾದ, ರಾಣಿ ಚೆನ್ನಮ್ಮರನ್ನು ಸಿಂಹಾಸನದ ಮೇಲೆ ಕೂರಿಸಬೇಕು ಎಂಬ ಸಂಕಲ್ಪ ಧೈರ್ಯ ರಾಯಣ್ಣನ ಬಳಿ ಇತ್ತು. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿತ್ತು. ಗೆಳೆಯರಾದ ಸರದಾರ ರಾಯಣ್ಣ, ಬಿಚ್ಚುಗತ್ತಿಚನ್ನಬಸಣ್ಣ, ಗುರಿಕಾರ ಸಾದನವರ ಬಾಳಣ್ಣ, ಬೆಳವಡಿ ವಡ್ಡರ ಯಲ್ಲಣ್ಣ ಇವರುಗಳು ಗುಟ್ಟಾಗಿ ಸಮಾಲೋಚನೆಗಳನ್ನು ಮಾಡುತ್ತಿದ್ದರು.

ತನ್ನ ತಳವಾರಿಕೆಯನ್ನು ಬಿಡದೇ, ಬ್ರಿಟಿಷರಿಗೆ ಅನುಮಾನ ಬರದ ಹಾಗೆ ಅವನ ಪಳಿಯನ್ನು ಮುಗಿಸಿಕೊಂಡು, ಉಳಿದ ಸಮಯದಲ್ಲಿ ಸಂಘಟನೆಯ ತಂತ್ರವನ್ನು ಹೆಣಿಯುತ್ತಿದ್ದ. ತನ್ನ ಶಕ್ತಿ ಕೇಂದ್ರ (ಗರಡಿಮನೆ) ಯಲ್ಲಿ ಯುವಕರಿಗೆ ತರಬೇತಿಯನ್ನು ನೀಡುತ್ತಾ, ದೇಶದ ಸ್ವಾತಂತ್ರ್ಯದ ಬಗ್ಗೆ ಊರೂರು ಪ್ರಚಾರ ಮಾಡುತ್ತಾ ಜಾಗೃತಿಯನ್ನು ಮೂಡಿಸುತ್ತಿದ್ದನು. ಈ ವಿಷಯವನ್ನು ರಾಣಿ ಚೆನ್ನಾಮ್ಮಾಜಿಗೆ ತಿಳಿಸಬೇಕಿತ್ತು. ಬ್ರಿಟಿಷರ ಸೆರೆಯಲ್ಲಿದ್ದ ರಾಣಿಗೆ ಜಂಗಮರನ್ನು ಭೇಟಿ ಮಾಡುವ ಅವಕಾಶವಿತ್ತು.

ರಾಯಣ್ಣ ಒಂದು ದಿನ ಜಂಗಮವೇಷ ಧರಿಸಿದ ಹಣೆಯಲ್ಲಿ ಭಸ್ಮ, ಮೈಮೇಲೆ ಕಾವಿಯ ನಿಲುವಂಗಿ, ಕೊರಳಲ್ಲಿ ರುದ್ರಾಕ್ಷಿಮಾಲೆ ! ಹೀಗೆ ಯಾರಿಗೂ ತಿಳಿಯದಂತೆ ಚನ್ನಮ್ಮನು ಸೆರೆಯಲ್ಲಿದ್ದ ಮನೆಯ ಒಳಗೆ ಹೋದ. ಜಂಗಮರು ಬಂದರೆಂದು ರಾಣಿಯು ನಮಸ್ಕಾರ ಮಾಡಲು ಬಾಗಿದಳು. ಆಗ ರಾಯಣ್ಣ ತಾನೇ ಮುಂದಾಗಿ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟ ಸಾಧುಗಳೇ ತನಗೆ ನಮಸ್ಕಾರ ಮಾಡಿದ್ದು,ಕಂಡು ರಾಣಿಗೆ ಅಚ್ಚರಿ, ಗಾಬರಿ ನಾನು ಜಂಗಮ ಅಲ್ಲ ನಿಮ್ಮನೆಚ್ಚಿನ ಬಂಟ ರಾಯಣ್ಣ ಎಂದು ಇವನು ಹೇಳಿದ ರಾಣಿಗೆ ಸಂತೋಷವಾಯಿತು. ಇಬ್ಬರೂ ಸ್ವಲ್ಪ ಕಾಲ ಮಾತುಕತೆ ಆಡಿದರು ಕೊನೆಗೆ ರಾಯಣ್ಣ, “ಅಕ್ಕ ನಿಮ್ಮಪ್ಪು ಈ ರಾಯ, ಗೆದ್ದು ಕಿತ್ತೂರು ತಂದು ಉದ್ದ ಬೀಳುವೆ ತಾಯಿಕದ್ದ ಮಾತಲ್ಲ ನಿಮ್ಮಾಣೆ ! ಇಲದಿರಕ ಬಿದ್ದು ಹೋಗುವೆ ರಣದಾಗೆ” ಎಂದು ಪ್ರತಿಜ್ಞೆ ಮಾಡಿದ. ಅದನ್ನು ಕೇಳಿ ರಾಣಿಗೆ ಆನಂದವಾಯಿತು. ಕ್ರಾಂತಿಯ ಖರ್ಚು ವೆಚ್ಚಗಳಿಗಾಗಿ ತನ್ನ ಬಳಿ ಇದ್ದ ಎಲ್ಲ ಆಭರಣಗಳನ್ನು ಕೊಟ್ಟುಬಿಟ್ಟಳು “ಗೆದ್ದು ಬಾ ವೀರ” ಎಂದು ಆಶೀರ್ವಾದ ಮಾಡಿ ಕಳುಹಿಸಿದಳು. ರಾಯಣ್ಣ ಬಂದ ಹಾಗೆಯೇ ಹೊರಟು ಹೋದ ಕಾವಲುಗಾರರಿಗೆ ನಿಜ ಸಂಗತಿ ಗೊತ್ತೇ ಆಗಲಿಲ್ಲ,

ರಾಯಣ್ಣನ ಚಟುವಟಿಕೆಗಳು ಸಂಗೊಳ್ಳಿ ಕುಲಕರ್ಣಿಗೆ ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ರಾಯಣ್ಣನ ವಿರುದ್ಧ ಸುಬೇದಾರರಿಗೆ ತನ್ನನ್ನು ಕೊಲ್ಲಲು ಬಂದಿದ್ದನೆಂದು ದೂರು ಕೊಟ್ಟನು. ಲಕೋಟೆ ತಲುಪಿಸುವ ನೆಪದಲ್ಲಿ ರಾಯಣ್ಣನನನ್ನು ಸಂಪಗಾವಿಗೆ ಕಳುಹಿಸಿದರು. ಲಕೋಟೆ ತಂದ ರಾಯಣ್ಣನನ್ನು ಬಂಧಿಸಿ, ಸೆರೆಮನೆಗೆ ನೂಕಿದರು.

ಇತ್ತ ರಾಯಣ್ಣನ ತಾಯಿಯನ್ನು ಕುಲಕರ್ಣಿ ಬಾಳಪ್ಪ ಕುಲಕರ್ಣಿಯು ಕೆಂಚವ್ವನಿಗೆ ಸರಕಾರದ ಬಾಕಿ 32 ರೂಪಾಯಿಯನ್ನು ಕೊಡುವಂತೆ ಆಜ್ಞಾಪಿಸಿದ. ನನ್ನ ಮಗ ರಾಯಣ್ಣ ಬಂದ ಮೇಲೆ ಕೊಡುತ್ತೇನೆ. ಎಂದರೂ ಬಿಡದೇ, ಕನಿಕರ ತೋರಿಸದೇ ಬೀಸುವ ಕಲ್ಲನ್ನು ಬೆನ್ನಿನ ಮೇಲೆ ಕಟ್ಟಿದರು. ಈ ದೃಶ್ಯವನ್ನು ನೋಡಿದ ಸಂಗೊಳ್ಳಿಯ ಯುವಕರು ವಿಷಯವನ್ನು ಅಮಟೂರಿಗೆ ಹೋಗಿ ಬಿಚ್ಚುಗತ್ತಿ ಚನ್ನಬಸಣ್ಣನಿಗೆ ಮುಟ್ಟಿಸಿದರು. ಚನ್ನಬಸಣ್ಣ ಸಂಗೊಳ್ಳಿ ಚಾವಡಿಗೆ ಬಂದು ಕಂದಾಯದ ರೊಕ್ಕಕ್ಕೆ ಜಾಮೀನು ನೀಡಿ, ಕಲ್ಲು ತೆಗೆಸಿದನು. ಕೆಂಚವ್ವ ಬಂಧಮುಕ್ತಳಾದ ಮೇಲೆ “ನನ್ನ ಮಗ ಬರಲಿ ನಿನ್ನ ತಲೆ ಉರುಳಿಸುತ್ತೇನೆ” ಅಂತ ಎಚ್ಚರಿಕೆ ನೀಡಿಯೇ ಮನೆಗೆ ಹೊರಟಳು.

ಅತ್ತ ಕಡೆ ಸಂಪಗಾವಿಯ ಜೈಲಿನಲ್ಲಿ ರಾಯಣ್ಣನಿಗೆ ಮೇಲಗಿರಿ ರಂಗನಗೌಡರು ಜಾಮೀನು ಕೊಟ್ಟು ಬಿಡಿಸಿದರು. ಸೆರೆಮನೆಯಿಂದ ಹೊರಬಂದ ರಾಯಣ್ಣ ಕಛೇರಿಯ ಎದುರು ನಡುರಸ್ತೆಯಲ್ಲಿ ವೀರಮಂಡಿಯಲ್ಲಿ ಕುಳಿತು” ಹಾಡೇ ಹಗಲಿನಾಗ ಈ ಕಛೇರಿಗೆ ಬೆಂಕಿ ಹಚ್ಚತೇನಿ,ಅಲದಿರಕ, ಕಿತ್ತೂರುರಾಣಿಯ ಬಂಟ ನಾನಲ್ಲ, ಮಲ್ಲಸರ್ಜ ದೊರೆಯ ಹುಲಿ ರಾಮನಾಯಕ ನಾನಲ್ಲ, ಸಂಗೊಳ್ಳಿ ಭರಮಣ್ಣನವರ ರಾಯಣ್ಣ ನಾನಲ್ಲ, ನೆನಪಿರಲಿ, ನೆನಪಿರಲಿ”ರಾಯಣ್ಣ ಮುಂಡಾಸು ಕಟ್ಟಿಕೊಂಡ ಬಿಗಿಯಾದ ಚಲ್ಲಣ ತೊಟ್ಟು ಕ್ರಾಂತಿಯ ದೀಕ್ಷೆ ವಹಿಸಿದ. ಅಷ್ಟರಲ್ಲಿ ಒಂದು ದುಃಖದ ವಾರ್ತೆ ಬಂದಿತು. 1829 ಏಪ್ರಿಲ್ 2 ಶನಿವಾರದಂದು ವೀರ ಚನ್ನಮ್ಮಾಜಿ ಸೆರೆಮನೆಯಲ್ಲಿ ಶಿವೈಕ್ಯಳಾದಳು.ಬೈಲಹೊಂಗಲದ ಕಲ್ಮಠದಲ್ಲಿ ಆಕೆಯ ಶವಸಮಾಧಿ ಆಯಿತು. ಈ ಸುದ್ಧಿ ಕೇಳಿ ರಾಯಣ್ಣನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಆದರೂ ಧೈರ್ಯ ತಂದುಕೊಂಡು ಜಂಗಮ ವೇಷದಲ್ಲಿ ಚನ್ನಮ್ಮನ ಸಮಾಧಿಯ ಬಳಿ ಹೋದ.

ರಾಯಣ್ಣ ಸಂಘಟನೆಗೆ ಒತ್ತು ಕೊಡಲು ಮುಂದಾದ, ಕಾಡಿನಲ್ಲಿ ಶಕ್ತಿಶಾಲಿ ಆಫ್ರಿಕಾ ಮೂಲದ “ಗಜವೀರ”ನನ್ನು ಭೇಟಿಯಾದ, ಬ್ರಿಟಿಷರ ವಿರುದ್ಧ ಹೋರಾಡಲು ಕಿತ್ತೂರನ್ನು ಸ್ವತಂತ್ರ ಮಾಡಲು ಗಜವೀರನ ಸಹಕಾರ ಪಡೆದುಕೊಂಡ. ನಾಥ ಪಂಥದ ಗುರುಗಳು ಕ್ರಾಂತಿಗೆ ಸಹಕಾರ ನೀಡುತ್ತಿದ್ದರು ಶಸ್ತ್ರಾಸ್ತ್ರ, ಧಾನ್ಯ ವಸ್ತ್ರ ಮುಂತಾದವುವನ್ನೂ ಸಂಗ್ರಹಿಸಿ ಅಲ್ಲಿ ಇಡಲಾಗುತ್ತಿತ್ತು. ರಾಯಣ್ಣ ಕಾಡುಮೇಡುಗಳನ್ನು ಕೊಳ್ಳ ಕಣಿವೆಗಳನ್ನು ಸುತ್ತುತ್ತಿದ್ದ ಕ್ರಾಂತಿ ಹಾಗೂ ಹೋರಾಟಕ್ಕಾಗಿ ಅನುಕೂಲವಾದ ಸ್ಥಳಗಳನ್ನು ಪರಿಶೀಲಿಸುತ್ತಿದ್ದ.

ನಂದಗಡದ ಸುತ್ತಮುತ್ತ ಬಂಡಾರಿ ಬಾಪು ಎಂಬ ದರೋಡೆಕೋರನಿದ್ದ ಸಂಗ್ರಾಮದಲ್ಲಿ ಸಹಕಾರ ನೀಡುವಂತೆ ಕೋರಿದ. ಆದರ ಬಾಪು ಹಣ ಸಿಕ್ಕಾಗ ಪಾಲುಕೊಡಬೇಕು ಎಂಬ ಷರತ್ತು ವಿಧಿಸಿದ. ನಾವು ಹೊರಟಿರುವುದು ಸ್ವಾತಂತ್ರ್ಯ ಸಂಗ್ರಾಮಕ್ಕೆ ದರೋಡೆಗಲ್ಲ ಎಂಬ ಮಾತನ್ನು ರಾಯಣ್ಣ ನಿಷ್ಠುರವಾಗಿ ಹೇಳಿದಾಗ, ಒಪ್ಪಿಕೊಂಡ. ಮೊಗಲಾಯಿ ಸೀಮೆಯಲ್ಲಿ ರಾಣಿ ಈರವ್ವನ ಅವರ ತಂದೆ ಶಿವಗುತ್ತಿಯ ರಾಜರು ಅವರ ಹತ್ತಿರ ನೆರವು ಕೇಳಲು ನಿರ್ಧರಿಸಿದ. ಕೂಡಿಸಿದ ಸೈನ್ಯವನ್ನು ಬಾಳೇಗುಂದದ ಕೊಳ್ಳದಲ್ಲಿ ಗುಟ್ಟಾಗಿ ಕಾಪಾಡಬೇಕೆಂದು ಗಜವೀರನಿಗೆ ಆಜ್ಞೆ ಕೊಟ್ಟ ಆದರೆ ಅವರೆಲ್ಲರ ಖರ್ಚಿಗೆ ರೊಕ್ಕ ಬೇಕಲ್ಲ ? ರಾಯಣ್ಣನಿಗೆ ನಂದಗಡ ಊರಿನೊಳಗಿನ ಅನೇಕ ಶ್ರೀಮಂತ ಪರಿಚಯವಿತ್ತು. ಅವನು ಅವರಿಂದ ಹಣ ತಂದು ಕೊಟ್ಟ್ಟು ಶಿವಗುತ್ತಿಯ ಕಡೆ ಹೊರಟ.

ಒಕ್ಕಳ ಭರಮ ನೆಂಬ ದರೋಡೆಕೋರನು ರಾತ್ರಿಯ ಹೊತ್ತಿನಲ್ಲಿ ಊರುಗಳಿಗೆ ನುಗ್ಗುತ್ತಿದ್ದ ಧನ, ಧಾನ್ಯ ಅಪಹರಿಸುತ್ತಿದ್ದ ಪ್ರಜೆಗಳನ್ನು ಕೊಲ್ಲುತ್ತಿದ್ದ ಮನೆಗಳಿಗೆ ಬೆಂಕಿ ಇಟ್ಟು ಸುಡುತ್ತಿದ್ದ ಅವನ ಹೆಸರು ಕೇಳಿದರೆ ಆ ಸೀಮೆಯವರೆಲ್ಲ ನಡುಗುತ್ತಿದ್ದರು. ಇಂತಹವನ್ನು ಬಲಿಹಾಕಿದರೆ ತನ್ನ ಸಂಘಟನೆಗೆ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬ ನಿರ್ಧಾರದಿಂದ ಭರಮನನ್ನು ಭೇಟಿಯಾದ ಕಾಡಿನ ನಡುವೆ ಒಂದು ಕಲ್ಲುಬಾವಿ ಅದರ ಹತ್ತಿರ ಭರಮ ಇರುತ್ತಿದ್ದ. “ಏ ಭರಮ್ಯಾ, ಊಟ ಬೇಗ ಮುಗಿಸು. ನಾನು, ಸಂಗೊಳ್ಳಿ ರಾಯಣ್ಣ, ನಿನ್ನ ಕತೆ ಮುಗಿಸಲು ಬಂದಿದ್ದೇನೆ, “ಮೊದಲು ನಮ್ಮಿಬ್ಬರಿಗೂ ಲಡಾಯಿ ಆಗ್ತದೆ. ರಾಯಣ್ಣನ ಕತೆ ಮುಗೀತದೆ. ಒಂದು ವೇಳೆ ನಾ ಸತ್ತರೆ ನೀವೆಲ್ಲ ಅವನ ಹಿಂದೆ ಹೋಗಿ. ಹೀಂಗೈತಿ, ಕಾಳವ್ವನ ಅಣಿತಿ.” ರಾಯನೂ ಭರಮನೂ ಹಳ್ಳದ ಮರಳಿನಲ್ಲಿ ಕತ್ತಿ ಹಿರಿದು ಕಾದಾಡಿದರು. ಭರಮ ಎಷ್ಟೇ ಗಟ್ಟಿಗನಾದರೂ ರಾಯಣ್ಣನ ಕೈಚಳಕದ ಮುಂದೆ ಅವನಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಹತ್ತು ನಿಮಿಷದೊಳಗೆಭರಮ ಕೆಳಗೆ ಬಿದ್ದ. ರಾಯಣ್ಣ ಅವನ ತಲೆ ಕಡಿದು ಮೇಲೆತ್ತಿದ ಭರಮನ ಅಣತಿಯಂತೆ ಅವನ ಅನುಯಾಯಿಗಳೆಲ್ಲ ರಾಯಣ್ಣನಿಗೆ ಶರಣಾದರು “ಇನ್ನು ಮುಂದೆ ನೀವೆ ನಮ್ಮ ನಾಯಕ” ಎಂದರು. ಚನ್ನಬಸಣ್ಣನಿಗೂ, ಯಲ್ಲಣ್ಣನಿಗೂ, ರಾಯಣ್ಣ ತನ್ನ ಕೈಯಿಂದಲೇ ಮುಂಡಾಸು ಕಟ್ಟಿದ ಅವರನ್ನು ದಂಡನಾಯಕರನ್ನಾಗಿ ಮಾಡಿದ.

ಕ್ರಿ.ಶ. 1830    ಮೊದಲ   ದಿನ    ಅಂದು ಇಂಗ್ಲಿಷರಿಗೆ ಹೊಸ ವರ್ಷದ ಹಬ್ಬ ಅವರಿಗೆ ಸರಿಯಾಗಿ "ಹಬ್ಬ"  ಮಾಡಲು  ರಾಯನಾಯಕ  ಹೊರಟ ಅವನ ಹಿಂದೆ  ಐನೂರು  ಮಂದಿ ವೀರರು ಎಲ್ಲರ ಕೈಯಲ್ಲೂ ಬಿಚ್ಚುಗತ್ತಿ   ನೇರವಾಗಿ  ಕಿತ್ತೂರಿಗೆ  ಹೋದರು  ಅಲ್ಲಿ ಶ್ರೀ ಗುರುಸಿದ್ಧೇಶನ ಪೂಜೆ  ಮಾಡಿಸಿದರು ರಾಯಣ್ಣನು ಜನತಾ  ಕ್ರಾಂತಿ  ಘೋಷಿಸಿದ "ಸಂಕ್ರಾಂತಿಯ ಹೊತ್ತಿಗೆ ಇಡೀ  ರಾಜ್ಯ  ಗೆದ್ದು  ಬಂದು  ಕಾಯಿ  ಒಡೆಸುತ್ತೇನೆ" ಎಂದು  ಮನಸ್ಸಿನಲ್ಲೆ  ಗುರುಸಿದ್ಧೇಶನಿಗೆ  ಹರಕೆ ಹೊತ್ತ ಆದರೆ  ಕಿತ್ತೂರಿನಿಂದ  ಹೊರಡುವ ಮೊದಲು "ಇನ್ನು ಹತ್ತು  ದಿನಕ್ಕೆ ಸರಿಯಾಗಿ ಕಿತ್ತೂರಿಗೆ ಬರುತ್ತೇನೆ" ಎಂದು ಊರಿನಲ್ಲೆಲ್ಲ  ಸುದ್ದಿ   ಹಬ್ಬಿಸಿದ   ಬೀಡಿ   ತಾಲ್ಲೂಕು ಕಛೇರಿಯಲ್ಲಿ  ತುಂಬ ಹಣವಿದೆ"  ಎಂದು ದಿಗ್ವಿಜಯಕ್ಕೆ ಇದು   ಒಳ್ಳೆಯ   ಆರಂಭ  ಎಂದುಕೊಂಡ ರಾಯಣ್ಣ ಅನಂತರ ಸೈನ್ಯದ ಎದುರು ನಿಂತು ಕೈಮುಗಿದು ಹೇಳಿದ.       ಸೈನ್ಯದ ಶಕ್ತಿ  ವೃದ್ಧಿಯಾಗುತ್ತಿದ್ದಂತೆ ಸೈನಿಕರನ್ನು ಉದ್ದೇಶಿಸಿ,   ಲಢಾಯಿ    ಶುರುವಾಗೇದ   ಎಲ್ಲರೂ ಒಳ್ಳೆಯ ಶಿಸ್ತಿನಿಂದ ನಡೆದುಕೊಳ್ಳಬೇಕು ಬಡವರ ಮನೆ ಮುಟ್ಟಬ್ಯಾಡ್ರಿ, ಹೆಂಗಸರು ಮಕ್ಕಳ ಮೈಗೆ ಕೈ ಹಚ್ಚಬ್ಯಾಡ್ರಿ ಎಂಬ ಮಾತನ್ನು ಹೇಳಿದ.  ಮುನ್ನೂರು  ಜನರೊಡನೆ ಹಗಲು  ಹೊತ್ತಿನಲ್ಲೆ  ರಾಯಣ್ಣ  ಹೊರಟ  ಮಿಂಚಿನ ವೇಗದಲ್ಲಿ   ಬೀಡಿ    ಕಛೇರಿಗೆ   ಮುತ್ತಿಗೆ   ಹಾಕಿದ ಕಾವಲುಗಾರರನ್ನೆಲ್ಲ    ಹೊಡೆದು   ಓಡಿಸಲಾಯಿತು. ಅಧಿಕಾರಿಗಳೆಲ್ಲ     ಊರು   ಬಿಟ್ಟು     ನಂದಗಡಕ್ಕೆ ಪರಾರಿಯಾದರು. ಆಗ   ಖಾನಾಪುರದಲ್ಲಿ   ಬ್ರಿಟಿಷರ ಸೈನ್ಯದ ಸೈನ್ಯಾಧಿಕಾರಿ ಮೇಜರ್ ಪಿಂಕರಿಂಗ್ ರಾಯಣ್ಣ ಜನವರಿ 9ರ ರಾತ್ರಿ 10 ಗಂಟೆಯ ಹೊತ್ತಿಗೆ  ಆ ಸೈನಿಕ ಶಿಬಿರದ ಮೇಲೆ ದಾಳಿ ಮಾಡಿದ ಊರಿನೊಳಕ್ಕೂ ನುಗ್ಗಿ ಲೂಟಿ ಮಾಡಿದ,  ಆ ವೇಳೆಗೆ ಅವನ ಸೇನೆಯ ಸಂಖ್ಯೆಮೂರು ಸಾವಿರದಷ್ಟು ಆಗಿತ್ತು.  ಅವರೊಡನೆ ಇಟಿಗಿಗೆ ಹೋಗಿ   ರಾಯಣ್ಣ   ರೈತರಿಂದ ಐದು ಸಾವಿರ ರೂ ಸಂಗ್ರಹಿಸಿದ ಸೈನ್ಯ ಪರಶವಾಡದ ಮೂಲಕ ಅಂಕಲಗಿಗೆ ಹೊರಟಿತು    ದಾರಿಯಲ್ಲಿ      ಸಿಕ್ಕಿದ     ಸರಕಾರಿ ಚಾವಡಿಗಳನ್ನೆಲ್ಲ  ಸುಟ್ಟು  ಹಾಕಲಾಯಿತು. ರಾಯಣ್ಣನಸೈನ್ಯವನ್ನು ಸಂಪಗಾವಿಗೆ ಬಿಡಬಾರದೆಂದು  ಅಮಲದಾರ ಕೃಷ್ಣರಾಯ   ಹಟ   ತೊಟ್ಟಿದ್ದ   200 ಕ್ಕೂ   ಹೆಚ್ಚು ಪೋಲೀಸರೊಡನೆ      ಸಂಪಗಾವಿಯಲ್ಲಿ    ಕಾವಲು ಕಾಯುತ್ತಿದ್ದರು.    ಆದರೆ   ರಾಯಣ್ಣ ಸಂಪಗಾವಿಯ ಕಡೆಗೆ ಬರುವ ಲಕ್ಷಣವೇ ಕಾಣಲಿಲ್ಲ ನಂದಗಡದಮೇಲೆ ದಾಳಿ   ಮಾಡಲು   ಹೊರಟಿದ್ದಾನೆಂಬ  ಸುದ್ದಿ ಬಂತು ಆದ್ದರಿಂದ   ರಾಯಣ್ಣನನ್ನು  ನಂದಗಡದಲ್ಲೇ  ಹಿಡಿದು ಹಾಕಬೇಕೆಂದು  ನಿಶ್ಚಯಿಸಿದ  ತನ್ನ ಸಿಪಾಯಿಗಳೊಡನೆ ಸಂಪಗಾವಿ ಬಿಟ್ಟು ನಂದಗಡಕ್ಕೆ ಧಾವಿಸಿದ ಅಲ್ಲಿ ಬೀಡಿಯ ಅಮಲದಾರನೂ    ರಾಯಣ್ಣನಿಗಾಗಿ     ಕಾಯುತ್ತಿದ್ದ ರಾಯಣ್ಣ    ಸಂಪಗಾವಿಯನ್ನು   ಒಂದು   ಕ್ಷಣವೂ ಮರೆತಿರಲಿಲ್ಲ   ಆದರೆ    ಕೃಷ್ಣರಾಯನನ್ನು  ಅಲ್ಲಿಂದಕದಲಿಸಲು  ಸಂಚು  ಹೂಡಿದ "ಅನಕ್ಷರಸ್ಥ  ತಳವಾರ" ರಾಯಣ್ಣನು  ತೋಡಿದ  ಹಳ್ಳಕ್ಕೆ "ಜಾಣ ಅಮಲದಾರ"ಕೃಷ್ಣರಾಯನು   ತಾನಾಗಿ  ಬಿದ್ದ  ಇನ್ನು ಧಾರವಾಡದ ಕಡೆಯಿಂದಲೂ   ಸಂಪಗಾವಿಗೆ   ಸೈನ್ಯ   ಬಾರದಂತೆ ಚಾಣಾಕ್ಷ  ರಾಯಣ್ಣ  ಮೊದಲೇ ಯೋಜನೆ ಮಾಡಿದ್ದ ಜನವರಿ 11 ರಂದು ಕಿತ್ತೂರಿಗೆ  ಮುತ್ತಿಗೆ ಹಾಕುತ್ತೇನೆಂದು ರಹಸ್ಯ ಸುದ್ದಿ ಹಬ್ಬಿಸಿದ್ದ. ಅದನ್ನು ಸರಕಾರಿ ಗುಪ್ತಚಾರರು ಕಷ್ಟಪಟ್ಟು  ಕಂಡುಹಿಡಿದರು   ಮೇಲಿನವರಿಗೆ   ವರದಿ ಮಾಡಿದರು  18ನೇ   ರೆಜಿಮೆಂಟಿನ    ಸೇನಾಧಿಕಾರಿ ಮೇಜರ್ ರಾಸ್   ಅದನ್ನು    ನಂಬಿಕೊಂಡು ಜನವರಿ11ರಂದು   ಕಿತ್ತೂರಿನಲ್ಲೇ   ಕಾದುನಿಂತ  ರಾಯಣ್ಣನು ನಂದಗಡದ  ಮೂಲಕ  ಕಿತ್ತೂರಿಗೆ  ಹೋಗುವನೆಂದು ಕೃಷ್ಣರಾಯನೂ  ನಂಬಿದ್ದ  ಆದ್ದರಿಂದ  ನಂದಗಡದಲ್ಲೇ ಅವನನ್ನು    ಬಂಧಿಸಿ  ಕೀರ್ತಿಗಳಿಸಬೇಕೆಂದು ಧಾವಿಸಿ ಬಂದ. 
   ದಟ್ಟವಾದ ಕಾಡುಗಳಲ್ಲಿ ಎತ್ತರವಾದ  ಮರಗಳ ಮೇಲೆ ಅವನು ದೊಡ್ಡ ಬೊಂಬೆಗಳನ್ನು  ಕಟ್ಟಿಸುತ್ತಿದ್ದ ಆ ಬೊಂಬೆಗಳು ಮನುಷ್ಯರಂತೆಯೇ ಕಾಣುತ್ತಿದ್ದವು ಅದನ್ನು ದೂರದಿಂದ ಕಂಡು ಇಂಗ್ಲಿಷ್ ಸೈನ್ಯ  ದಾರಿ ತಪ್ಪುತ್ತಿತ್ತು. ಆ ದಿಕ್ಕಿಗೆ ಹೋಗಿ ಬಹಳ ಹೊತ್ತು ಗುಂಡು ಹಾರಿಸುತ್ತಿತ್ತು. ಗುಂಡೆಲ್ಲ  ಮುಗಿಯುವ  ಹೊತ್ತಿಗೆ  ರಾಯಣ್ಣ ಸೈನಿಕರು ಬೇರೆ  ದಿಕ್ಕಿನಿಂದ ನುಗ್ಗುತ್ತಿದ್ದರು ಶತ್ರುಗಳನ್ನು ಹೊಡೆದು ಹಾಕುತ್ತಿದ್ದರು.  ರಾಯಣ್ಣನ   ಬಂಟರು  ರಾತ್ರಿಯ  ವೇಳೆ ಮರಗಳಿಗೆ ಉರಿಯುತ್ತಿರುವ  ಪಂಜುಕಟ್ಟಿ ತಾವು ದೂರ ಹೊರಟು ಹೋಗುತ್ತಿದ್ದರು.  ಕ್ರಾಂತಿಕಾರರು  ಅಲ್ಲಿ  ಇರುವರೆಂದು ಸರಕಾರಿ ಸೈನ್ಯ ಅಲ್ಲಿಗೆ ಹೋಗುತ್ತಿತ್ತು. ಅದೇ ಸಮಯಕ್ಕೆ ರಾಯಣ್ಣ ಇನ್ನೆಲ್ಲೋ ದಾಳಿ ಮಾಡುತ್ತಿದ್ದ. ರಾಯಣ್ಣ ಹೋದ   ಕಡೆಯೆಲ್ಲಾ ಗ್ರಾಮಸ್ಥರು, ಪ್ರೀತಿಯಿಂದ    ಆದರಿಸುತ್ತಿದ್ದರು.      ಬೆಂಬಲವನ್ನು ಕೊಡುತ್ತಿದ್ದರು.  ಕ್ರಾಂತಿಯ ಸೇನೆ ಹಡಲಗಿಗೆ ಬಂದಾಗ ತನ್ನ   ಹಳೆಯ  ದ್ವೇಷದಿಂದ ದರೋಡೆಕೋರನಾಗಿದ್ದ ಬಂಡಾರಿ  ಬಾಪೂ  ಹಳ್ಳಿಗೆ  ಬೆಂಕಿ  ಇಟ್ಟ,   ಊರಿಗೆ ಊರೇ  ಸುಟ್ಟು  ಬೂದಿಯಾಗಿತ್ತು. ಮುಂದೆ ಬಂಡಾರಿ ಬಾಪು ನಂದಗಡದಲ್ಲಿ ಒಬ್ಬ ಅಮಾಯಕನನ್ನು ಕೊಂದು ಹಾಕಿದ್ದ.   ಆತನ   ಹೆಂಡತಿ   ರಾಯಣ್ಣನ  ಮುಂದೆ ಹೇಳಿಕೊಂಡಳು.   ಇದರಿಂದ    ಕೋಪ    ತಡೆದುಕೊಳ್ಳಲಾಗದೇ, ದುಷ್ಟ ಬಂಡಾರಿ ಬಾಪೂವನ್ನು ಹಿಡಿದು ತಂದು ನಿಷ್ಠವಂತ ಸೈನಿಕರು ಕೊಂದು ಕೆಡವಿದರು. 
   1830ರ ಫೆಬ್ರವರಿ ಪ್ರಾರಂಭದಲ್ಲಿ ರಾಣಿ ವೀರವ್ವ ಕ್ರಾಂತಿಗೆಂದು    ರೂ 455  ಕಳುಹಿಸಿದ್ದು   ಸರಕಾರಕ್ಕೆ ಗೊತ್ತಾಯಿತು.  ರಾಯಣ್ಣನನ್ನು ಹಿಡಿಯದಿದ್ದರೆ ತಮಗೆ ಇನ್ನು  ಉಳಿಗಾಲ  ಇಲ್ಲ ಎಂದು  ಅರಿವಾಯಿತು. ಆಗ ಅವರು   ಅವನನ್ನು  ಹಿಡಿದು   ಕೊಟ್ಟವರಿಗೆ  ದೊಡ್ಡ ಬಹುಮಾನ ಕೊಡುವುದಾಗಿ ಘೋಷಿಸಿದರು.  ಅಮಲದಾರ   ಕೃಷ್ಣರಾಯನು   ಮತ್ತೊಂದು ಕುತಂತ್ರ   ಹೂಡಿದ   ಕುದಾನಪುರದಲ್ಲಿ ಲಿಂಗನಗೌಡ ಎಂಬ ಪಟೇಲ ಇದ್ದ ಅವನು  ಕಿತ್ತೂರಿನ ರಾಣಿಗೆ ತನ್ನ ಮಗನನ್ನು    ದತ್ತು    ಕೊಡಬೇಕೆಂದಿದ್ದ     ಆದರೆ ಅರಮನೆಯವರು   ಒಪ್ಪಿರಲಿಲ್ಲ   ಆದ್ದರಿಂದ ಅವನಿಗೆರಾಣಿಯ   ಮೇಲೆ    ಕೋಪವಿತ್ತು.   ಕೃಷ್ಣರಾಯನು ರಾಯಣ್ಣನನ್ನು  ಹಿಡಿದುಕೊಡುವಂತೆ  ಲಿಂಗನಗೌಡನಿಗೆ ಹೇಳಿದ.  ಲಿಂಗನಗೌಡ   ಪುಕ್ಕಲು    ಸ್ವಭಾವದವನು  ಆದ್ದರಿಂದ    ಅವನ        ಸಹಾಯಕ್ಕೆ  ನೇಗಿನಹಾಳದ ವೆಂಕನಗೌಡನನ್ನು    ಅವನ    ಸೇವಕ  ಲಕ್ಕಪ್ಪನನ್ನೂ ಕೃಷ್ಣರಾಯ ಕಳುಹಿಸಿದ.        ರಾಯಣ್ಣನೂ,  ಲಕ್ಕಪ್ಪನೂ  ನಂಟರು  ಲಕ್ಕಪ್ಪ ಬಹಳ  ಶಕ್ತಿವಂತ  ಆದರೆ  ಸ್ವಾರ್ಥಿ  ಹಣಕ್ಕಾಗಿ ಎಂಥ sನೀಚ ಕೆಲಸವನ್ನಾದರೂ ಮಾಡುತ್ತಿದ್ದ ಅವನು ರಾಯಣ್ಣನ ಹತ್ತಿರ ಹೋಗಿ, "ನಾನು ನಿನಗೆ ಸಹಾಯ ಮಾಡುತ್ತೇನೆ" ಎಂದ ಇಬ್ಬರೂ ಸ್ನೇಹಿತರಾಗಿರೋಣ ಎಂದು ಪ್ರಮಾಣ ಹೇಳಿದ. ಆದ್ದರಿಂದ  ಅವನಲ್ಲಿ ರಾಯಣ್ಣ ನಂಬಿಕೆಯಿಟ್ಟ.ಲಿಂಗನಗೌಡ ಮತ್ತು ವೆಂಕನಗೌಡ ರಾಯಣ್ಣನಿಗೆ ಸಹಾಯ ಮಾಡುತ್ತೇವೆಂದು   ಹೇಳಿಕೊಂಡು  ಮುಂದೆ ಬಂದರು ಉಪ್ಪು  ಗೊಬ್ಬರ,   ಗೋವು,  ಮುಟ್ಟಿ,  ನಿಷ್ಠೆಯಿಂದ ಇರುತ್ತೇವೆ ಅಂತ ಭಾಷೆ ಕೊಟ್ಟರು. ಸುಮಾರು ಹದಿನೈದುದಿನ   ರಾಯನ   ಜತೆಗೇ    ಅವರು   ದಾಳಿಗಳಲ್ಲಿ ಭಾಗವಹಿಸಿದರು.
   ಡೋರಿಗುಡ್ಡದಲ್ಲಿ  ರಾಯಣ್ಣನ  ಗುಪ್ತ ನಿವಾಸ ಇತ್ತು  ಅಲ್ಲೆ   ಅವನನ್ನು  ಹಿಡಿಯಬೇಕೆಂದು  ಇಬ್ಬರು ಗೌಡರು ಸಂಚು ಹೂಡಿದರು  ತಾವು ಹೆಚ್ಚಿನ ಜನರನ್ನುಕರೆತರುವುದಾಗಿ   ಹೇಳಿ  ಒಂದರೆಡು   ದಿನಹೊರಗೆ ಹೋದರು ಅನಂತರ  ಏಪ್ರಿಲ್ 2ರಂದು  ಲಿಂಗನಗೌಡ 90 ಜನರನ್ನೂ   ವೆಂಕನಗೌಡ 70  ಜನರನ್ನೂ   ಕರೆತಂದರು ರಾಯಣ್ಣನಿಗೆ ಅವರ  ಮೇಲೆ  ಸ್ವಲ್ಪ ಸಂಶಯ ಬಂತು.  ಆದ್ದರಿಂದ   ತನ್ನ  ಅಂಗರಕ್ಷಕರನ್ನು  ಜತೆಗೆ ಇಟ್ಟುಕೊಂಡಿದ್ದ ಆ ದಿನ ಅವನನ್ನು ಹಿಡಿಯಲು ಆಗಲಿಲ್ಲ. ಅಂದು  ರಾತ್ರಿ  ರಾಯಣ್ಣ   ಗಿಡದಹುಬ್ಬಳ್ಳಿಗೆ  ಮುತ್ತಿಗೆ ಹಾಕಿದ ಆಗ  ಲಿಂಗನನ್ನೂ  ವೆಂಕನನ್ನೂ ತನ್ನ ಜತಗೇ  ಕರೆದುಕೊಂಡು   ಹೋದ    ಮರುದಿನ ಹಿಂದಿರುಗುವ ಹೊತ್ತಿಗೆ ಮಧ್ಯಾಹ್ನ ಆಗಿತ್ತು. ಗುಡ್ಡದ ಕೆಳಗೆ  ಇನ್ನೂರು  ಮೂರು ದೂರದಲ್ಲಿ ಡೋರಿ ಹಳ್ಳ ಹರಿಯುತ್ತದೆ. ಅಲ್ಲಿ ಗಿಡ ಮರಗಳ ನಡುವೆ ಏಕಾಂತ ಜಾಗದಲ್ಲಿ ನೀರಿನ ಆಳ ಹೆಚ್ಚು ಅದನ್ನು "ಡೋರಿ ಮಡು" ಎಂದು ಕರೆಯತ್ತಾರೆ.
    ರಾಯಣ್ಣ ನಿತ್ಯ ಅಲ್ಲಿಗೆ ಹೋಗಿ ಸ್ನಾನ ಮಾಡಿ ಬರುತ್ತಿದ್ದ   ಲಕ್ಕಣ್ಣನೂ  ಅವನ  ಜತೆಯಲ್ಲಿ ಇರುತ್ತಿದ್ದ. ಏಪ್ರಿಲ್ 8 ರಂದು   ಇಬ್ಬರೂ  ಸ್ನಾನಕ್ಕೆ   ಹೊರಟರು ರಾಯಣ್ಣ  ಸದಾ  ತನ್ನ  ಕತ್ತಿಯನ್ನು   ಹತ್ತಿರವೇ ಇಟ್ಟುಕೊಳ್ಳುತ್ತಿದ್ದ.  ನೀರಿನಲ್ಲಿ  ಸಹ   ಅದನ್ನು ಬಾಯಲ್ಲಿ ಕಚ್ಚಿಕೊಂಡೇ   ಈಜುತ್ತಿದ್ದ   ಅವನ  ಕೈಲಿ  ಕತ್ತಿ   ಇದ್ದರೆ ನೂರಾಳು ಬಂದರೂ ಜಗ್ಗುತ್ತಿರಲಿಲ್ಲ .
   ಅಂದು ಸ್ನಾನ ಮುಗಿಸಿದ  ನಂತರ ಬಟ್ಟೆ ಹಾಕಿಕೊಳ್ಳುವಾಗ  ರಾಯಣ್ಣ ಕತ್ತಿಯನ್ನು  ಲಕ್ಕನ ಕೈಗೆ ಕೊಟ್ಟ ಮೊದಲೆ  ಹೊಂಚು  ಕಾಯುತ್ತಿದ್ದ  ಗೌಡರ  ಐದಾರು ಆಳುಗಳು ಒಮ್ಮೆಗೇ ರಾಯಣ್ಣನ ಮೇಲೆ ಬಿದ್ದರು ಅವನು ಬಿಗಿಯಾಗಿ  ಹಿಡಿದುಕೊಂಡರು.  ಆದ್ದರಿಂದ ಕೂಡಲೇ  ಓಡಲು   ಆಗಲಿಲ್ಲ  ದ್ರೋಹಿ  ಲಕ್ಯಾ  ರಾಯಣ್ಣನ  ಕತ್ತಿ ಎತ್ತಿ                 ಕೊಂಡು  ದೂರ   ಓಡಿಹೋದ ವೈರಿಗಳು ರಾಯಣ್ಣನ ಕೈಕಾಲು  ಕಟ್ಟಿ  ಬಾಯಿಗೆ  ಬಟ್ಟೆ  ತುರುಕಿ                   ಬಿಟ್ಟರು. ಅನಂತರ ಇನ್ನೂ ಹತ್ತಿಪ್ಪತ್ತೂ ಜನ ಅವರ  ಕಡೆಯವರು  ಬಂದರು ಗುಟ್ಟಾಗಿ ರಾಯಣ್ಣನನ್ನು                      ಧಾರವಾಡಕ್ಕೆ ಸಾಗಿಸಿಬಿಟ್ಟರು.ಆಗ ಲಿಂಗನಗೌಡ, ವೆಂಕನಗೌಡ ಇಬ್ಬರೂ ಕೈಜೋಡಿಸಿಕೊಂಡು ಇವನನ್ನು  ಜೀವಸಹಿತ  ಬಿಟ್ಟರೆ ನಾವು ಕೆಟ್ಟು ಹೋಗುತ್ತೇವೆ. ದಯವಿಟ್ಟು ಹಾಗೆ ಮಾಡಬೇಡಿ ಎಂದುಮೊರೆಯಿಟ್ಟರಂತೆ.  ಇನ್ನು   ಮುಂದೆ  ತಮ್ಮ  ವಿರುದ್ಧ ಯಾರೂ  ದಂಗೆ  ಏಳದಂತೆ  ಭಯ   ಹುಟ್ಟಿಸುವುದು ಇಂಗ್ಲಿಷರ  ಉದ್ದೇಶವಾಗಿತ್ತು. ನಂದಗಡದಲ್ಲಿ ರಾಯಣ್ಣನು   ಬಹಳ   ಜನಪ್ರಿಯನಾಗಿದ್ದ  ಆದ್ದರಿಂದ ಅವನನ್ನು  ಲೂಟಿಗಾರ,   ಕೊಲೆಗಾರ,  ರಾಜದ್ರೋಹಿ ಎಂದು  ಕರೆದು   ಅದೇ  ಊರಿನಲ್ಲೇ  ಗಲ್ಲಿಗೇರಿಸಲು ನಿಶ್ಚಯಿಸಿದರು.

1831 ರ ಜನವರಿಯಲ್ಲಿ ರಾಯಣ್ಣನನ್ನು ನಂದಗಡಕ್ಕೆ ತಂದರು. ದಿನಾಂಕ 26ರಂದು ಅವನ ಕೈಕಾಲಿಗೆ ಬೇಡಿ ಹಾಕಿ ಊರಿನ ಸುತ್ತ ಮೆರಣಿಗೆ ಮಾಡಿದರು. ರಾಯಣ್ಣನ ಮುಖ ಶಾಂತವಾಗಿ ಗಂಭೀರವಾಗಿತ್ತು. ಮೆರವಣಿಗೆ ಊರಿನಿಂದ ಹೊರಗೆ ಬಂದಾಗ ಅವನು ಒಂದು ಸ್ಥಳ ತೋರಿಸಿ ಹೇಳಿದ”ಇಲ್ಲಿ ನನ್ನ ಸಮಾಧಿ ಮಾಡಿ, ಅದರ ಮೇಲೆ ಆಲದ ಸಸಿ ನೆಡಿ”‘ ಊರಿನ ಈಶಾನ್ಯಕ್ಕೆ ಬಯಲಿನಲ್ಲಿ ದೊಡ್ಡದೊಂದು ಆಲದ ಮರವಿತು.್ತ ಅದರಿಂದ ನೇಣಿನ ಕುಣಿಕೆ ತೂಗಾಡುತ್ತಿತ್ತು. ಸುತ್ತಲೂ ಬಂದೂಕು ಹಿಡಿದ ಸಿಪಾಯಿಗಳು ಕಾವಲು ನಿಂತಿದ್ದರು. ರಾಯಣ್ಣನನ್ನು ತಂದು ಅಲ್ಲಿ ಗಲ್ಲ್ಲಿಗೇರಿಸಿದರು. ಊರಿನವರು ಅವನ ಶವವನ್ನು ಒಯ್ದು ಅವನು ತೋರಿಸಿದ ಜಾಗದಲ್ಲಿ ಸಮಾಧಿ ಮಾಡಿದರು. ಬಿಚ್ಚಗತ್ತಿ ಚನ್ನಬಸು ಸನ್ಯಾಸಿಯಾಗಿ ತಿರುಗುತ್ತಿದ್ದ. ರಾಯಣ್ಣನ ಮೆರವಣಿಗೆಯಲ್ಲಿ ಅವನೂ ಜನರೊಡನೆ ಸೇರಿಕೊಂಡಿದ್ದ. ಅವನು ಸಮಾಧಿಯ ಮೇಲೆ ಒಂದು ಆಲದ ಸಸಿ ನೆಟ್ಟ. ಆ ಸಮಾಧಿಯ ಹತ್ತಿರವೆ ಕೊನೆಯವರೆಗೂ ವಾಸಿಸುತ್ತಿದ್ದು, ಆಲದ ಮರ ಬೃಹದಾಕಾರವಾಗಿ ಬೆಳೆದುದನ್ನು ನೋಡುತ್ತಾ ಪ್ರಾಣಬಿಟ್ಟ.

ಆಗಸ್ಟ್ 15 : ರಾಯಣ್ಣ ಹುಟ್ಟಿ ಭಾರತಕ್ಕೆ ಸ್ವಾತಂತ್ರ್ಯೋತ್ಸವ
ಜನವರಿ 26 : ರಾಯಣ್ಣನವರ ಬಲಿದಾನವಾದ ದಿನ ಭಾರತ ಗಣರಾಜ್ಯ
ಇಂತಹ ಮಹಾನ್ ಹೋರಾಟಗಾರನನ್ನು ಪಡೆದ ಭಾರತೀಯರು ಧನ್ಯರು
ಕರ್ನಾಟಕ ರಾಜ್ಯ ಸರ್ಕಾರ
ಆಗಸ್ಟ್ 15 ಮತ್ತು ಜನವರಿ 26 ರಂದು ರಾಯಣ್ಣನವರಿಗೆ ಸರ್ಕಾರಿ ಗೌರವ ಸಲ್ಲಿಸಲು
ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!