
ಬೀದರ್ ಜಿಲ್ಲೆಯ ಶರಣರ ನಾಡೆಂದು ಇತಿಹಾಸ ಪ್ರಸಿದ್ಧವಾಗಿದೆ. 12ನೇ ಶತಮಾನದಲ್ಲಿ ಶ್ರೇಷ್ಠ ಶರಣರು ನಡೆದಾಡಿದ ಪವಿತ್ರ ಭೂಮಿ ಇದಾಗಿದೆ. 14ನೇ ಶತಮಾನದಲ್ಲಿ ಶಿವಶರಣರಾಗಿದ್ದ ಬೊಮ್ಮಗೊಂಡೇಶ್ವರರು ಒಬ್ಬರು. ಇವರು ಶಿವಶರಣರಾಗಿದ್ದರಲ್ಲದೆ ಪವಾಡಪುರುಷರು ಕೂಡ ಆಗಿದ್ದರೆಂದು ಸಾಕಷ್ಟು ಇತಿಹಾಸದ ಪುರಾವೆಗಳಿವೆ. ಬೊಮ್ಮಗೊಂಡೇಶ್ವರರು ಕ್ರಿ. ಶ. 14ನೇ ಶತಮಾನದಲ್ಲಿ ಬೀದರ್ ತಾಲ್ಲೂಕಿನ ಚಿದ್ರಿಯ ಗ್ರಾಮದಲ್ಲಿ ಜನಿಸಿದರು. ತಾಯಿ ಮಾಳವ್ವ, ತಂದೆ ಮಾಳಪ್ಪ ಇವರು ಧನಗರ (ಕುರುಬ) ಜಾತಿಗೆ ಸೇರಿದವರು. ಅಡ್ಡ ಹೆಸರು ವಗ್ಗ್ಯಾ (ವಗ್ಗೇಕಾರ) ಇವರ ಆರಾಧ್ಯ ದೇವರು ಭಾಲ್ಕಿ ತಾಲ್ಲೂಕಿನ ಮಲ್ಲಣ್ಣ. ಈ ಮಲ್ಲಣ್ಣನ ಜಾತ್ರೆ ಚಟ್ಟಿ ಅಮಾವಸೆಯಿಂದ ಎಳ್ಳ ಅಮಾವಸೆವರೆಗೆ ಒಂದು ತಿಂಗಳವರೆಗೆ ನಡೆಯುತ್ತದೆ. ಅಂಬಾಭವಾನಿಯ ಪೂಜೆ ಮಂಗಳವಾರ ಮತ್ತು ಶುಕ್ರವಾರ ನಡೆಯುತ್ತದೆ. ಮಲ್ಲಣ್ಣನ ಪೂಜೆ ರವಿವಾರವೇ
ವಿಶೇಷವಾಗಿರುತ್ತದೆ. ದಸರಾ ಹಬ್ಬದಲ್ಲಿ ಅಂಬಾಬಾಯಿ ಭಕ್ತರಾದ ಭೂತೇರನ್ನು ಕರೆಸಿ ಹಡಗಿ ತುಂಬಿಸುತ್ತಾರೆ. ಹಡಗಿ ಎಂದರೆ ಕಡ್ಡಿಯಿಂದ ತಯಾರಿಸಿದ ಬುಟ್ಟಿ ತಾಟಿನಾಕಾರದಲ್ಲಿ ಇದ್ದು ಇದರಲ್ಲಿ ನೈವೆದ್ಯೆ ಇಟ್ಟು ಪೂಜಿಸಿದ ನಂತರ ಊಟ ಮಾಡುವ ಪದ್ಧತಿ ಇದೆ, ಹಾಗೇ ಮಲ್ಲಣ್ಣನ ಭಕ್ತರಲ್ಲಿ ಕಟ್ಟಿಗೆಯಿಂದ ತಾಟಿನಾಕಾರದಲ್ಲಿ ತಯಾರಿಸಿದ ತಟ್ಟೆ ಇರುತ್ತದೆ. ಇದಕ್ಕೆ ಕೊಟಂಬಿ ಎನ್ನುತ್ತಾರೆ. ಮಲ್ಲಣ್ಣನ ಪೂಜೆ ಸಲ್ಲಿಸುವವರು ಕೊಟಂಬಿಯಲ್ಲಿ ಸಜ್ಜಿ ರೊಟ್ಟಿ ಬದನೆಕಾಯಿ ಪಲ್ಯದ (ತಾಟಿನಲ್ಲಿ) ನೈವಿಧ್ಯದ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಕೊಟಂಬಿ ತುಂಬಿದ ಬಳಿಕವೆ ಊಟ ಮಾಡುತ್ತಾರೆ. ಇಂತಹ ವೃತ್ತಿ ಮಾಡುವ ಮಲ್ಲಣ್ಣನ ಭಕ್ತರಿಗೆ ವಗ್ಗೆರೆಂದು ಕರೆಯುತ್ತಾರೆ. ಈ ವಗ್ಗೆರು ಮಲ್ಲಣ್ಣ ಜಾತ್ರೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಪೂಜೆಗಾಗಿ ಅರಶಿಣವನ್ನು ಉಪಯೋಗಿಸುತ್ತಾರೆ. ಹಳದಿ ಬಟ್ಟೆಯನ್ನು ಧರಿಸುತ್ತಾರೆ. ಇಂತಹವರ ಮನೆತನಕ್ಕೆ ವಗ್ಗೆ ಎಂದು
ಅಡ್ಡ ಹೆಸರು ಬಂದಿದೆ. ಬೊಮ್ಮಗೊಂಡನ ಅಡ್ಡ ಹೆಸರು ವಗ್ಗೆರೆಂದಿತ್ತು. ಮುಂದೆ ಶಿವಭಕ್ತರಾಗಿದ್ದರಿಂದ ಇವರಿಗೆ
ಬೊಮ್ಮಗೊಂಡೇಶ್ವರ ಎಂದು ಕರೆÀಯಲಾರಂಭಿಸಿದರು.
ಬೊಮ್ಮಗೊಂಡೇಶ್ವರ ಪವಾಡಗಳು :
14ನೇ ಶತಮಾನದಲ್ಲಿ ಬಹಮನಿ ಅರಸನಾದ ಅಹಮ್ಮದ ಶಾವಲಿ ಬಹಮನಿ ತನ್ನ ಸೈನ್ಯದೊಂದಿಗೆ ಬೇಟೆಯಾಡುತ್ತ ದಟ್ಟವಾದ ಕಾಡಿನಿಂದ ಕೂಡಿದ ಬೀದರ್ ಪ್ರದೇಶಕ್ಕೆ ಬಂದನು. ಅವನ ಜೊತೆಗೆ ಬೇಟೆ ನಾಯಿಗಳು ಕೂಡ ಬಂದಿದ್ದವು. ಅಡವಿಯಲ್ಲಿ ಸುತ್ತಾಡುತ್ತಿರುವಾಗ ಅವರ ಕಣ್ಣಿಗೆ ಮೊಲಗಳು ಕಾಣಿಸಿಕೊಂಡವು. ಅರಸನು ಅವುಗಳ ಮೇಲೆ ಬೇಟೆನಾಯಿಗಳನ್ನು ಛೂ ಬಿಟ್ಟನು. ಅಂಜಿ ಓಡದೆ ಬೇಟೆ ನಾಯಿಗಳನ್ನು ಸುತ್ತುವರಿದು ಸಾಯಿಸಿಬಿಟ್ಟವು. ಈ ವಿಚಿತ್ರ ಘಟನೆಯನ್ನು ಕಂಡ ಅರಸನು ತನ್ನ ಮುಖ್ಯಸ್ಥರನ್ನು ಕರೆಸಿ
ಚರ್ಚಿಸಿದನು. ಅವರೆಲ್ಲರೂ ಸೇರಿ ಯಾರ ಅಂಜಿಕೆ ಇಲ್ಲದೆ ಗಂಡು ಭೂಮಿ ಇದಾಗಿದೆ ಪ್ರಾಣಿಗಳಲ್ಲಿಯೇ ಇಷ್ಟೊಂದುಧೈರ್ಯ ಮತ್ತು ಶಕ್ತಿ ಇರಬೇಕಾದರೆ ಇಲ್ಲಿ ಜೀವಿಸಿರುವ ಮನಿಷ್ಯರಲ್ಲಿ ಅದೆಷ್ಟು ಶಕ್ತಿ ಇದ್ದಿರಬೇಕೆಂದು ಯೋಚಿಸಿದರು ಆದುದ್ದರಿಂದ ಈ ಪ್ರದೇಶಕ್ಕೆ ಬೇ-ಡರ್ ಎಂಬ ಹೆಸರಿನಿಂದ ಕರೆದರು. ಬೇ-ಡರ್ ಎಂದರೆ ಯಾರ ಅಂಜಿಕೆ ಇಲ್ಲದವರೆಂದರ್ಥ ಅರಸನು ಮತ್ತು ಸೈನಿಕರು ಕಾಡಿನಲ್ಲಿ ಸುತ್ತಾಡಿ ಆಯಾಸದಿಂದ ನೀರಡಿಸಿದರು. ನೀರು ಹುಡುಕಾಡಿದರು ಎಲ್ಲಿ ಕಾಣಲಿಲ್ಲ. ಅಲ್ಲಿ ಬೊಮ್ಮಗೊಂಡನು ಕುರಿಗಳನ್ನು ಕಾಯುತ್ತಾ ಅವುಗಳ ಕೂದಲಿನಿಂದ ನೂಲು ತೆಗೆಯಲು ತಕ್ಕಲಿ ತಿರುಗಿಸಿತ್ತಾ ನಿಂತಿದ್ದನು ಸÉೈನಿಕರು ಅವನ ಹತ್ತಿರ ಹೋಗಿ ನೀರಿರುವ ಸ್ಥಳದ ಬಗ್ಗೆ ವಿಚಾರಿಸಿದರು. ತಾನು ನಿಂತಲ್ಲೆ ನಿಂತು ಅಲ್ಲಿ ನೋಡಿ ಅಣತಿ ದೂರದಲ್ಲಿ ಒಂದು ಕಲ್ಲಿನ ಬಂಡೆ ಕಾಣಿಸುತ್ತಲಿದೆ. ಅದರ ಕೆಳಗೆ ಸಣ್ಣ ನೀರಿನ ಝರಿ ಕಾಣಿಸುತ್ತದೆ. ಬಂಡೆಗಲ್ಲನ್ನು ಸರಿಸಿ ನೀರು ಕುಡಿಯಬಹುದೆಂದು ಹೇಳಿದನು ಸೈನಿಕರು ಹೋಗಿ ಕೇಳಗಿದ್ದ ನೀರನ್ನು ಕಂಡರು ಮೇಲೆ ಮುಚ್ಚಿದ ಬಂಡೆಗಲ್ಲನ್ನು ಸರಿಸಲು ತಮ್ಮ ಶಕ್ತಿ ವಿನಿಯೋಗಿಸಿದರು ಆದರೆ ಆ ಕಲ್ಲು ಅಲುಗಾಡಲೇ ಇಲ್ಲ ಪುನಃ ಧನಗರನ ಹತ್ತಿರವೆ ಹೋಗಿ ಬಂಡೆಗಲ್ಲು ಸರಿಯದಾಗಿದೆ ಇದಕ್ಕೇನು ಉಪಾಯ ಎಂದು ಕೇಳಿದನು ಬೊಮ್ಮಗೊಂಡನು ಬಂಡೆ ಹತ್ತಿರ ಹೋಗಿ ತನ್ನ ಕೈಯಲ್ಲಿದ್ದ ವಕ್ರವಾದ ಬಡಿಗೆಯಿಂದ ಒಂದೆ ಕೈಯಿಂದ ಸರಿಸಿದನು. ಸೈನಿಕರು ಇದನ್ನು ಕಂಡ ಎರಡನೇ ವಿಚಿತ್ರ ಘಟನೆ ಇದಾಗಿತ್ತು. ತಾವು ನೀರು ಕುಡಿದು ತಮ್ಮ ಅರಸನಿಗೂ ನೀರು ಕುಡಿಸಿದರು. ಶೂರ ಸೈನಿಕರಿಂದ ಆಲಾರದ ಕೆಲಸ ಸಾಮಾನ್ಯ ಕುರುಬನು ಒಂದೇ ಕೈಯಿಂದ ಬಂಡೆ ಸರಿಸಿದ್ದನ್ನು ಅರಸನಿಗೆ ತಿಳಿಸಿದರು. ಅರಸನು ಬೊಮ್ಮಗೊಂಡನಿದ್ದ ಸ್ಥಳಕ್ಕೆ ಧಾವಿಸಿ ಬಂದು ಅವನನ್ನು ವಿಚಾರಿಸಿದನು. ಇದು ಶಿವನ ಕೃಪೆ ಎಂದು ಒಂದೇ ಮಾತಿನಲ್ಲಿ ತಿಳಿಸಿದರು. ಅವನ ಮಾತಿಗೆ ಅರಸನು ಪ್ರಸನ್ನನ್ನಾಗಿ ಏನಾದರು ಇನಾಮು
(ಬಹುಮಾನ) ಕೇಳಿಮ ಕೊಡುತ್ತೇನೆಂದು ಹೇಳಿದನು ಬೊಮ್ಮಗೊಂಡನು ಶಿವನು ಕೊಟ್ಟ (ಬಹುಮಾನ) ಇನಾಮಿನ ಮುಂದೆ ನಿನ್ನದ್ಯಾವ ಇನಾಮು ಎಂದು ಉತ್ತರಿಸಿದನು, ಆದರೂ ನನ್ನಿಂದ ಏನು ಬೇಕು ಬೇಡಿಕೋ ಎಂದು ಅರಸನು ಹೇಳಿದನು.
ಬೊಮ್ಮಗೊಂಡೇಶ್ವರನು ಸ್ವಂತ ಹಿತಕ್ಕಾಗಿ ಏನನ್ನೂ ಬೇಡದೆ ತಮ್ಮ ಕುಲ ಬಾಂಧವರಿಗೆ ಅನುಕೂಲವಾಗಲೆಂದು ಮೂರು ಇನಾಮುಗಳನ್ನು ಬೆಡಿಕೊಂಡುನು ಅವುಗಳಲ್ಲಿ.
- ಸರ್ಕಾರಿ ಜಮೀನು ಇರಲಿ ಅಥವಾ ಖಾಸಗಿ ಜಮೀನಿರಲಿ ಬಯಲು ಪ್ರದೇಶದಲ್ಲಿ ಕುರಿ ಮೇಯಿಸಿದರೆ ಯಾರು ಅಡ್ಡಿಪಡಿಸಬಾರದು.
- ಕುರಿಗಳನ್ನು ಮಾರಾಟ ಮಾಡಿದರೆ ಯಾರೂ ತೆರಿಗೆ ವಸೂಲು ಮಾಡಬಾರದು.
- ಸತ್ತ ಕುರಿಯನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡುವ ಅಧಿಕಾರ ಇರಬೇಕು
ಈ ಮೂರು ಶರತ್ತುಗಳಿಗೆ ಅರಸನು ಒಪ್ಪಿಕೊಂಡು ಒಂದು ಸನದನ್ನು ಬರೆದಿಕೊಟ್ಟಿದ್ದನೆಂಬ ಐತಿಹ್ಯ ಇದೆ. ಈ ಕಾರಣದಿಂದಲೇ ಧನಗರ (ಕುರುವ)ರು ಎಲ್ಲಿ ಬೇಕಾದಲ್ಲಿ ತಮ್ಮ ಕುರಿಗಳನ್ನು ಈವಾಗಲು ಮೇಯಿಸುವುದನ್ನು ಕಾಣಬಹುದು ಬೊಮ್ಮಗೊಂಡನು ಅರಸನಿಂದ ಪಡೆದ ಈ ಮೂರು ಇನಾಮುಗಳು ಇನ್ನು ಚಾಲ್ತಿಯಲ್ಲಿವೆ.
ಪವಾಡ
ಬೀದರ ಪ್ರದೇಶದ ನೀರು ಮತ್ತು ಹವಾಗುಣ ಆರೋಗ್ಯಕರವಾಗಿದ್ದನ್ನು ಅರಿತ ಅಹಮ್ಮದ್ ಶಾ ಬಹುಮನಿ ಅರಸನು ಕ್ರಿ. ಶ.1422ರಲ್ಲಿ ರಾಜಧಾನಿ ಗುಲ್ಬರ್ಗಾದಿಂದ ಬೀದರ್ ನಗರಕ್ಕೆ ವರ್ಗಾಹಿಸಿದನು. ಬೀದರ್ ನಗರದ ರಕ್ಷಣೆಗಾಗಿ ಹೊಸ ಕೋಟೆ ಕಟ್ಟಿಸಿದನು ಕೋಟೆಯೊಳಗೆ ಮತೊಂದು ಕೋಟೆ ಇದೆ ಅದು ವಾರಂಗಲ್ಲಿನ ಅರಸನು ಕಟ್ಟಿದ ಸಣ್ಣ ಕೋಟೆ ಇದಕ್ಕೆ ಜನರು ಪುರಾಣ ಖಿಲ್ಲಾ (ಒಳಕೋಟೆ) ಎಂದು ಕರೆಯುತ್ತಾರೆ. ಈವಾಗಲೂ ಇದಕ್ಕೆ ಒಳ ಕೋಟೆ ಎಂಬ ಹೆಸರಿನಿಂದಲೇ ಕರೆಯುತ್ತಾರೆ.
ಒಳಕೋಟೆಯಲ್ಲಿ ಪ್ರಸಿದ್ಧ ಪಡೆದ ಬೊಮ್ಮಗೊಂಡೇಶ್ವರನ ಕೆರೆ ಇದೆ, ಕೆರೆಯ ಉತ್ತರಕ್ಕೆ ಸ್ವಲ್ಪ ದೂರದಲ್ಲಿ ವೀರ ಸಂಗಯ್ಯನ ಮಂದಿರವಿದೆ ಮಂದಿರ ಸುತ್ತ ತಗ್ಗು ಪ್ರದೇಶವಿದ್ದು, ಗುಡ್ಡದಂತೆ ಎತ್ತರ ಕಾಣುವ ಪ್ರದೇಶದಲ್ಲಿ ಮಂದಿರ ಕಟ್ಟಲಾಗಿದೆ. ಇದನ್ನು ಕೆಡವಲು ಅರಸನ ಸಂಚು ಹೂಡಿದನು. ಈ ಮಂದಿರ ರಕ್ಷಣೆಗೆ ಬೊಮ್ಮಗೊಂಡನ ರುಮಾಲು ಹಾವಿನ ರೂಪದಲ್ಲಿ ಬಂದು ರಕ್ಷಣೆ ಮಾಡಿದೆ ಎಂದು ಹೇಳುತ್ತಾರೆ. ಬೊಮ್ಮಗೊಂಡನು ವೀರಸಂಗಯ್ಯನ ಪರಮ ಭಕ್ತನಾಗಿದ್ದನು ವೀರಸಂಗಯ್ಯ ಬೀದರದ
ಅರಸನಿದ್ದ ಕಾಲಕ್ಕೆ ಬೊಮ್ಮಗೊಂಡನು ಆರ್ಥಿಕ ಸಹಾಯ ಮಾಡಿದನೆಂದು ಜನಪದದಿಂದ ತಿಳಿದುಬರುತ್ತದೆ. ಅದರ ಅಹಮ್ಮದ್ಷಾಹವಲಿ ಬಹುಮನಿ ಬೀದರ್ ಕೋಟೆಯಲ್ಲಿ ತಖ್ತ ಮಹಲ್ ಕಟ್ಟುವಾಗ ಅದರ ತಳಪಾಯದಲ್ಲಿ ಬಸುರಿ ದಲಿತ ಮಹಿಳೆಯಾದ ದೇವಮ್ಮ ಹಾಗೂ ತಮ್ಮ ಸುಲೇವಾನ ಇಬ್ಬರನ್ನು ಕಟ್ಟದೊಳಗೆ ಮುಚ್ಚಿಟ್ಟು ಕಟ್ಟಿದ್ದರು. ಕಮಾನಿನ ಆಕಾರದ ಕಟ್ಟಡದಲ್ಲಿ ಒಳಗೆ ದೇವಮ್ಮನ ಪ್ರಸೂತಿ ಆಗಿತ್ತು. ತನ್ನ ಮಗು ಮಲಗಲು ಜೋಗುಳ ಹಾಡು ಹಾಡಿದ ಧ್ವನಿ ಪಕ್ಕದಲ್ಲಿ ಕುರಿ ಕಾಯುವ ಬೊಮ್ಮಗೊಂಡೇಶ್ವರನು ಕೇಳಿಸಿಕೊಂಡನು. ಸುಮ್ಮನಿರದೆ ಅಣ್ಣನ ಸೂಳಿ ಪತಿವರ್ತೆಯಂತೆ ಹಾಡುತ್ತಿದ್ದಾಳೆ ಎಂದು ಅಪವಾದಿಸಿದನು. ಇದನ್ನು ಕೇಳಿಸಿಕೊಂಡ ದೇವಮ್ಮ ಸಿಟ್ಟಾಗಿ ನೀನು ಕಲ್ಲಾಗಿ ನಿನ್ನ ಕುರಿಗಳು ಕೂಡ ಕಲ್ಲಾಗಲಿ ನಿನ್ನ ತಲೆಯ ಮೇಲಿನ ರುಮಾಲು ಹಾವಾಗಿ ಹರಿಯಲಿ ಎಂದು ಶಾಪ ಕೊಟ್ಟಳು. ಅವಳ ಶಾಪದಿಂದ ಕರೆಯ ಮೇಲಿದ್ದ ಕಲ್ಲುಗಳೆಲ್ಲ ಕುರಿಗಳಾದವು ಅವನು ಕಲ್ಲಾಗಿದ್ದ ಮೂರ್ತಿ ಮಣ್ಣಿನಲ್ಲಿ ಹೂತು ಹೋಗಿರುತ್ತದೆ. ಅವನ ರುಮಾರು ಮಾತ್ರ ಹಾವಾಗಿ ಹರಿದಾಡುತ್ತದೆ ಎಂದು ಹೇಳುತ್ತಾರೆ. ಕಿಲ್ಲೆಯೊಳಗೆ ಹಿಂದು ದೇವಾಲಯ ಇರಬಾರದೆಂಬ ಕಾರಣದಿಂದ ಬಾದಶಹನು ಮಂದಿರ ಕೆಡವಿ ಹಾಕಲು ಸೈನಿಕರಿಗೆ ಆಜ್ಞೆ ಮಾಡಿದನು.ಮಂದಿರ ಕೆಡವಲು ಸೈನಿಕರು ಬಂದಾಗ ಬೊಮ್ಮಗೊಂಡನ ಉದ್ದವದ ರುಮಾಲುದೊಡ್ಡ ಹಾವಿನ ರೂಪದಲ್ಲಿ ಎದರು ಬಂದು ಭುಸುಗುಟ್ಟುತ್ತಿತು. ಹಾವನ್ನು ಕಂಡ
ಸೈನಿಕರು ಅರಸನಿಗೆ ತಿಳಿಸಿದರು. ಮರುದಿನ ಆ ಸ್ಥಳಕ್ಕೆ ತಾನೇ ಬರುವುದಾಗಿ ತಿಳಿಸಿದನು. ಅಂದೇ ರಾತ್ರಿ ಅರಸನ ಕನಸಿನಲ್ಲಿ ಆ ಹಾವು ಬಂದು ಮಂದಿರ
ಕೆಡವಿದರೆ ನಿನ್ನ ವಂಶವನ್ನೇ ನಾಶ ಮಾಡುತ್ತೇನೆಂದು ಹೇಳಿ ಮಾಯಾವಾಯಿತು. ಈ ಕಾರಣದಿಂದ ಅರಸನು ಮಂದಿರ ಕೆಡವಿ ಹಾಕಲಿಲ್ಲ ಹೀಗೆ ವೀರಸಂಗಯ್ಯನ
ಮಂದಿರದ ರಕ್ಷಣೆ ಬೊಮ್ಮಗೊಂಡೇಶ್ವರಮ ದೈವಿಭಕ್ತಿಯ ಪವಾಡ ಇದಾಗಿತ್ತು. ಬೊಮ್ಮಗೊಂಡನ ಕೆರೆಯ ದಕ್ಷಿಣಕ್ಕೆ ದಲಿತ ದೇವಮ್ಮನಿಗೆ ಆಹುರಿಕೊಟ್ಟ ಕಟ್ಟಡ
ಈವಾಗಲೂ ಸುಸ್ಥಿತಿಯಲ್ಲಿ ನಿಂತಿದೆ. ಈ ಕಟ್ಟಡಕ್ಕೆ ಭೀಮನಗರದ ನಿವೃತ್ತ ಶಿಕ್ಷಕಕಿಶನರಾದ ದೀನೆ ಮನೆತನವರು ಇಂದಿಗೂ ಪೂಜೆ ನಡೆಸಿಕೊಂಡು ಬರುತ್ತ್ತಿದ್ದಾರೆ
ಬೊಮ್ಮಗೊಂಡನು ಅರಸನ ಸೈನಿಕನಿಗೆ ಹರಿಯುವ ಸಣ್ಣ ಝರಿ ನೀರಿನ ಸುಳಿವು ತೋರಿಸಿ ನೀರು ಕುಡಿಸಿದನು. ಆ ಝರಿಯ ನೀರೆ ಹರಿದು ಈಗಿದ್ದ
ಬೊಮ್ಮಗೊಂಡನ ಕೆರೆಗೆ ಬಂದು ಸೇರುತ್ತದೆ. ಅಲ್ಲಿನ ಜನರು ಈ ನೀರನ್ನು ಹೊಲ ಗದ್ದೆ ಮತ್ತು ತೋಟಗಳಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ.
ಕೆರೆಯ ನೀರು ಅಂದಿನಿಂದ ಇಲ್ಲಿಯವರೆಗೆ 600 ವರ್ಷ ಕಳೆದರು ಇಂದು ಸಾರಿಯು ಬತ್ತಿ ಹೋಗಿರುವುದಿಲ್ಲ, ಇದು ಬೊಮ್ಮಗೊಂಡನ ಪವಾಡವೇ ಸರಿ.