ಕುರುಬ ಸಮುದಾಯದ ಸಮೃದ್ಧಿಗಾಗಿ ಸಮಾನ ಮನಸ್ಕ ಸಮೂಹ ಗುರು-ಹಿರಿಯರ ಆಶೀರ್ವಾದದೊಂದಿಗೆ ಚಿಂತನ-ಮಂಥನಗಳ ನಂತರ ಹಾಲುಮತ ಮಹಾಸಭಾ ಎಂಬ ಹೆಸರಿನಲ್ಲಿ ನೋಂದಣಿಯಾಯಿತು. 2015 ಮೇ 17ನೇ ತಾರೀಖಿನಂದು, ಬೆಂಗಳೂರಿನ ಕೆ. ಆರ್. ರಸ್ತೆಯ ಶಿಕ್ಷಕರ ಸದನದಲ್ಲಿ ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜೀಯವರು, ಹೊಸದುರ್ಗದ ಕನಕ ಗುರುಪೀಠ ಶಾಖಾಮಠದ  ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಜೀಯವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಕೆ. ಎಸ್. ಈಶ್ವರಪ್ಪನವರು, ವಿಧಾನಪರಿಷತ್ ಸದಸ್ಯರಾದ ಶ್ರೀ ಹೆಚ್. ಎಂ. ರೇವಣ್ಣನವರು, ಖಾದಿ ಮತ್ತು ಗ್ರಾಮೋದ್ಯಮದ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಚಿಂಗಳೆಯವರ ಉಪಸ್ಥಿತಿಯಲ್ಲಿ ಸಮಾಜದ ಅಪಾರ ಬಂಧುಗಳ ಸಮಕ್ಷಮದಲ್ಲಿ ಹಾಲುಮತ ಮಹಾಸಭಾದ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಹಾಲುಮತ ಮಹಾಸಭಾದ ಮೊದಲ ಗುರಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಂಘಟಿಸುವುದು. ಈ ಸಮೂಹದಲ್ಲಿ ತೊಡಗಿಸಿಕೊಂಡಿರುವವರೆಲ್ಲರೂ ವೈಯಕ್ತಿಕವಾಗಿ ಕಾಯಕಗಳನ್ನು ಮಾಡಿಕೊಂಡು, ಅದರೊಂದಿಗೆ ಸಮಯವನ್ನೂ ಮಾಡಿಕೊಂಡು, ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕಳೆದ 5 ವರ್ಷಗಳ ಮಹಾಸಭಾದ “ಅವಲೋಕನ”ವನ್ನು ನೋಡಿದಾಗ, ಕುರುಬ ಸಮಾಜದ ಧ್ವನಿಯಾಗಿ, ಸಮಾಜದ ಪರವಾಗಿ ಹಲವಾರು ಕೆಲಸಗಳನ್ನು ಮಾಡಿದೆ. ಈ ಸಮೂಹದಲ್ಲಿ ಪದಾಧಿಕಾರಿಗಳೆಲ್ಲರ ಮನಸ್ಸುಗಳು ಒಂದೇ ರೀತಿ ಸಮಾಜದ ಸಮೃದ್ಧಿಗಾಗಿಯೇ ಯೋಚಿಸುತ್ತಿರುತ್ತದೆ. ಮಹಾಸಭಾ ಇದುವರೆವಿಗೂ ಶೇ. 10% ಸಹ ಗುರಿ ಮುಟ್ಟಿಲ್ಲ. ಸಮೃದ್ಧ ಸಮಾಜದ ಕನಸನ್ನೊತ್ತು ಗುರಿ ಮುಟ್ಟುವತ್ತ ಹೆಜ್ಜೆಯನ್ನಿಡುತ್ತಾ ಸಾಗುತ್ತಿದೆ.
ಹಾಲುಮತ ಮಹಾಸಭಾ ನಡೆದು ಬಂದ ಹಾದಿಯೇ ಸಂಘಟನೆಗೆ ಆಕ್ಸಿಜನ್. ಉದ್ಘಾಟನೆಯಾದ ದಿನದಿಂದಲೂ ಈ ಕ್ಷಣದವರೆವಿಗೂ ಬಹಳಷ್ಟು ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಲೇ ಬರುತ್ತಿದೆ. ನಂದಗಢದಲ್ಲಿ ಕ್ರಾಂತಿವೀರನ ಕೈಗೆ “ಕಂಕಣ”ಕಟ್ಟಿ ಅಂದು ನಾವು ಬೇಡಿಕೊಂಡಿದ್ದು, “ರಾಯಣ್ಣ ನಿನ್ನ ಆರ್ಶೀವಾದದಿಂದ ನಿನ್ನ ಮುಂದೆ ಪ್ರತಿಜ್ಞೆ ಮಾಡಿ ನಮ್ಮ ಹಾಲುಮತ ಸಮಾಜದ ಜಾಗೃತಿ ಮತ್ತು ಸಂಘಟನೆಗೆ ಈ ಸಮೂಹ ಮುಂದಾಗಿದೆ. ಈ ಸಮೂಹದ ಗುರಿ ಮುಟ್ಟಲು ನೀನು ಸದಾ ನಮ್ಮ ಜೊತೆ ಇರಬೇಕು” ರಾಯಣ್ಣನವರ ಆಶೀರ್ವಾದದಿಂದ ಎಂತಹದ್ದೇ ಮಾನಸಿಕ ನೋವುಗಳು ಎದುರಾದರೂ ಮನಸ್ಸಿನಲ್ಲಿಟ್ಟುಕೊಂಡು, 5 ವರ್ಷಗಳ ಪಯಣ ಮಹಾಸಭಾಕ್ಕೆ ಚೈತನ್ಯ ನೀಡಿದೆ.
* ಆಗಸ್ಟ್ 9 ರಂದು ಗೋಕಾಕ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಸಭೆಯಲ್ಲಿ “ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಜೊತೆಗೆ “ರಾಯಣ್ಣೋತ್ಸವ”ವನ್ನು ರಾಜ್ಯವ್ಯಾಪಿ ಆಚರಿಸಬೇಕೆಂಬ ನಿರ್ಣಯ ಮಾಡಲಾಯಿತು. ರಾಜ್ಯಾವ್ಯಾಪಿ ರಾಯಣ್ಣೋತ್ಸವ ಅದ್ಧೂರಿಯಾಗಿ ನಡೆಸುತ್ತಿದ್ದಾರೆ ಸಂಗೊಳ್ಳಿ ರಾಯಣ್ಣರ ಶಕ್ತಿಗಳು. ಹಾಗೂ ಜನವರಿ 26ರಂದು ಗಣರಾಜ್ಯೋತ್ಸವದ ದಿನದಂದು ಬ್ರಿಟಿಷರಿಂದ ಗಲ್ಲಿಗೇರಿದ ಹುತಾತ್ಮ ಸಂಗೊಳ್ಳಿ ರಾಯಣ್ಣರ ಬಲಿದಾನದ ನೆನಪಿಗಾಗಿ ಜನವರಿ 26ರಂದು “ರಾಯಣ್ಣರ ಬಲಿದಾನ ದಿವಸ”ವನ್ನಾಗಿ ಗೌರವಪೂರ್ವಕವಾಗಿ ಆಚರಿಸಲಾಗುತ್ತಿದೆ. ಈ ಆಚರಣೆಗಳು ದೇಶದ ಹಬ್ಬಗಳು. ಅದರ ಜೊತೆ ಸೂರ್ಯಚಂದ್ರರಿರುವಷ್ಟು ದಿನಗಳು “ರಾಯಣ್ಣೋತ್ಸವ” ಮತ್ತು “ರಾಯಣ್ಣರ ಬಲಿದಾನ ದಿವಸ” ನಿರಂತರವಾಗಿರುತ್ತದೆ.  ಕರ್ನಾಟಕ ರಾಜ್ಯ ಸರ್ಕಾರದ ಮುಂದೆ ಆಗಸ್ಟ್ 15 ಮತ್ತು ಜನವರಿ 26 ರಂದು ರಾಯಣ್ಣನವರ ಭಾವಚಿತ್ರವನ್ನು ಎಲ್ಲಾ ಶಾಲಾ ಕಾಲೇಜುಗಳು, ಸರ್ಕಾರಿ ಇಲಾಖೆಗಳಲ್ಲಿ ಇಡಬೇಕೆಂಬ ಬೇಡಿಕೆ ಇಟ್ಟಿದ್ದು , ರಾಯಣ್ಣನವರ ಅಭಿಮಾನಿಗಳ ಬೇಡಿಕೆಯನ್ನು ಪುರಸ್ಕರಿಸಿ, ಮಾನ್ಯ ಮುಖ್ಯಮಂತ್ರಿ ಶ್ರೀ ಎಸ್. ಆರ್. ಬೊಮ್ಮಾಯಿಯವರು
ದಿನಾಂಕ 14-08-2021ರಂದು ಸಂಗೊಳ್ಳಿ ರಾಯಣ್ಣನವರ ಜಯಂತಿ ಹಾಗೂ ರಾಯಣ್ಣನವರ ಬಲಿದಾನ ದಿವಸವನ್ನು ಜನವರಿ 26ರಂದು ಆಚರಿಸಬೇಕೆಂದು ಅಧಿಕೃತವಾಗಿ ಆದೇಶ ಮಾಡಿದ್ದಾರÉ.

* ಹಾಲುಮತ ಮಹಾಸಭಾ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಮಾನ ಮನಸ್ಕ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಪ್ರವಾಸ ಮಾಡುತ್ತಿದೆ.
ಸಮಾಜದ ಧ್ವನಿಯಾಗಿ, ಹಲವು ಜಿಲ್ಲೆಗಳಲ್ಲಿ ಯುವ ಜಾಗೃತಿ ಶಿಬಿರಗಳು, ಮುಧೋಳದಲ್ಲಿ ನಮ್ಮಿಂದಲೇ ನಮ್ಮ ಗಣತಿ,
* ಕನ್ನಡ ಪಠ್ಯಪುಸ್ತಕದಲ್ಲಿ ಸಂಗೊಳ್ಳಿ ರಾಯಣ್ಣನವರ ಜೀವನ ಚರಿತ್ರೆಯನ್ನು ಅಳವಡಿಸಲು ಸಾಹಿತಿ ಬರಗೂರು ರಾಮಚಂದ್ರಪ್ಪನವರಿಗೆ ರಾಜ್ಯದ ಜನರಿಂದ ವಿನಂತಿ ಮಾಡಿಸಿ, ಪಠ್ಯಪುಸ್ತಕದಲ್ಲಿ ಅಳವಡಿಸುವಲ್ಲಿ ಹಾಲುಮತ ಮಹಾಸಭಾ ಯಶಸ್ವಿಯಾಯಿತು.
* ಕುರುಬ ಸಮಾಜದ ದಶಕಗಳ ಬೇಡಿಕೆಯಾದ ಎಸ್. ಟಿ. ಮೀಸಲಾತಿಯ ಬಗ್ಗೆ ನವೆಂಬರ್ 15, 2015ರಂದು ಬಾಗಲಕೋಟೆಯಲ್ಲಿ ಸಂವಾದ ಸಭೆಗಳನ್ನು ರಾಜ್ಯಾದ್ಯಂತ ಮಾಡಿ, ನಂತರ ನವೆಂಬರ್ 6, 2016ರಂದು ಬೆಳಗಾವಿ ನಗರದಲ್ಲಿ ಎಸ್. ಟಿ. ಮೀಸಲಾತಿಗಾಗಿ
“ಕುರುಬರ ಜಾಗೃತಿ ಸಮಾವೇಶ” ವನ್ನು ಸಾವಿರಾರು ಸಮಾಜದ ಬಂಧುಗಳ ನಡುವೆ ಕುರುಬರ ಎಸ್.ಟಿ. ಮೀಸಲಾತಿ ಹಕ್ಕನ್ನು ಮಂಡಿಸಲಾಯಿತು.
ಜನಮತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಅಂದಿನ ಮುಖ್ಯಮಂತ್ರಿ ಮಾನ್ಯಶ್ರೀ ಸಿದ್ದರಾಮಯ್ಯನವರು ಬೆಳಗಾವಿ ಅಧಿವೇಶನದ ಸಮಯದಲ್ಲಿ ಹಾಲುಮತ ಮಹಾಸಭಾದ ತಂಡದ ಜೊತೆ ಚರ್ಚೆ ಮಾಡಿದರು, ಮುಂದುವರೆದು ಮೇ 29ರಂದು ಮುಖ್ಯಮಂತ್ರಿಗಳ ಗೃಹಕಛೇರಿ ಕೃಷ್ಣಾದಲ್ಲಿ ರಾಜ್ಯ ಪದಾಧಿಕಾರಿಗಳ ಜೊತೆ ಮತ್ತೊಮ್ಮೆ ಎಸ್.ಟಿ. ಮೀಸಲಾತಿಯ ಬಗ್ಗೆ ಸುದೀಘ್ ಚರ್ಚೆ ನಡೆಸಿದರು.
ನಂತರ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಸಹಕಾರ ಸಚಿವರಾದ ಶ್ರೀ ಬಂಡೆಪ್ಪ ಕಾಶೆಂಪೂರರವರ ಜೊತೆ ಎಸ್.ಟಿ. ಮೀಸಲಾತಿ ಸಂಬಂಧ
ಸುದೀರ್ಘ ಸಭೆ ನಡೆಸಲಾಯಿತು.
ಸಮ್ಮಿಶ್ರ ಸರ್ಕಾರವು ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡುವ ಸಂಬಂಧ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ತೀರ್ಮಾನಿಸಿ, ಅಧ್ಯಯನ ತಂಡವನ್ನು ರಚಿಸಿ, ಹಣವನ್ನೂ ಬಿಡುಗಡೆ ಮಾಡಿದೆ. ಇದರ ಸಂಬಂಧ ರಾಜ್ಯದ 26 ಜಿಲ್ಲೆಗಳಲ್ಲೂ ಕುಲಶಾಸ್ರ್ತೀಯ ಅಧ್ಯಯನದ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ಸಭೆಗಳ ಮೂಲಕ ಜಾಗೃತಿ ಮೂಡಿಲಾಗುತ್ತಿದೆ
* ಶ್ರೀಕಾಗಿನೆಲೆಯಲ್ಲಿ ಕುರುಬರ ಮಹಾಧಿವೇಶ ಕಾರ್ಯಕ್ರಮದಲ್ಲಿ ರಾಜ್ಯದ 30 ಜಿಲ್ಲೆಗಳಿಂದ ಸಮಾಜದ ಬಂಧುಗಳು, ಯುವಕರು ಭಾಗವಹಿಸಿದ್ದರು.
* ಪ್ರಪ್ರಥಮಬಾರಿಗೆ ಉಡುಪಿಯಲ್ಲಿ ರಾಜ್ಯಮಟ್ಟದ ಶ್ರೀ ಕನಕದಾಸರ ಜಯಂತೋತ್ಸವ ಮತ್ತು ಜಗದ್ಗುರುಗಳ ಪುರಪ್ರವೇಶ ಕಾರ್ಯಕ್ರಮವನ್ನು
ಅದ್ಧೂರಿಯಗಿ ಮಾಡಲಾಯಿತು. ಪೇಜಾವರಶ್ರೀಗಳು ಮತ್ತು ಕಾಗಿನೆಲೆಶ್ರೀಗಳು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜವಾಬ್ದಾರಿಯುತವಾಗಿ ಹಾಲುಮತ ಮಹಾಸಭಾ ಮುನ್ನಡೆಯುತ್ತಿದೆ.
ಯಾವುದೇ ಸಂಘಟನೆ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕಾದರೆ ಪಾರದರ್ಶಕತೆ ಮುಖ್ಯವಾಗುತ್ತದೆ. ಹಾಲುಮತ ಮಹಾಸಭಾ ಸಮಾಜಕ್ಕೆ ಸಂಬಂಧಪಟ್ಟ ಯಾವುದೇ ವಿಷಯಗಳನ್ನು ಮುಚ್ಚಿಡದೇ ಸಾಮಾಜಿಕ ಜಾಲತಾಣಗಳ ಮೂಲಕ ಬಂಧುಗಳಿಗೆ ತಲುಪಿಸುವಂತಹ ಪ್ರಾಮಾಣಿಕ
ಪ್ರಯತ್ನ ಮಾಡುತ್ತಿದೆ. ಹಣಕಾಸು ವಿಷಯದಲ್ಲೂ ಸಹ 06-11-2016ರಲ್ಲಿ ಬೆಳಗಾವಿಯಲ್ಲಿ ನಡೆದ ಎಸ್.ಟಿ. ಮೀಸಲಾತಿ “ ಕುರುಬರ ಜಾಗೃತಿ ಸಮಾವೇಶ”ದಲ್ಲಿ ಬಂದಂತಹ ದೇಣಿಗೆ ಮತ್ತು ವೆಚ್ಚಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಹಾಲುಮತ ಮಹಾಸಭಾ ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆಯೂ ಸಹ ಪಾರದರ್ಶಕವಾಗಿ ಸಮಾಜದ ಮುಂದೆ ಇಡಲಾಗುತ್ತದೆ.

ಮಹಾಸಭಾ ಯಾರನ್ನೂ ಓಲೈಸದೇ, ತನ್ನದೇ ಹಾದಿಯಲ್ಲಿ, ಆತುರ ಪಡದೇ ವ್ಯವಸ್ಥಿತವಾಗಿ ತನ್ನ ಇತಿಮಿತಿಯಲ್ಲಿ ಸಮಾಜದ ಕೆಲಸಗಳನ್ನು ಮಾಡುತ್ತಿದೆ.
ಕುರುಬ ಸಮಾಜದ ಸಂಘಟನೆಗಾಗಿ ಪ್ರಜ್ಞಾವಂತ ಯುವಕರಿಗೆ ಸಂಘಟನೆ ಜವಾಬ್ದಾರಿಯನ್ನು ನೀಡಲಾಗುತ್ತಿದೆ.
ಸಮಾಜದ ಜಾಗೃತಿಗಾಗಿ “ಶ್ರೀಕನಕ ಒಡ್ಡೋಲಗ”ದ ಮೂಲಕ ಗ್ರಾಮಗಳಿಗೆ ತಲುಪುವ ಪ್ರಯತ್ನಗಳು ಸಹ ಸಾಗುತ್ತಿವೆ.
ಹಾಲುಮತ ಮಹಾಸಭಾ ಆನ್‍ಲೈನ್ ಮತ್ತು ಆಫ್‍ಲೈನ್‍ನ ಮೂಲಕ ಸದಸ್ಯತ್ವವನ್ನು ಸ್ವೀಕರಿಸುತ್ತಿದೆ.
2015 ರಿಂದ 2021ರ ವರೆವಿಗೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ನೋವು-ನಲಿವುಗಳನ್ನು ಸಮಾಜದ ಮುಂದೆ ಪಾರದರ್ಶಕವಾಗಿ ಇಡುತ್ತಾ ಸಾಗುತ್ತಿದೆ.
ಕುರುಬ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಇತರೆ ಸಮಾಜಗಳಿಗಿಂತ ಎತ್ತರಕ್ಕೆ ಉನ್ನತಿಗೊಳ್ಳಬೇಕೆಂಬ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ. ಸಮಾಜದ ಬಂಧುಗಳಿಂದ ಸಲಹೆ ಮತ್ತು ಸಹಕಾರ ಸದಾ ಇರಲೆಂದು ಅಶಿಸುತ್ತೇವೆ.
 

ನಿಮ್ಮ ಸಮಾಜದ ಬಂಧು,
ರುದ್ರಣ್ಣ ಗುಳಗುಳಿ

ರಾಜ್ಯಾಧ್ಯಕ್ಷರು,
ಹಾಲುಮತ ಮಹಾಸಭಾ 9900256602
ರಾಜ್ಯ ಸಮಿತಿಯ ಪದಾಧಿಕಾರಿಗಳು,
ಜಿಲ್ಲಾ ಸಮಿತಿಗಳ,
ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳು.
 
 

By admin

Leave a Reply

Your email address will not be published. Required fields are marked *

error: Content is protected !!